Advertisement

ಒಂದು ಕುಟುಂಬದ ಹಿತಾಸಕ್ತಿಗಾಗಿ ಸಂಸತ್ ಕಾರ್ಯ ನಿರ್ವಹಿಸುವುದಿಲ್ಲ : ರವಿಶಂಕರ್ ಪ್ರಸಾದ್

12:59 PM Aug 05, 2021 | Team Udayavani |

ನವ ದೆಹಲಿ : ಸಂಸತ್ತು ಒಂದು ಕುಟುಂಬದ ಹಿತಾಸಕ್ತಿಗೆ ಸೂಕ್ತವಾಗಿ ಇರುವುದಕ್ಕೆ ಸಾಧ್ಯವಿಲ್ಲ. ಸಂಸತ್ತು ಒಂದು ಕುಟುಂಬಕ್ಕೆ ಸಂಬಂಧಪಟ್ಟಂತಹ ಆಸಕ್ತಿಗಳ ಮೇಲೆ ಕಾರ್ಯನಿರ್ವಹಿಸುವ ಕ್ಷೇತ್ರವಲ್ಲವೆಂದು ಕೇಂದ್ರದ ಮಾಜಿ ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ರವಿಶಂಕರ್ ಪ್ರಸಾದ್, ಕಾಂಗ್ರೆಸ್ ಗೆ ಪರೋಕ್ಷವಾಗಿ ಕುಟುಕಿದ್ದಾರೆ.

Advertisement

ಮಾಧ್ಯಮಗಳೊಂದಿಗೆ ಮಾತನಾಡಿದ ಪ್ರಸಾದ್, ಈ ಕುಟುಂಬ ಹಿಂದಿನಿಂದಲೂ ಇದೇ ರೀತಯಲ್ಲಿ ಬೆಳೆದುಕೊಂಡು ಬಂದಿದೆ. ನರೇಂದ್ರ ಮೋದಿಯವರ ನೇತೃತ್ವದ ಸರ್ಕಾರದಲ್ಲಿ ದೇಶ ಪ್ರಗತಿಯತ್ತ ಸಾಗುತ್ತಿದೆ ಎನ್ನುವುದನ್ನು ಅರ್ಥೈಸಿಕೊಳ್ಳುವುದರಲ್ಲಿ ಈ ಕುಟುಂಬ ಸೋತಿದೆ 2ಜಿ ಹಗರಣ, ಕಲ್ಲಿದ್ದಲು ಹಗರಣಗಳನ್ನುಒಳಗೊಂಡು ದೇಶದಲ್ಲಿ ನಡೆದ ಬ್ರಹ್ಮಾಂಡ ಭ್ರಷ್ಟಾಚಾರಗಳ ಬಗ್ಗೆ ನಿರಾಕರಣೆಯ ಧೋರಣೆಯಲ್ಲಿ ಕುಟುಂಬ ವರ್ತಿಸುತ್ತದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ : ರಾಷ್ಟ್ರೀಯ ಅಧ್ಯಕ್ಷರೇ ಹೇಳಿದ್ದಾರೆ… ವರುಣಾ ಕ್ಷೇತ್ರದ ಮೇಲೆ ಕಣ್ಣಿಟ್ಟ ವಿಜಯೇಂದ್ರ

ಕೋವಿಡ್ ಸಂದರ್ಭದಲ್ಲಿ ಪ್ರಧಾನಿ ಮೋದಿ ಕರೆದ ಸರ್ವಪಕ್ಷಗಳ ಸಭೆಯನ್ನು ಕಾಂಗ್ರೆಸ್ ನಿರ್ಲಕ್ಷ್ಯ ಮಾಡಿತು. ಈಗ ಕೇಂದ್ರದ ವಿರುದ್ಧ ಸುಖಾಸುಮ್ಮನೆ ಆರೋಪ ಹೊರಿಸುವ ಕೆಲಸ ಮಾಡುತ್ತಿದೆ. ಕೇಂದ್ರ ಸರ್ಕಾರವನ್ನು ಯಾವುದೇ ನೈತಿಕತೆಯಿಲ್ಲದೇ ಕಾಂಗ್ರೆಸ್ ಆರೋಪ ಮಾಡುತ್ತದೆ. ಸಂಸತ್ತನ್ನು ಕಾಂಗ್ರೆಸ್ ಎಂದೂ ಗಂಭೀರವಾಗಿ ತೆಗೆದುಕೊಂಡಿಲ್ಲ ಎಂದು ಅವರು ಕಿಡಿ ಕಾರಿದ್ದಾರೆ.

ಪೆಗಾಸಸ್ ಪ್ರಕರಣದ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಪೆಗಾಸಸ್ ಗೆ ಸಂಬಂಧ ಪಟ್ಟಂತೆ ಕಾಂಗ್ರೆಸ್ ಬಳಿ ಯಾವುದಾದರೂ ಪುರಾವೆಗಳಿವೆಯೇ..? ಯಾವ ನಂಬರ್ ಗೆ ಯಾವ ದಿನ, ಯಾವ ಸಂದರ್ಭದಲ್ಲಿ ಪೆಗಾಸಸ್ ಸ್ಪೈವೇರ್ ಬಳಸಿಕೊಂಡು ಹ್ಯಾಕ್ ಮಾಡಿದೆ ಎಂದು ಕಾಂಗ್ರೆಸ್ ಹೇಳುತ್ತದೆಯೇ..? ಕಾಂಗ್ರೆಸ್ ಬಳಿ ಪೆಗಾಸಸ್ ಗೆ ಸಂಬಂಧಪಟ್ಟಂತೆ ಒಂದೂ ದಾಖಲೆಯಿಲ್ಲ ಎಂದು ಗುಡುಗಿದ್ದಾರೆ.

Advertisement

ಇನ್ನು, ಪೆಗಾಸಸ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರನ್ನೊಳಗೊಂದು ಇತರೆ ವಿರೋಧ ಪಕ್ಷಗಳು ನಿರಂತರವಾಗಿ ಕೇಂದ್ರದ ವಿರುದ್ಧ ಪ್ರತಿಭಟನೆ ನಡೆಸುತ್ತಿವೆ.

ಇದನ್ನೂ ಓದಿ : ಅತ್ಯಾಚಾರ ಸಂತ್ರಸ್ತೆಯ ಪೋಷಕರ ಫೋಟೋ ಹಂಚಿಕೊಂಡ ರಾಹುಲ್ ಮೇಲೆ ಎಫ್ ಐ ಆರ್..!

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next