ನವದೆಹಲಿ: ಮುಂದಿನ ಲೋಕಸಭೆ ಚುನಾವಣೆ ನಡೆಯುವ 2024ರ ವೇಳೆ ಚುನಾವಣಾ ಆಯೋಗಕ್ಕೆ ಹೆಚ್ಚುವರಿಯಾಗಿ ಸಿಬ್ಬಂದಿ ನೇಮಕ ಮಾಡಬೇಕು. ಅದಕ್ಕಾಗಿ ಪ್ರಾದೇಶಿಕ ಆಯುಕ್ತರನ್ನು ನೇಮಿಸುವ ಬಗ್ಗೆ ಸರ್ಕಾರ ಅಭಿಪ್ರಾಯ ನೀಡಬೇಕು ಎಂದು ಸಂಸತ್‌ನ ಕಾನೂನು ಮತ್ತು ಸಿಬ್ಬಂದಿ ಸಚಿವಾಲಯಕ್ಕಾಗಿ ಇರುವ ಸಂಸತ್‌ನ ಸ್ಥಾಯಿ ಸಮಿತಿ ಅಭಿಪ್ರಾಯಪಟ್ಟಿದೆ.
ಮೊದಲ ಲೋಕಸಭೆ ಚುನಾವಣೆ ನಡೆದಿದ್ದ ವರ್ಷ 1951ರಲ್ಲಿ ಮುಂಬೈ ಮತ್ತು ಪಾಟ್ನಾಗಳಲ್ಲಿ ಆರು ತಿಂಗಳು ಮೊದಲೇ ಪ್ರಾದೇಶಿಕ ಆಯುಕ್ತರನ್ನು ನೇಮಕ ಮಾಡಲಾಗಿತ್ತು. ನಂತರ ಇಂಥ ನೇಮಕ ನಡೆಯಲಿಲ್ಲ.
ಸಂವಿಧಾನದಲ್ಲಿಯೇ ಇಂಥ ಅವಕಾಶಗಳಿವೆ ಎಂದು ಸಮಿತಿ 2022-23ನೇ ಸಾಲಿನ ವರದಿಯಲ್ಲಿ ಅಭಿಪ್ರಾಯಪಟ್ಟಿದೆ. ಚುನಾವಣಾ ಆಯೋಗ ಕೂಡ ಅಗತ್ಯ ಬಿದ್ದರೆ ರಾಷ್ಟ್ರಪತಿಗಳು ಇಂಥ ನೇಮಕಗಳನ್ನು ಮಾಡಬಹುದು ಎಂದು ಬಗ್ಗೆ ಕೋರಿಕೆ ಸಲ್ಲಿಸಿದೆ ಎಂದು ಸಂಸತ್ ಸಮಿತಿ ವರದಿಯಲ್ಲಿ ಹೇಳಿದೆ.
ಇದನ್ನೂ ಓದಿ:ಮಹಾಲಿಂಗಪುರ ತಾಲೂಕು ಆಗಲಿ, ಇಲ್ಲವೇ ಮುಧೋಳ ತಾಲೂಕಿನಲ್ಲೇ ಉಳಿಯಲಿ : ಕೋಳಿಗುಡ್ಡ
ಕಳೆದ ವಾರ ಸಂಸತ್ ಅಧಿವೇಶನದಲ್ಲಿ ಈ ವರದಿಯನ್ನು ಮಂಡಿಸಲಾಗಿತ್ತು. ಸಂವಿಧಾನದ 324 (4) ವಿಧಿಯಲ್ಲಿ ಚುನಾವಣಾ ಆಯೋಗದ ಬಗ್ಗೆ ಉಲ್ಲೇಖವಿದೆ. ರಾಷ್ಟ್ರಪತಿಗಳು ಚುನಾವಣಾ ಆಯೋಗದ ಜತೆಗೆ ಸಮಾಲೋಚನೆ ನಡೆಸಿದ ಬಳಿಕ ವಿಧಾನಸಭೆ, ವಿಧಾನ ಪರಿಷತ್, ಲೋಕಸಭೆ ಚುನಾವಣೆಗೆ 6 ತಿಂಗಳು ಮುನ್ನ ಪ್ರಾದೇಶಿಕ ಆಯುಕ್ತರನ್ನು ನೇಮಿಸಲು ಅವಕಾಶ ಇದೆ ಎಂದು ಪ್ರಸ್ತಾಪಿಸಲಾಗಿದೆ.