Advertisement

Parliament Security; ಸಂಸತ್‌ನಲ್ಲಿ ವಿಮಾನ ನಿಲ್ದಾಣ ಮಾದರಿ ಭದ್ರತೆಗೆ ಚಿಂತನೆ

12:53 AM Jan 24, 2024 | Team Udayavani |

ಹೊಸದಿಲ್ಲಿ: ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್‌ಎಫ್ ನ ) 140 ಮಂದಿ ಸಿಬ್ಬಂದಿಯನ್ನು ಹೊಸ ಸಂಸತ್‌ ಭವನದ ಭದ್ರತೆಗಾಗಿ ನಿಯೋಜಿಸಲಾ ಗಿದೆ. ಇದರ ಜತೆಗೆ ಅಲ್ಲಿಗೆ ಭೇಟಿ ನೀಡು ವವರನ್ನು ಸಮಗ್ರವಾಗಿ ತಪಾ ಸಣೆ ನಡೆ ಸಲೂ ತೀರ್ಮಾನಿಸಲಾ ಗಿದೆ. ವಿಮಾನ ನಿಲ್ದಾಣದಲ್ಲಿ ಇರುವಂತೆ ಎಕ್ಸ್‌ ರೇ ಮಷೀನ್‌ಗಳ ಮೂಲಕ ಅಲ್ಲಿಗೆ ಭೇಟಿ ನೀಡುವವರ ಮತ್ತು ಅವರ ಬ್ಯಾಗ್‌ಗಳನ್ನು ತಪಾಸಣೆ ಮಾಡಲಾಗುತ್ತದೆ.

Advertisement

ಜ.31ರಿಂದ ಸಂಸತ್‌ನ ಬಜೆಟ್‌ ಅಧಿವೇಶನ ಶುರುವಾಗಲಿರು ವಂತೆಯೇ ಈ ಕ್ರಮ ಜಾರಿಯಾಗಲಿದೆ. ಕಳೆದ ತಿಂಗಳು ಸಂಸತ್‌ ಅಧಿವೇಶನ ವೇಳೆ, ಮೈಸೂರಿನ ಮನೋರಂಜನ್‌ ಮತ್ತು ಇತರ ಐವರು ಹೊಗೆ ಬಾಂಬ್‌ ದಾಳಿ ನಡೆಸಿದ್ದರು. ಹೀಗಾಗಿ ಭದ್ರತೆ ಬಿಗಿಗೊಳಿಸಲಾಗಿದೆ. ೆ.
ಶೂಗಳನ್ನು, ಬೆಲ್ಟ್‌ಗಳನ್ನು, ಜಾಕೆಟ್‌ಗಳನ್ನು ತೆಗೆಯಿಸಿ ಟ್ರೇನಲ್ಲಿ ಇರಿಸಲು ಸೂಚಿಸಲಾಗುತ್ತದೆ. ಅವುಗಳನ್ನು ಸುಲಭವಾಗಿ ಬಳಕೆ ಮಾಡುವ ಡಿಟೆಕ್ಟರ್‌ಗಳ ಮೂಲಕ ಸ್ಕ್ಯಾನ್‌ ಮಾಡಲಾಗುತ್ತದೆ.

ಫೋಟೋಗಳು ತೆಗೆಯುವಂತಿಲ್ಲ
ಹೊಸ ಸಂಸತ್‌ ಭವನದ ಫೋಟೋ ಮತ್ತು ವಿಡಿಯೋ ಚಿತ್ರೀಕರಣ ನಡೆಸಬಾರದು ಎಂದು ಅಲ್ಲಿನ ಉದ್ಯೋಗಿಗಳಿಗೆ ಕಟ್ಟಪ್ಪಣೆ ವಿಧಿಸ ಲಾಗಿದೆ. ಸಂಸತ್‌ ಭವನದ ಸುತ್ತೋಲೆಯಲ್ಲಿ “ಹೊಸ ಸಂಸತ್‌ ಭವನ ದೇಶದಲ್ಲಿಯೇ ಅತ್ಯಂತ ಬೆದರಿಕೆಗೆ ಒಳಗಾಗಿರುವ ಸ್ಥಳ’ ಎಂದು ಬಣ್ಣಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next