Advertisement
ಈ ಕ್ರೀಡಾಪಟುಗಳು ಕೆಲವು ದಿನಗಳ ಕಾಲ ಪ್ಯಾರಿಸ್ ಹೊಟೇಲ್‌ನಲ್ಲಿ ತಂಗಿದ ಬಳಿಕ ಆ. 25ರಂದು ಒಲಿಂಪಿಕ್ಸ್ ಗ್ರಾಮಕ್ಕೆ ತೆರಳಲಿದ್ದಾರೆ. ಆ. 28ರಂದು ಪ್ಯಾರಾಲಿಂಪಿಕ್ಸ್ ಉದ್ಘಾಟನೆಯಾಗಲಿದೆ.
ಆ್ಯತ್ಲೆಟಿಕ್ಸ್ ಸ್ಪರ್ಧೆಗಳು ಆ. 30ರಂದು ಆರಂಭವಾಗಲಿವೆ. ಉದ್ಘಾಟನ ಸಮಾರಂಭದ ಧ್ವಜಧಾರಿಯಾಗಿರುವ ಸುಮಿತ್ ಅಂಟಿಲ್ ಜಾವೆಲಿನ್ ಚಿನ್ನವನ್ನು ಉಳಿಸಿಕೊಳ್ಳುವ ಎಲ್ಲ ಸಾಧ್ಯತೆಯನ್ನು ಹೊಂದಿದ್ದಾರೆ. ಸುಮಿತ್ ಹಾಗೂ ಇತರ ಕೆಲವು ಕ್ರೀಡಾಪಟುಗಳು, ಸ್ಟೇಡ್ ಡೆ ಫ್ರಾನ್ಸ್ ಸ್ಟೇಡಿಯಂನಿಂದ 5 ಕಿ.ಮೀ. ದೂರದಲ್ಲಿರುವ “ನೆಲ್ಸನ್ ಮಂಡೇಲ ನ್ಪೋರ್ಟ್ಸ್ ಕಾಂಪ್ಲೆಕ್ಸ್’ನಲ್ಲಿ ಅಭ್ಯಾಸ ನಡೆಸಲಿದ್ದಾರೆ ಎಂದು ಪ್ಯಾರಾ ಆ್ಯತ್ಲೆಟಿಕ್ಸ್‌ನ ಪ್ರಧಾನ ಕೋಚ್ ಸತ್ಯನಾರಾಯಣ ಅವರು ತಿಳಿಸಿದರು. 5 ಚಿನ್ನ ಗೆಲ್ಲಬೇಕು…
“ಆ್ಯತ್ಲೆಟಿಕ್ಸ್‌ನಲ್ಲಿ 5 ಚಿನ್ನ ಸೇರಿದಂತೆ 12 ಪದಕ ಗೆಲ್ಲುವುದು ನಮ್ಮ ಗುರಿ. ಆಗ ಇದು ಪ್ಯಾರಾಲಿಂಪಿಕ್ಸ್‌ನಲ್ಲಿ ನಮ್ಮ ಶ್ರೇಷ್ಠ ನಿರ್ವಹಣೆ ಆಗಲಿದೆ’ ಎಂದು ಸತ್ಯನಾರಾಯಣ ಹೇಳಿದರು. ಇದೇ ವರ್ಷ ಜಪಾನ್‌ನಲ್ಲಿ ನಡೆದ ವಿಶ್ವ ಪ್ಯಾರಾ ಆ್ಯತ್ಲೆಟಿಕ್ಸ್‌ನಲ್ಲಿ ಭಾರತ 6 ಚಿನ್ನ, 5 ಬೆಳ್ಳಿ ಹಾಗೂ 6 ಕಂಚಿನ ಪದಕ ಗೆದ್ದು 6ನೇ ಸ್ಥಾನಿಯಾಗಿತ್ತು. ಈ ಸಾಧನೆ ಪ್ಯಾರಾಲಿಂಪಿಕ್ಸ್‌ಗೆ ಸ್ಫೂರ್ತಿ’ ಎಂದರು.
Related Articles
Advertisement
ಕಳೆದ ಟೋಕಿಯೊ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತ 19 ಪದಕ ಜಯಿಸಿತ್ತು (5 ಚಿನ್ನ, 8 ಬೆಳ್ಳಿ, 6 ಕಂಚು). ಇದು ಪ್ಯಾರಾಲಿಂಪಿಕ್ಸ್ ಇತಿಹಾಸದಲ್ಲೇ ಭಾರತದ ಅತ್ಯುತ್ತಮ ಸಾಧನೆ ಆಗಿತ್ತು.
84 ಸದಸ್ಯರ ದೊಡ್ಡ ತಂಡಈ ಬಾರಿ ಭಾರತದ ದೊಡ್ಡ ತಂಡ ಪ್ಯಾರಿಸ್ ಕೂಟದಲ್ಲಿ ಭಾಗವಹಿಸಲಿದೆ. ಈ 84 ಕ್ರೀಡಾಳುಗಳಲ್ಲಿ 38 ಮಂದಿ ಆ್ಯತ್ಲೆಟಿಕ್ಸ್ ವಿಭಾಗದವರಾಗಿದ್ದಾರೆ. ಒಟ್ಟಾರೆ, ಕನಿಷ್ಠ 25 ಪದಕಗಳನ್ನು ಗೆಲ್ಲುವುದು ನಮ್ಮ ಗುರಿ ಎಂಬುದಾಗಿ ಭಾರತೀಯ ಪ್ಯಾರಾಲಿಂಪಿಕ್ ಕಮಿಟಿಯ ಅಧ್ಯಕ್ಷ ದೇವೇಂದ್ರ ಜಜಾರಿಯ ಹೇಳಿದ್ದಾರೆ.