Advertisement

ಪರ್ಕಳ ಪೇಟೆ: ಪಾದಚಾರಿಗಳಿಗೆ ನಿತ್ಯ ಕೆಸರಿನ ಸಿಂಚನ

07:07 AM Jun 30, 2019 | sudhir |

ಉಡುಪಿ: ಪರ್ಕಳ ಪೇಟೆ ಬಸ್‌ ನಿಲ್ದಾಣದ ಮೂಲಕ ಹಾದು ಹೋಗುವ ರಾ.ಹೆ. 169ಎರ ಎರಡೂ ಬದಿಯಲ್ಲಿ ನಿಂತಿರುವ ಮಳೆ ನೀರಿನಿಂದ ಪ್ರಯಾಣಿಕರು, ಪಾದಚಾರಿಗಳು ಕೆಸರಿನ ನಡುವೆಯೇ ಓಡಾಡಬೇಕಾಗಿದೆ.

Advertisement

ಪರ್ಕಳ ಪೇಟೆಯ ರಸ್ತೆ ಅಗಲ ಕಿರಿದಾ ಗಿದ್ದು ಪ್ರತಿವರ್ಷ ಮಳೆಗಾಲದಲ್ಲಿ ಬಸ್‌ ನಿಲ್ದಾಣದಲ್ಲಿ ಸಮೀಪದ ರಸ್ತೆ ಹೊಂಡ ಗುಂಡಿಗಳಿಂದ ಕೆಸರಿನಿಂದ ಕೂಡಿರುವುದು ಮಾಮೂಲಿಯಾಗಿದೆ. ಅದನ್ನು ನಗರಸಭೆ ಅಥವಾ ಲೋಕೋಪಯೋಗಿ ಇಲಾಖೆ ದುರಸ್ತಿ ಮಾಡುತ್ತಿತ್ತು. ಈ ಬಾರಿ ರಸ್ತೆ ರಾಷ್ಟ್ರೀಯ ಹೆದ್ದಾರಿಯಾಗಿ ಕಾಮಗಾರಿ ಆರಂಭವಾಗಿರುವುದರಿಂದ ನಗರಸಭೆಯ ಅಧಿಕಾರಿಗಳು ರಸ್ತೆ ದುರಸ್ತಿಗೆ ಮನಸ್ಸು ಮಾಡುತ್ತಿಲ್ಲ.

ಜಿಲ್ಲಾಡಳಿತ ಈ ಬಗ್ಗೆ ತತ್‌ಕ್ಷಣ ಗಮನ ಹರಿಸಿ, ಈ ಕೆರೆಯಂತಹ ಹೊಂಡ ಮುಚ್ಚಿ, ಜನರ ನಿರಾತಂಕ ಓಡಾಟಕ್ಕೆ ತತ್‌ಕ್ಷಣ ವ್ಯವಸ್ಥೆ ಮಾಡಿಕೊಡಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next