Advertisement

ಕರುಣಾಗೆ ಗೌರವ; ಕಲಾಪ ಮುಂದೂಡಿಕೆ, ಲೋಕಸಭೆ ಇತಿಹಾಸದಲ್ಲಿ ಮೊದಲು!

02:21 PM Aug 08, 2018 | Team Udayavani |

ನವದೆಹಲಿ: ದ್ರಾವಿಡ ಮುನ್ನೇತ್ರ ಕಳಗಂ ಪಕ್ಷದ ವರಿಷ್ಠ, ಮಾಜಿ ಸಿಎಂ ಕರುಣಾನಿಧಿ ಅವರ ನಿಧನದ ಹಿನ್ನೆಲೆಯಲ್ಲಿ ಅವರಿಗೆ ಸಂತಾಪ ಸೂಚಿಸಿ ಲೋಕಸಭೆ ಹಾಗೂ ರಾಜ್ಯಸಭೆ ಕಲಾಪವನ್ನು ಬುಧವಾರ ಮುಂದೂಡಲಾಯಿತು. ಯಾವತ್ತೂ ಸಂಸದರಾಗಿರದ ವ್ಯಕ್ತಿಯೊಬ್ಬರಿಗೆ ಸಂತಾಪ ಸಲ್ಲಿಸಿ ಕಲಾಪವನ್ನು ಮುಂದೂಡಿರುವುದು ಲೋಕಸಭೆ ಇತಿಹಾಸದಲ್ಲಿಯೇ ಮೊದಲನೆಯದ್ದಾಗಿದೆ!

Advertisement

ಕಳೆದ ಆರು ದಶಕಗಳಿಂದ ಮುತುವೇಲು ಕರುಣಾನಿಧಿ ಅವರು ತಮಿಳುನಾಡು ವಿಧಾನಸಭೆಯಲ್ಲಿ ಸದಸ್ಯರಾಗಿದ್ದವರು, 5 ಬಾರಿ ಮುಖ್ಯಮಂತ್ರಿಯಾಗಿ ಹಾಗೂ 50 ವರ್ಷಗಳ ಕಾಲ ಪ್ರಾದೇಶಿಕ ಡಿಎಂಕೆ ಪಕ್ಷದ ಚುಕ್ಕಾಣಿಯನ್ನು ಹಿಡಿದಿದ್ದರು.

ಈ ಹಿನ್ನೆಲೆಯಲ್ಲಿ ಸಂಸದರಾಗದೇ ಇದ್ದ ಹಾಗೂ ಮಾಜಿ ಸಿಎಂಗೆ ಗೌರವ ಸಲ್ಲಿಸಿ ಕಲಾಪ ಮುಂದೂಡಿರುವುದು ಲೋಕಸಭೆಯಲ್ಲೇ ಪ್ರಥಮ ಬಾರಿಯಾಗಿದೆ ಎಂದು ವರದಿ ತಿಳಿಸಿದೆ.

ಪ್ರಧಾನಿ ನರೇಂದ್ರ ಮೋದಿ, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, ಕರ್ನಾಟಕದ ಸಿಎಂ ಎಚ್ ಡಿ ಕುಮಾರಸ್ವಾಮಿ, ಮಾಜಿ ಸಿಎಂ ಸಿದ್ದರಾಮಯ್ಯ, ದೆಹಲಿ ಸಿಎಂ ಕೇಜ್ರಿವಾಲ್, ತೆಲಂಗಾಣ ಸಿಎಂ ಕೆ.ಚಂದ್ರಶೇಖರ್ ಸೇರಿದಂತೆ ಹಲವಾರು ಗಣ್ಯರು ಅಸ್ತಂಗತರಾದ ಎಂ.ಕರುಣಾನಿಧಿ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದರು. ಸಂಜೆ ಮರೀನಾ ಬೀಚ್ ನಲ್ಲಿ ಎಂ.ಕರುಣಾನಿಧಿ ಅವರ ಅಂತಿಮ ಸಂಸ್ಕಾರ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next