Advertisement
ನಗರದ ಕೇಂದ್ರ ಸ್ಥಾನದಲ್ಲಿರುವ ಗಾಂಧಿಕಟ್ಟೆಯ ಬಳಿಯಿಂದ ಕೆಎಸ್ ಆರ್‌ಟಿಸಿ ಬಸ್ಸು ನಿಲ್ದಾಣ ರಸ್ತೆಯನ್ನು ಏಕಮುಖ ಸಂಚಾರಕ್ಕೆ ಪರಿವರ್ತಿಸಿ, ಸೂಪರ್ ಟವರ್ ಹಾಗೂ ಎ.ಎಂ. ಕಾಂಪ್ಲೆಕ್ಸ್‌ಗೆ ಸಂಬಂಧಪಟ್ಟ ಪಾರ್ಕಿಂಗ್ ನ್ನು ಕೆಎಸ್‌ಆರ್‌ಟಿಸಿ ನಿಲ್ದಾಣದ ಕೆಳ ಭಾಗಕ್ಕೆ ಸ್ಥಳಾಂತರಿಸಲಾಗಿತ್ತು. ಇಲ್ಲಿನ ರಸ್ತೆ ವಿಸ್ತಾರವಾಗಿರುವುದರಿಂದ ಮೇಲ್ಭಾಗದಿಂದ ಮಾತ್ರ ವಾಹನಗಳಿಗೆ ಬರಲು ಅವಕಾಶ ಕಲ್ಪಿಸಲಾಗಿತ್ತು. ಹಲವು ವರ್ಷಗಳ ಹಿಂದಿನಿಂದಲೇ ಇರುವ ಅಟೋ ರಿಕ್ಷಾ ಪಾರ್ಕಿಂಗ್ ಯಥಾಸ್ಥಿತಿಯಲ್ಲಿ ಮುಂದುವರೆಸಲಾಗಿತ್ತು.
ಪರಿವರ್ತಿತ ವ್ಯವಸ್ಥೆ ಸಾರ್ವಜನಿಕ ನೆಲೆಯಲ್ಲಿ ಪ್ರಯೋಜನಕಾರಿಯಾಗಿ ಕಾಣಿಸಿಕೊಂಡಿದೆ. ಆದರೆ ಕಟ್ಟಡಕ್ಕೆ ಸಂಬಂಧಪಟ್ಟವರ ಒತ್ತಡದಿಂದ ಪೊಲೀಸರು ರಿಕ್ಷಾ ಪಾರ್ಕಿಂಗ್ ಮೇಲೆ ಪ್ರಹಾರಕ್ಕೆ ಮುಂದಾಗಿದ್ದಾರೆ. ವಾಣಿಜ್ಯ ಕಟ್ಟಡಗಳಿಗೆ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸದ ಸ್ಥಳೀಯಾಡಳಿತ ರಿಕ್ಷಾ ಪಾರ್ಕಿಂಗ್‌ನ್ನು ಕಡಿತಗೊಳಿಸಲು ಪರೋಕ್ಷವಾಗಿ ಪೊಲೀಸ್ ಇಲಾಖೆಗೆ ಸಹಕಾರ ನೀಡುತ್ತಿದೆ ಎನ್ನುವ ಆರೋಪ ವ್ಯಕ್ತವಾಗಿದೆ.