Advertisement
ಸರ್ವಪಕ್ಷ ಸಭೆ ಕರೆಯುವ ಪ್ರಧಾನ ಮಂತ್ರಿಯ ಪ್ರಯತ್ನವನ್ನು ಜಮ್ಮು ಮತ್ತು ಕಾಶ್ಮೀರದ ರಾಜಕೀಯ ಪಕ್ಷಗಳು ಸ್ವಾಗತಿಸಿವೆ. ಸಭೆ ಜೂನ್ 24 ರಂದು ನಡೆಯಲಿದ್ದು, ಜಮ್ಮು ಮತ್ತು ಕಾಶ್ಮೀರದ ಎಲ್ಲಾ ಪ್ರಾದೇಶಿಕ ಮತ್ತು ರಾಷ್ಟ್ರೀಯ ಪಕ್ಷಗಳು ಈ ಹೆಜ್ಜೆಯನ್ನು ಸ್ವಾಗತಿಸಿದ್ದು, ಸಂವಾದವೇ ಮುಂದಿನ ದಾರಿ ಎಂದು ಹೇಳಿವೆ.
Related Articles
Advertisement
ಇನ್ನು, ಬಿಜೆಪಿಯ ರಾಜ್ಯ ವಿಭಾಗ ಸೇರಿದಂತೆ ಎಲ್ಲಾ ರಾಜಕೀಯ ಪಕ್ಷಗಳಿಗೆ ಕೇಂದ್ರದಿಂದ ಯಾವುದೇ ಔಪಚಾರಿಕ ಆಹ್ವಾನ ಬಂದಿಲ್ಲ. ಆದರೆ ಪ್ರತಿಯೊಂದು ರಾಜಕೀಯ ಪಕ್ಷವೂ ಈ ಹೆಜ್ಜೆಯನ್ನು ಮೆಚ್ಚಿವೆ.
ಈ ಕುರಿತಾಗಿ ಮಾತನಾಡಿದ ಅಪ್ನಿ ಪಕ್ಷದ ಹಿರಿಯ ಮುಖಂಡ ರಫಿ ಮಿರ್, ಸಭೆಯಲ್ಲಿ ಭಾಗವಹಿಸುವಂತೆ ಇದುವರೆಗೆ ಯಾವುದೇ ಔಪಚಾರಿಕ ಆಹ್ವಾನ ಬಂದಿಲ್ಲ, ಆದರೆ ಇದು ರಾಜಕೀಯ ಪಕ್ಷಗಳು ಮತ್ತು ಜಮ್ಮು ಮತ್ತು ಕಾಶ್ಮೀರದ ಜನರಿಗೆ ಉತ್ತಮ ಅವಕಾಶವಿದು ಎಂದು ನಾನು ಭಾವಿಸುತ್ತೇನೆ. ರಾಜಕೀಯ ಪ್ರಕ್ರಿಯೆಯಲ್ಲಿ ವ್ಯತ್ಯಾಸಗಳಿರುವುದರಿಂದ ಈ ಅವಕಾಶವನ್ನು ಎಲ್ಲರೂ ಬಳಸಿಕೊಳ್ಳಬೇಕು. ಎಲ್ಲಾ ಪ್ರತಿ ಪಕ್ಷಗಳು ಸಭೆಯಲ್ಲಿ ಭಾಗವಹಿಸಬೇಕು ಎಂದು ಹೇಳಿದ್ದಾರೆ.
‘ಪೀಪಲ್ಸ್ ಅಲೈಯನ್ಸ್ ಫಾರ್ ಗುಪ್ಕರ್ ಡಿಕ್ಲರೇಷನ್’ (ಪಿಎಜಿಡಿ) ಎಂದು ಕರೆಯಲ್ಪಡುವ ಕಾಶ್ಮೀರದ ರಾಜಕೀಯ ಪಕ್ಷಗಳ ಸಂಘಟನೆಯು ಇಲ್ಲಿಯವರೆಗೆ ಯಾವುದೇ ನಿರ್ಧಾರವನ್ನು ತೆಗೆದುಕೊಂಡಿಲ್ಲವಾದರೂ, ಸಂಯೋಜಿತ ಪಕ್ಷಗಳು ಸಂಘಟಕರು ನಿರ್ಧಾರಕ್ಕೆ ಬಿಟ್ಟಿದ್ದು ಎಂದು ಹೇಳಿದೆ.
ಪಿಎಜಿಡಿ ಸದಸ್ಯ ಮುಜಾಫರ್ ಷಾ ಮಾತನಾಡಿ, ಈ ಸಭೆ ಸ್ವಾಗತಾರ್ಹ. ಪ್ರಧಾನಿಯವರೇ ಈ ಸಭೆಯನ್ನು ಕರೆದು ಮಾತಾಡುತ್ತಿದ್ದಾರೆ ಎಂದರೇ, ಇದು ಒಳ್ಳೆಯ ಬೆಳವಣಿಗೆ ಇಲ್ಲಿನ ಪರಿಸ್ಥಿತಿ ಹಾಗೂ ಎಲ್ಲಾ ವಿಚಾರಗಳ ಬಗ್ಗೆ ವಿಚಾರ ವಿನಿಮಯ ಆಗಬೇಕು. ಆದರೆ ಅಂತಿಮ ತೀರ್ಮಾನವನ್ನು ಪಕ್ಷದ ಅಧ್ಯಕ್ಷರು ಮತ್ತು ಪಿಎಜಿಡಿ ನಾಯಕತ್ವ ತೆಗೆದುಕೊಳ್ಳಲಿದೆ. ಮತ್ತು ನಾವು ಅತ್ಯುತ್ತಮವಾದದ್ದನ್ನು ಆಶಿಸುತ್ತೇವೆ ಎಂದು ಹೇಳಿದ್ದಾರೆ.
ಎನ್ ಸಿ ಸಂಸದ ಅಕ್ಬರ್ ಲೋನ್, ನಾವು ಆಹ್ವಾನವನ್ನು ಪಡೆದರೆ, ಸಭೆಯಲ್ಲಿ ಭಾಗಿಯಾಗುತ್ತೇವೆ. ನಮ್ಮಲ್ಲಿರುವ ಅಂಶಗಳನ್ನು ನಾವು ತಿಳಿಸುತ್ತೇವೆ ಎಂದಿದ್ದಾರೆ.
ಈ ಬೆಳವಣಿಗೆ ನಡೆಯುತ್ತಿರುವ ಹಿನ್ನಲೆಯಲ್ಲಿ, ಸರ್ಕಾರವು ಮೆಹಬೂಬಾ ಮುಫ್ತಿಯ ಸಂಬಂಧಿ ಸರ್ತಾಜ್ ಮಡ್ನಿ ಅವರನ್ನು ಬಂಧನದಿಂದ ಬಿಡುಗಡೆ ಮಾಡಿದೆ.
ಇನ್ನು, ಇತ್ತೀಚೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ನೇತೃತ್ವದಲ್ಲಿ, ಜಮ್ಮು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರ ಉಪಸ್ಥಿತಿಯಲ್ಲಿ ನಡೆದ ಸಭೆಯ ನಂತರ, ಜಮ್ಮ ಕಾಶ್ಮೀರದ ಸರ್ವತೋಮುಖ ಅಭಿವೃದ್ಧಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಮೊದಲ ಆದ್ಯತೆ ಎಂದು ಹೇಳಿದ್ದರು.
ಇದನ್ನೂ ಓದಿ : ಮೂಳೂರು : ತೀವ್ರ ಕಡಲ್ಕೊರೆತದಿಂದ ಹತ್ತಾರು ತೆಂಗಿನಮರಗಳು ಕಡಲಿಗೆ ಆಹುತಿ