Advertisement

ದಿಲ್ಲಿಯಲ್ಲಿ ಚಿಕಿತ್ಸೆ ಪಡೆದು ಗೋವೆಗೆ ಮರಳಿದ ಸಿಎಂ ಪಾರೀಕರ್‌

02:02 PM Feb 06, 2019 | Team Udayavani |

ಪಣಜಿ: ದಿಲ್ಲಿಯ ಏಮ್ಸ್‌ ನಲ್ಲಿ ಚಿಕಿತ್ಸೆ ಪಡೆದಿರುವ ಗೋವಾ ಮುಖ್ಯಮಂತ್ರಿ ಮನೋಹರ್‌ ಪಾರೀಕರ್‌ ಅವರಿಂದು ಬುಧವಾರ ಗೋವೆಗೆ ಮರಳಿದರು.

Advertisement

ಗೋವಾ ವಿಧಾನಸಭೆಯ ಮೂರು ದಿನಗಳ ಅಧಿವೇಶನದಲ್ಲಿ ಪಾಲ್ಗೊಂಡ ಪಾರಿಕರ್‌ ಕಳೆದ ಜನವರಿ 31ರಂದು ವಿಮಾನದಲ್ಲಿ ದಿಲ್ಲಿಗೆ ಪಯಣಿಸಿ ಹೆಚ್ಚಿನ ಚಿಕಿತ್ಸೆ ಪಡೆಯಲು ಏಮ್ಸ್‌ಗೆ ದಾಖಲಾಗಿದ್ದರು. 

ಪಾರೀಕರ್‌ ಅವರು ಕಳೆದ ಒಂದು ವರ್ಷದಿಂದ ಗೋವಾ, ಮುಂಬಯಿ, ದಿಲ್ಲಿ ಮತ್ತು ಅಮೆರಿಕದ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next