Advertisement

ಲವ್‌ ಜೆಹಾದ್‌: ಅಂಶಗಳಿಗೆ ತಡೆ

12:03 AM Aug 20, 2021 | Team Udayavani |

ಅಹ್ಮದಾಬಾದ್‌: ಗುಜರಾತ್‌ ಸರಕಾರ ಜಾರಿಗೊಳಿಸಿದ ಲವ್‌ ಜೆಹಾದ್‌ ತಡೆ ಕಾಯ್ದೆಯ ಕೆಲವು ಅಂಶಗಳಿಗೆ ಹೈಕೋರ್ಟ್‌ ಮಧ್ಯಾಂತರ ತಡೆಯಾಜ್ಞೆ ನೀಡಿದೆ. ಮುಖ್ಯ ನ್ಯಾಯಮೂರ್ತಿ ವಿಕ್ರಮ್‌ ನಾಥ್‌ ಮತ್ತು ನ್ಯಾ| ಬಿರೇನ್‌ ವೈಷ್ಣವ್‌ ಅವರನ್ನೊಳಗೊಂಡ ನ್ಯಾಯಪೀಠ ಗುರುವಾರ ಈ ಆದೇಶ ನೀಡಿದೆ.

Advertisement

ಗುಜರಾತ್‌ ಧಾರ್ಮಿಕ ಸ್ವಾತಂತ್ರ್ಯ (ತಿದ್ದುಪಡಿ) ಕಾಯ್ದೆ 2021ರಲ್ಲಿ ಉಲ್ಲೇಖವಾಗಿರುವ “ಅಂತರ್‌ ಧರ್ಮಗಳ ವಿವಾಹ’ ಮತ್ತು “ಬಲವಂತವಾಗಿ ಮತಾಂತರಕ್ಕೆ ಇರುವ ಅವಕಾಶಗಳು’ ಎಂಬ ಅಂಶ ಸೇರಿದಂತೆ ಕೆಲವು ಅಂಶಗಳಿಗೆ ತಡೆಯಾತ್ರೆ ನೀಡಿದೆ ನ್ಯಾಯಪೀಠ. ಜೂ.1ರಂದು ಜಾರಿಯಾಗಿ ರುವ ತಿದ್ದುಪಡಿ ಕಾಯ್ದೆಯ ಅನ್ವಯ ಇದುವರೆಗೆ 3 ಕೇಸುಗಳು ದಾಖಲಾಗಿವೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಗುಜರಾತ್‌ ಡಿಸಿಎಂ ನಿತಿನ್‌ ಪಟೇಲ್‌ “ಹೈಕೋರ್ಟ್‌ ವ್ಯಕ್ತಪಡಿಸಿದ ಅಭಿಪ್ರಾಯವನ್ನು ಅಧ್ಯ ಯನ ನಡೆಸಿ, ಅಗತ್ಯ ಬದಲಾವಣೆಯನ್ನು ತರಲಾಗುತ್ತದೆ’ ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next