Advertisement

ಇಂದು ಆಂಶಿಕ ಸೂರ್ಯಗ್ರಹಣ

07:16 AM Aug 11, 2018 | |

ಹೊಸದಿಲ್ಲಿ: ಈ ವರ್ಷದ ಎರಡನೇ ಹಾಗೂ ಅಂತಿಮ ಸೂರ್ಯಗ್ರಹಣ ಶನಿವಾರ ಮಧ್ಯಾಹ್ನ ಸಂಭವಿಸಲಿದೆ. ಕಳೆದ ತಿಂಗಳ 13ರಂದು ಕೂಡ ಸೂರ್ಯಗ್ರಹಣ ಸಂಭವಿಸಿತ್ತು. ಅದು ಆಂಶಿಕ ಸೂರ್ಯಗ್ರಹಣವಾಗಿತ್ತು. ಇದಾಗಿ, ನಾಲ್ಕು ವಾರಗಳ ಅನಂತರ, ಶನಿವಾರ ಮತ್ತೂಂದು ಭಾಗಶಃ ಸೂರ್ಯಗ್ರಹಣ ಜರಗಲಿದೆ. ಈ ಎರಡು ಸೂರ್ಯಗ್ರಹಣಗಳ ಮಧ್ಯೆ ಜುಲೈ 27ರಂದು ಚಂದ್ರಗ್ರಹಣ ಉಂಟಾಗಿತ್ತು. 

Advertisement

ಗ್ರಹಣದ ಸಮಯ: ಭಾರತೀಯ ಕಾಲಮಾನದ ಪ್ರಕಾರ, ಮಧ್ಯಾಹ್ನ 1:32ಕ್ಕೆ ಆರಂಭವಾಗಿ, ಸಂಜೆ 5 ಗಂಟೆಗೆ ಮುಕ್ತಾಯವಾಗುತ್ತದೆ. ಮಧ್ಯಾಹ್ನ 3:16ರ ಸಮಯಕ್ಕೆ ಗ್ರಹಣ ಉಚ್ಛ್ರಾಯ ಮಟ್ಟದಲ್ಲಿರುತ್ತದೆ.

ಎಲ್ಲೆಲ್ಲಿ ಗೋಚರ?: ಈ ಗ್ರಹಣ ಸ್ಪಷ್ಟವಾಗಿ ಗೋಚರಿಸುವುದು ಸೈಬೀರಿಯಾದಲ್ಲಿ. ಇದಲ್ಲದೆ, ಕೆನಡಾದ ಉತ್ತರ ಭಾಗ, ಸ್ಕಾಂಡಿನೇವಿಯಾದ ಉತ್ತರ ಭಾಗ, ನಾರ್ವೆಯ ಸ್ವಾಲಾºರ್ಡ್‌, ರಷ್ಯಾದ ಹಲವಾರು ಭಾಗಗಳು, ಗ್ರೀನ್‌ಲ್ಯಾಂಡ್, ಉತ್ತರ ಚೀನಾ, ಮಂಗೋಲಿಯಾ, ಕಜಕಿಸ್ತಾನ, ಕಿರ್ಗಿಸ್ತಾನದಲ್ಲೂ ಗೋಚರಿಸುತ್ತದೆ.

ಕಾರಣವೇನು?: ಶನಿವಾರ ಮಧ್ಯಾಹ್ನ ನಡೆಯಲಿರುವ ಸೂರ್ಯಗ್ರಹಣ, ಭೂಗೋಳದ ಉತ್ತರ ಭಾಗಕ್ಕೆ ಮಾತ್ರ ಗೋಚರಿಸಲಿರುವುದರಿಂದ ಉತ್ತರ ಧ್ರುವಕ್ಕೆ ಹತ್ತಿರದಲ್ಲಿರುವ ದೇಶಗಳು ಅಥವಾ ಪ್ರಾಂತ್ಯದಲ್ಲಿನ ಜನರು ಈ ಸೂರ್ಯಗ್ರಹಣವನ್ನು ಸುರಕ್ಷಾ ಕನ್ನಡಕ ಧರಿಸಿ ನೋಡಬಹುದು.
 

Advertisement

Udayavani is now on Telegram. Click here to join our channel and stay updated with the latest news.

Next