Advertisement

ನಗರದ ವಿವಿಧಡೆ ಪಾರ್ಕಿಂಗ್‌ ಸಮಸ್ಯೆ ಮುಂದುವರಿಕೆ

08:06 PM Jan 25, 2020 | mahesh |

ಪಾರ್ಕಿಂಗ್‌ ರಹಿತ ಸ್ಥಳಗಳಲ್ಲಿ ವಾಹನ ಪಾರ್ಕ್‌ ಮಾಡಿದರೆ ಟೋಯಿಂಗ್‌ ವಾಹನಗಳಲ್ಲಿ ವಾಹನ ಕೊಂಡೊಯ್ದು ವಾಹನ ಮಾಲಕರಿಗೆ ದಂಡ ವಿಧಿಸುವ ಪ್ರಕ್ರಿಯೆ ಜಾರಿಯಲ್ಲಿದೆ. ನಿರಂತರವಾಗಿ ಹೀಗೆ ಮಾಡಿದರೂ, ಎಲ್ಲೆಂದರಲ್ಲಿ ಪಾರ್ಕ್‌ ಮಾಡಿ ಇತರರಿಗೆ ಸಮಸ್ಯೆ ಉಂಟು ಮಾಡುವ ಕಿರಿಕಿರಿ ತಪ್ಪಿಲ್ಲ. ನಗರದ ವಿವಿಧ ಮುಖ್ಯ ರಸ್ತೆಗಳ ಬದಿಯಲ್ಲಿಯೇ ಪಾರ್ಕಿಂಗ್‌ ಮಾಡಲಾಗುತ್ತಿದ್ದು, ಸಂಚಾರಕ್ಕೆ ತೊಡಕುಂಟಾಗುತ್ತಿದೆ.

Advertisement

ಮುಖ್ಯವಾಗಿ ವಾಹನನಿಬಿಡ ರಸ್ತೆಯಾದ ಬಿಜೈ ಸರ್ಕಲ್‌ ಮುಂಭಾಗ, ಜ್ಯೋತಿ, ಕಂಕನಾಡಿ-ಬಲ್ಮಠ ರಸ್ತೆ, ಸ್ಟೇಟ್‌ಬ್ಯಾಂಕ್‌ ಮೀನು ಮಾರುಕಟ್ಟೆ ಮುಂಭಾಗ ಸಹಿತ ಬಹುತೇಕ ಕಡೆಗಳಲ್ಲಿ ವಾಹನ ನಿಲುಗಡೆಯನ್ನು ರಸ್ತೆ ಬದಿಯಲ್ಲೇ ಮಾಡಲಾಗುತ್ತದೆ. ಇವೆಲ್ಲ ಮುಖ್ಯರಸ್ತೆಯಾದರೂ ಕಿರಿದಾದ ರಸ್ತೆ ಆಗಿರುವುದರಿಂದ ಮತ್ತು ಬಸ್‌ ಮತ್ತಿತರ ಘನ ವಾಹನಗಳೂ ಸಂಚರಿಸುವುದರಿಂದ ವಾಹನ ನಿಲುಗಡೆ ಮಾಡಿದರೆ, ಮತ್ತೂ ಕಿರಿದಾಗಿ ಅಪಘಾತಗಳಾಗುವ ಸಾಧ್ಯತೆ ಇದೆ. ಕೆಲವೊಮ್ಮೆ ವೇಗವಾಗಿ ಹೋಗುತ್ತಿರುವಾಗ ಇನ್ನೊಂದು ಬದಿಯಲ್ಲಿ ಸಾಗುವ ವಾಹನಗಳಿಗೆ ಸೈಡ್‌ ನೀಡುವುದೂ ಇದರಿಂದ ಕಷ್ಟವಾಗುತ್ತಿದೆ.

ನಗರದಲ್ಲಿ ಯಾವುದೇ ಹೊಸ ವಾಣಿಜ್ಯ ಕಟ್ಟಡಗಳು ಪ್ರಾರಂಭವಾದರೂ, ಸರಿಯಾದ ಪಾರ್ಕಿಂಗ್‌ ವ್ಯವಸ್ಥೆ ಮಾಡುವುದನ್ನು ಕಡ್ಡಾಯವಾಗಿಸಬೇಕು. ಅಲ್ಲದೆ, ಸಾಕಷ್ಟು ಪಾರ್ಕಿಂಗ್‌ ವ್ಯವಸ್ಥೆ ಕಲ್ಪಿಸಿಕೊಡಬೇಕು. ಇದರಿಂದ ರಸ್ತೆ ಬದಿಯಲ್ಲೇ ಪಾರ್ಕಿಂಗ್‌ ಮಾಡಿದರೆ ತಪ್ಪುತ್ತದೆ.

– ಡಿಬಿ

Advertisement

Udayavani is now on Telegram. Click here to join our channel and stay updated with the latest news.

Next