Advertisement

Fraud Case ಪಾರ್ಟ್‌ಟೈಂ ಜಾಬ್‌ ಆಮಿಷ: 40.97 ಲ.ರೂ. ವಂಚನೆ

08:17 PM Oct 18, 2023 | Team Udayavani |

ಮಂಗಳೂರು: ಪಾರ್ಟ್‌ಟೈಂ ಉದ್ಯೋಗ ನೀಡುವುದಾಗಿ ಹೇಳಿ ಟೆಲಿಗ್ರಾಂ ಆ್ಯಪ್‌ ಮೂಲಕ ಲಿಂಕ್‌ ಕಳುಹಿಸಿ 40.97 ಲ.ರೂ.ಗಳನ್ನು ವರ್ಗಾಯಿಸಿಕೊಂಡು ವಂಚಿಸಿರುವ ಬಗ್ಗೆ ಮಂಗಳೂರಿನ ಸೆನ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

ದೂರುದಾರರಿಗೆ ಸೆ.14ರಂದು ಅಪರಿಚಿತ ವ್ಯಕ್ತಿ ಟೆಲಿಗ್ರಾಂ ಮೂಲಕ ಲಿಂಕ್‌ ಕಳುಹಿಸಿದ್ದ. ಟಾಸ್ಕ್ಗಳನ್ನು ಪೂರ್ಣಗೊಳಿಸಿ ಹಣ ನೀಡುವುದಾಗಿ ತಿಳಿಸಿದ. ಮೊದಲಿಗೆ 200 ರೂ.ಗಳನ್ನು ದೂರುದಾರರ ಖಾತೆಗೆ ಕಳುಹಿಸಿದ. ಅನಂತರ ಸೆ.14ರಿಂದ ಅ.16ರವರೆಗೆ ಹಂತಹಂತವಾಗಿ ಒಟ್ಟು 40.97 ಲ.ರೂ.ಗಳನ್ನು ದೂರುದಾರರ ಖಾತೆಯಿಂದ ವರ್ಗಾಯಿಸಿಕೊಂಡು ವಂಚಿಸಿದ್ದಾನೆ.

Advertisement

Udayavani is now on Telegram. Click here to join our channel and stay updated with the latest news.

Next