ಜೇವರ್ಗಿ: ವಚನ ಸಾಹಿತ್ಯ ಬದುಕಿನ ಒಂದು ಭಾಗ. ವ್ಯಕ್ತಿತ್ವ ವಿಕಸನದಲ್ಲಿ ವಚನ ಸಾಹಿತ್ಯ ಅತ್ಯಂತ ಪ್ರಭಾವ ಬೀರುತ್ತದೆ ಎಂದು ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹ ಪ್ರಾಧ್ಯಾಪಕ ಡಾ|ಗುರುಪ್ರಕಾಶ ಹೂಗಾರ ಹೇಳಿದರು. ಜಗದ್ಗುರು ತೋಂಟದಾರ್ಯ ವಿದ್ಯಾಪೀಠದ ಶ್ರೀ ಬಸವೇಶ್ವರ ಶಿಕ್ಷಣ ಮಹಾ ವಿದ್ಯಾಲಯದಲ್ಲಿ ಬುಧವಾರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಆಯೋಜಿಸಲಾಗಿದ್ದ ಸಮಾರಂಭದಲ್ಲಿ ವ್ಯಕ್ತಿತ್ವ ವಿಕಸನ, ವಚನ ಸಾಹಿತ್ಯ ವಿಷಯ ಕುರಿತು ಅವರು ವಿಶೇಷ ಉಪನ್ಯಾಸ ನೀಡಿದರು.
ಮನುಷ್ಯ ತನ್ನ ಬದುಕನ್ನು ಕಾವ್ಯದ ರೀತಿ ಸುಂದರ ಮಾಡಿಕೊಳ್ಳಬೇಕು. ನಿಮ್ಮನ್ನು ನೀವು ತಿಳಿದು ನಡೆಯಿರಿ. ನಿಮ್ಮಲ್ಲಿರುವ ಲೋಪ-ದೋಷ, ಸದ್ಗುಣ ಅರ್ಥಮಾಡಿಕೊಂಡು ನಡೆದರೆ ಅದೇ ವ್ಯಕ್ತಿತ್ವ ವಿಕಸನ. ಇದನ್ನೇ 12ನೇ ಶತಮಾನದಲ್ಲಿ ಬಸವಾ ದಿ ಶರಣರು ವಚನ ಸಾಹಿತ್ಯದ ಮೂಲಕ ತಿಳಿಸಿದ್ದಾರೆ ಎಂದರು. ವಚನ ಸಾಹಿತ್ಯದ ಸಾರ ಜೀವನದಲ್ಲಿ ಅಳವಡಿಸಿಕೊಂಡರೆ ಸಂಸ್ಕಾರದಿಂದ ಜೀವನ ನಡೆಸಲು ಸಾಧ್ಯವಾಗುತ್ತದೆ. ಕಲಿತಂತ ಜ್ಞಾನ ಎಲ್ಲರ ಹೃದಯ ತಟ್ಟುವಂತಿರಬೇಕು.ಈ ನಿಟ್ಟಿನಲ್ಲಿ ವಚನ ಅಧ್ಯಯನ ಸಹಕಾರಿಯಾಗುತ್ತದೆ ಎಂದು ಹೇಳಿದರು.
ಜಿಲ್ಲಾ ಕಸಾಪ ಅಧ್ಯಕ್ಷ ವೀರಭದ್ರ ಸಿಂಪಿ ಉದ್ಘಾಟಿಸಿದರು. ಕಸಾಪ ತಾಲೂಕು ಘಟಕದ ಅಧ್ಯಕ್ಷ ಶಿವಣ್ಣಗೌಡ ಪಾಟೀಲ ಹಂಗರಗಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕಸಾಪ ಕಾರ್ಯದರ್ಶಿ ಮಡಿವಾಳಪ್ಪ ನಾಗರಳ್ಳಿ, ಸಂಸ್ಥೆಯ ಕಾರ್ಯದರ್ಶಿ ವಿಜಯಕುಮಾರ ಮಾಲಗತ್ತಿ, ಬಿಎಡ್ ಕಾಲೇಜಿನ ಪ್ರಾಚಾರ್ಯ ಸತೀಶ ಪಾಟೀಲ, ವಿಶ್ವಾಸ ಶಿಂಧೆ ಮುಖ್ಯ ಅತಿಥಿಗಳಾಗಿದ್ದರು.
ಕೊರೊನಾ ವಾರಿಯರ್ಸ್‌ಗಳಾದ ತಾಲೂಕು ಆರೋಗ್ಯಾಧಿಕಾರಿ ಡಾ| ಸಿದ್ಧು ಪಾಟೀಲ, ಪಿಎಸ್‌ಐ ಸಂಗಮೇಶ ಅಂಗಡಿ ಅವರನ್ನು ಸತ್ಕರಿಸಲಾಯಿತು. ಕಸಾಪ ಗೌರವ ಕಾರ್ಯದರ್ಶಿ ಶಂಬಣ್ಣ ಹೂಗಾರ, ಡಾ| ಗಿರೀಶ ರಾಠೊಡ, ನಾಗಣ್ಣಗೌಡ ಜೈನಾಪುರ, ಭಗವಂತ್ರಾಯ ಬೆಣ್ಣೂರ, ವೀರೇಶ ಕಂದಗಲ್, ಕಂಠೆಪ್ಪ ಹರವಾಳ, ಅಮೀನಪ್ಪ ಹೊಸಮನಿ, ಶರಣು ಹರವಾಳ, ಉಮೇಶ ಸಜ್ಜನ್, ಪ್ರಶಾಂತ ಪಾಟೀಲ, ಸಾಹೇಬಗೌಡ ಪಾಟೀಲ ಹರನೂರ, ಮಲ್ಲಾರೆಡ್ಡಿ ಇದ್ದರು.
ಡಾ| ಗಿರೀಶ ರಾಠೊಡ ಸ್ವಾಗತಿಸಿದರು, ಎಸ್.ಡಿ. ಮಮದಾಪುರ ವಂದಿಸಿದರು.