Advertisement
“ದೇಶದ ಹಿತಾಸಕ್ತಿಯ ದೃಷ್ಟಿಯಿಂದಾಗಿ ಎಲ್ಲ ಪಕ್ಷಗಳು ಪಕ್ಷಪಾತ ರಾಜಕಾರಣವನ್ನು ಬಿಡಬೇಕು. ದೇಶದ ಜನರ ಅಭಿವೃದ್ಧಿಗಾಗಿ ಕೆಲಸ ಮಾಡಬೇಕು’ ಎಂದು ಅವರು ಎಲ್ಲ ರಾಜಕೀಯ ಪಕ್ಷಗಳಿಗೆ ಕರೆ ನೀಡಿದ್ದಾರೆ.
Related Articles
- ಮುರ್ಮುಗೆ ಕರೆ ಮಾಡಿದ್ದ ಪ್ರಧಾನಿ ನರೇಂದ್ರ ಮೋದಿ!
– ರಾಷ್ಟ್ರಪತಿ ಅಭ್ಯರ್ಥಿಯಾಗಿರುವುದನ್ನು ತಿಳಿಸಲು ಮಾಡಲಾಗಿದ್ದ ಕರೆ!
ನಿಯೋಜಿತ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಎನ್‌ಡಿಎ ರಾಷ್ಟ್ರಪತಿ ಅಭ್ಯರ್ಥಿಯಾಗಿ ಆಯ್ಕೆಯಾದ ಕ್ಷಣದ ರೋಚಕ ಸನ್ನಿವೇಶವನ್ನು ಅವರ ಮಾಜಿ ಆಪ್ತ ಕಾರ್ಯದರ್ಶಿ ಬಣ್ಣಿಸಿದ್ದಾರೆ.
Advertisement
ಜೂ.21ರಂದು ಬಿಜೆಪಿ ಸಂಸದೀಯ ಮಂಡಳಿ ಸಭೆ ನಡೆಸಿ, ಮುರ್ಮು ಅವರನ್ನು ರಾಷ್ಟ್ರಪತಿ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿತು. ಈ ವಿಚಾರವಾಗಿ ಪ್ರಧಾನಿ ಮೋದಿಯವರು ಮುರ್ಮು ಅವರಿಗೆ ಕರೆ ಮಾಡಿ ತಿಳಿಸುವುದಕ್ಕೆ ಪ್ರಯತ್ನಿಸಿದ್ದಾರೆ. ಆದರೆ ಮುರ್ಮು ಅವರಿದ್ದ ರಾಯರಂಗಪುರದಲ್ಲಿ ನೆಟ್‌ವರ್ಕ್ ಸಮಸ್ಯೆಯಿಂದಾಗಿ ಅವರಿಗೆ ಕರೆ ಕನೆಕ್ಟ್ ಆಗಿರಲಿಲ್ಲ.
ನಂತರ ಪ್ರಧಾನಿ ಕಚೇರಿಯಿಂದ ಮುರ್ಮು ಅವರ ಮಾಜಿ ಆಪ್ತ ಕಾರ್ಯದರ್ಶಿ ಬಿಕಾಸ್ ಚಂದ್ರ ಮಹಂತೋ ಅವರಿಗೆ ಕರೆ ಮಾಡಲಾಗಿದೆ. “ಪಿಎಂ ಮೋದಿ ಮುರ್ಮು ಅವರೊಂದಿಗೆ ಮಾತನಾಡಬೇಕು. ಬೇಗ ಅವರಿಗೆ ಫೋನ್ ಕೊಡಿ’ ಎಂದು ಕಚೇರಿಯ ಸಿಬ್ಬಂದಿ ಬಿಕಾಸ್‌ಗೆ ತಿಳಿಸಿದ್ದಾರೆ.
ಅಂಗಡಿಯಲ್ಲಿದ್ದ ಬಿಕಾಸ್, ಬೈಕ್‌ನಲ್ಲಿ ಮುರ್ಮು ಅವರ ಮನೆಗೆ ಹೋಗಿ ಅವರ ಕೈಗೆ ಫೋನ್ ಕೊಟ್ಟಿದ್ದಾರೆ. ರಾತ್ರಿಯ ಊಟ ಮಾಡುತ್ತಾ ಕುಳಿತಿದ್ದ ಮುರ್ಮು ಅವರಿಗೆ ಸ್ವತಃ ಮೋದಿ ಅವರೇ ವಿಚಾರ ತಿಳಿಸಿದ್ದಾರೆ. ನಂತರ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ಕೂಡ ಕರೆ ಮಾಡಿ ಮಾತನಾಡಿದ್ದಾರೆ ಎಂದು ಬಿಕಾಸ್ ತಿಳಿಸಿದ್ದಾರೆ.