ಹೊಸದಿಲ್ಲಿ: ಕೈದಿಗಳ ಅವಧಿಪೂರ್ಣ ಬಿಡುಗಡೆ ಸಂದರ್ಭಗಳಲ್ಲಿ ಜೈಲುವಾಸ ಅವಧಿ ಪರಿಗಣನೆಯಲ್ಲಿ ಪರೋಲ್‌ನ ಮೇಲೆ ಜೈಲಿಂದ ಹೊರಗಿದ್ದ ಅವಧಿಯನ್ನು ಶಿಕ್ಷೆಯ ಅವಧಿ ಎಂದು ಪರಿಗಣಿಸಬಾರದು ಎಂದು ಸುಪ್ರೀಂಕೋರ್ಟ್ ಅಭಿಪ್ರಾಯ ಪಟ್ಟಿದೆ.
ನ್ಯಾಯಮೂರ್ತಿ ಎಂ.ಆರ್. ಶಾ ಹಾಗೂ ನ್ಯಾಯ ಮೂರ್ತಿ ಸಿ.ಟಿ. ರವಿಕುಮಾರ್ ಅವರ ನ್ಯಾಯಪೀಠವು ಈ ಅಭಿಪ್ರಾಯ ವ್ಯಕ್ತಪಡಿಸಿದೆ.
ಜೀವಾವಧಿ ಶಿಕ್ಷೆಗೆ ಗುರಿಯಾಗಿ, ಗೋವಾ ಕಾರಾ ಗೃಹ ನಿಯಮ 2006ರ ಅನ್ವಯ ಬಿಡುಗಡೆಗೊಳ್ಳಲು ಕೈದಿಗಳ ಪರವಾಗಿ ಅರ್ಜಿಯೊಂದು ಸಲ್ಲಿಕೆಯಾಗಿದ್ದು, ಗೋವಾ ಸರ ಕಾರ ಅರ್ಜಿಯನ್ನು ತಿರಸ್ಕರಿ ಸಿತ್ತು. ಅದನ್ನು ಪ್ರಶ್ನಿಸಿ ಬಾಂಬೆ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಕೆಯಾಗಿದ್ದು, ಈ ವೇಳೆ ಹೈ ಕೋರ್ಟ್ ಜೀವಾವಧಿ ಶಿಕ್ಷೆಗೆ ಗುರಿಯಾದ ವ್ಯಕ್ತಿ 14 ವರ್ಷವಾದರೂ ಜೈಲು ಶಿಕ್ಷೆ ಅನುಭವಿಸಿರಬೇಕು. ಇದರಲ್ಲಿ ಪರೋಲ್ ಮೇಲೆ ಹೊರಗಿದ್ದ ದಿನಗಳನ್ನು ಪರಿಗಣಿ ಸುವುದಿಲ್ಲ ಎಂದಿತ್ತು. ಹೈ ಆದೇಶವನ್ನು ಪ್ರಶ್ನಿಸಿ ಸುಪ್ರೀಂನಲ್ಲಿ ಅರ್ಜಿ ಸಲ್ಲಿಕೆಯಾಗಿದ್ದು, ಈಗ ಸುಪ್ರೀಂ ಕೂಡ ಅರ್ಜಿ ವಜಾಗೊಳಿಸಿ, ಹೈಕೋರ್ಟ್ ಆದೇಶ ಎತ್ತಿ ಹಿಡಿದಿದೆ. ಅಲ್ಲದೇ, ಪರೋಲ್ ಅವಧಿ ಪರಿಗಣಿಸಿದರೆ ಕೈದಿ ಹಲವು ಬಾರಿ ಪರೋಲ್‌ಗೆ ಅರ್ಜಿ ಸಲ್ಲಿಸಬಹುದು ಎಂದು ಹೇಳಿದೆ.