Advertisement

ಪರಮೇಶ್ವರ್‌ ಪಾರ್ಟ್‌ ಟೈಂ ರಾಜಕಾರಣಿ: ಸಿ.ಟಿ. ರವಿ

03:45 AM Feb 05, 2017 | Team Udayavani |

ಬೆಂಗಳೂರು: ಡಾ.ಜಿ.ಪರಮೇಶ್ವರ್‌ ಅವರು ಗೃಹ ಖಾತೆಯ “ಪಾರ್ಟ್‌ ಟೈಂ’ ಸಚಿವರಾಗಿದ್ದಾರೆ ಎಂದು ಬಿಜೆಪಿ ಶಾಸಕ ಸಿ.ಟಿ. ರವಿ ಆರೋಪಿಸಿದ್ದಾರೆ. ಶನಿವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ರಾಜ್ಯದಲ್ಲಿ ರಾಜಕೀಯ ಪ್ರೇರಿತ ಹತ್ಯೆಗಳು ಹೆಚ್ಚಾಗುತ್ತಿವೆ. ಆದರೆ, ಗೃಹ ಸಚಿವರು ಎಲ್ಲದಕ್ಕೂ ವರದಿ ತರಿಸಿಕೊಳ್ಳುವುದಾಗಿ ಹೇಳುತ್ತಾರೆ. ಯಾವುದಕ್ಕೂ ಪರಿಹಾರ ದೊರೆಯುತ್ತಿಲ್ಲ.

Advertisement

ಅವರು ಎರಡು ಹುದ್ದೆ ನಿಭಾಯಿಸುತ್ತಿರುವುದರಿಂದ ಗೃಹ ಇಲಾಖೆ ನಿಭಾಯಿಸುವುದು ಭಾರವಾಗುತ್ತಿದೆ. ಹೀಗಾಗಿ ಯಾವುದಾದರೂ ಒಂದು ಹುದ್ದೆಗೆ ನ್ಯಾಯ ಕೊಡಲಿ ಎಂದು ಆಗ್ರಹಿಸಿದರು. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿರುವ ಬಗ್ಗೆ ಜಂಟಿ ಅಧಿವೇಶನದಲ್ಲಿ ಪ್ರಸ್ತಾಪಿಸಲಾಗುವುದು. ರಾಜ್ಯ ಸರ್ಕಾರ ಅಪರಾಧ ಪ್ರಕರಣಗಳನ್ನು ನಿಯಂತ್ರಿಸುವಲ್ಲಿ ಸಂಪೂರ್ಣ ವಿಫ‌ಲವಾಗಿದೆ ಎಂದು ದೂರಿದರು.

Advertisement

Udayavani is now on Telegram. Click here to join our channel and stay updated with the latest news.

Next