ಬೆಂಗಳೂರು : ಲೋಕಸಭಾ ಚುನಾವಣೆಯ ಕಾವು ಏರತೊಡಗಿರುವಂತೆಯೇ ಬಿಜೆಪಿಯನ್ನು ತೊರೆದು ಕಾಂಗ್ರೆಸ್ ಸೇರಬಯಸುವ ಮತ್ತು ಕಾಂಗ್ರೆಸ್ ತೊರೆದು ಬಿಜೆಪಿ ಸೇರಬಯುವ ಅತೃಪ್ತ, ಅಸಮಾಧಾನಿತರ ದಂಡು ಇದೀಗ ತಮ್ಮ ರಾಜಕೀಯ ಮಹಾ ಜಿಗಿತಕ್ಕೆ ಸಿದ್ಧವಾಗುತ್ತಿದ್ದಾರೆ.
ಬಿಜೆಪಿಯ ವಿಧಾನ ಪರಿಷತ್ ಸದಸ್ಯ ಕೆ ಬಿ ಶಾಣಪ್ಪ, ಮಾಜಿ ಸಚಿವ ಬಾಬುರಾವ್ ಚೌವ್ಹಾಣ್, ಗುರುಮಿಠಕಲ್ ಬಿಜೆಪಿ ಮುಖಂಡ ಶ್ಯಾಮರಾವ್ ಪ್ಯಾಟಿ ಅವರು ಬಿಜೆಪಿ ತೊರೆಯುವ ಸಿದ್ಧತೆಯಲ್ಲಿದೆ ಎಂದು ಮಾಧ್ಯಮ ವರದಿಗಳು ಹೇಳಿವೆ.
ಇದೇ ರೀತಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರಲು ಆ ಪಾಳಯದ ಪ್ರಭಾವೀ ನಾಯಕರು ಸಿದ್ಧರಾಗುತ್ತಿದ್ದಾರೆ ಎಂದು ಮಾಧ್ಯಮ ವರದಿ ತಿಳಿಸಿದೆ. ಕಾಂಗ್ರೆಸ್ ನಿಂದ ಉಮೇಶ್ ಜಾಧವ್ ಈಗಾಗಲೇ ಬಿಜೆಪಿಗೆ ಬಂದಿದ್ದಾರೆ; ಇವರನ್ನು ಅನುಸರಿಸಿ ಈಗಿನ್ನು ರಮೇಶ್ ಜಾರಕಿ ಹೊಳಿ, ನಾಗೇಂದ್ರ ಮಹೇಶ್ ಕುಮಟಹಳ್ಳಿ ಇವರು ಕೂಡ ಬಿಜೆಪಿಗೆ ಸೇರುವ ಇಚ್ಛೆ ಹೊಂದಿರುವುದಾಗಿ ಮಾಧ್ಯಮ ವರದಿಗಳು ತಿಳಿಸಿವೆ.
ಇದೇ ರೀತಿ ಎ ಮಂಜು ಅವರು ಕೂಡ ಬಿಜೆಪಿಗೆ ಸೇರುವ ಹಂಬಲ ಹೊಂದಿರುವುದಾಗಿ ವರದಿಗಳು ತಿಳಿಸಿವೆ.
ಕಲಬುರಗಿಯಲ್ಲಿ ಉಮೇಶ್ ಜಾಧವ್ ಅವರಿಗೆ ಸ್ಪರ್ಧಿಸಲು ಬಿಜೆಪಿ ಅವಕಾಶ ಕಲ್ಪಿಸಿರುವ ಕಾರಣಕ್ಕೆ ಅಸಮಾಧಾನ ಹೊಂದಿರುವರೆನ್ನಲಾದ ಕೆ ಬಿ ಶಾಣಪ್ಪ ಅವರು ಬಿಜೆಪಿ ತೊರೆಯಲು ಬಯಸಿರುವುದಾಗಿ ವರದಿ ತಿಳಿಸಿವೆ.
ಶ್ಯಾಮರಾವ್ ಪ್ಯಾಟಿ ಅವರು ಮಾರ್ಚ್ 18ರಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರ ಸಮ್ಮುಖದಲ್ಲಿ ಕಾಂಗ್ರೆಸ್ ಸೇರಲಿದ್ದಾರೆ ಎಂದು ವರದಿಗಳು ತಿಳಿಸಿವೆ.