Advertisement

ಸಂಸದರ ವೇತನ ನಿಗದಿ ಸಂಸತ್ತಿನ ಪರಮಾಧಿಕಾರ

03:50 AM Mar 25, 2017 | Team Udayavani |

ಹೊಸದಿಲ್ಲಿ: ಸಂಸದರ ವೇತನ ಮತ್ತು ಪಿಂಚಣಿ ಕುರಿತು ಸುಪ್ರೀಂ ಕೋರ್ಟ್‌ ವ್ಯಕ್ತಪಡಿಸಿದ ಅಭಿಪ್ರಾಯವು ನ್ಯಾಯಾಂಗ ಮತ್ತು ಕಾರ್ಯಾಂಗದ ನಡುವಿನ ಸಂಘರ್ಷಕ್ಕೆ ಕಾರಣವಾಗುವ ಎಲ್ಲ ಲಕ್ಷಣಗಳು ಗೋಚರಿಸಿವೆ. ಸಂಸದರಿಗೆ ವೇತನ ಮತ್ತು ಪಿಂಚಣಿ ನಿಗದಿ ಮಾಡುವುದು ಸಂಸತ್ತಿನ ಪರಮಾಧಿಕಾರ. ಸುಪ್ರೀಂ ಕೋರ್ಟ್‌ ಈ ವಿಚಾರವನ್ನು ಕೈಬಿಟ್ಟು ಬೇರೆ ವಿಷಯಗಳ ಕಡೆ ಗಮನ ಹರಿಸುವುದು ಒಳಿತು ಎಂಬ ಪರೋಕ್ಷ ಸಂದೇಶವನ್ನು ಸಂಸದರು ರವಾನಿಸಿದ್ದಾರೆ.

Advertisement

ಇದು ಪೂರ್ಣ ಸಂಸತ್ತಿಗೆ ಒಳಪಡುವ ವಿಚಾರವಾಗಿದ್ದು, ಸಂಸದರ ವೇತನ ಮತ್ತು ಪಿಂಚಣಿಯನ್ನು ನಿರ್ಧರಿಸುವ ಎಲ್ಲ ಹಕ್ಕು ಇರುವುದು ಸಂಸತ್‌ಗೆ ಮಾತ್ರ ಎಂದು ಶುಕ್ರವಾರ ಲೋಕಸಭೆಯಲ್ಲಿ ಸಚಿವ ಅನಂತ್‌ ಕುಮಾರ್‌ ಹೇಳಿದರು. ದೇಶದಲ್ಲಿನ ಶೇ. 80ರಷ್ಟು ಚುನಾಯಿತ ಪ್ರತಿನಿಧಿಗಳು ಕೋಟ್ಯಧಿಪತಿಗಳು ಎಂದು ಸುಪ್ರೀಂ ಕೋರ್ಟ್‌ ಅಭಿ ಪ್ರಾಯ ವ್ಯಕ್ತಪಡಿಸಿದ ಹಿನ್ನಲೆಯಲ್ಲಿ ಸಚಿವರು ಸದನದಲ್ಲಿ ಈ ಸ್ಪಷ್ಟನೆ ನೀಡಿದ್ದಾರೆ.

ಶೂನ್ಯವೇಳೆ ಟಿಎಂಸಿ ನಾಯಕ ಸುಗತ ರಾಯ್‌ ಕೂಡ ಇದಕ್ಕೆ ಧ್ವನಿ ಗೂಡಿಸಿದ್ದು, ಸಂಸತ್‌ ನಿರ್ಧಾರ ಮಾಡಬೇಕಾದ ವಿಷಯವನ್ನು ಕೋರ್ಟ್‌  ಮಾಡಲು ಹೊರಟು ಸಂಸತ್ತಿನ ಹಕ್ಕನ್ನು ಕಸಿಯುತ್ತಿದೆ ಎಂದು ಆರೋಪಿಸಿದ್ದಾರೆ. ಸಂಸತ್ತೇನೂ “ನಿವೃತ್ತ ಜಡ್ಜ್ಗಳಿಗೆ ಪಿಂಚಣಿಯನ್ನೇಕೆ ನೀಡುತ್ತೀರಿ’ ಎಂದು ಪ್ರಶ್ನಿಸಲಿಲ್ಲ ತಾನೇ? ನೀವೇಕೆ ಸಂಸದರ ವಿಚಾರದಲ್ಲಿ ಪ್ರಶ್ನಿಸುತ್ತೀರಿ ಎಂದೂ ಕೇಳಿದ್ದಾರೆ ರಾಯ್‌. ಗುರುವಾರವಷ್ಟೇ ರಾಜ್ಯಸಭೆಯಲ್ಲಿ ಸಚಿವ  ಜೇಟ್ಲಿ ಅವರೂ ಸುಪ್ರೀಂ ನಿಲುವಿನ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next