Advertisement
“ನಮ್ಮ ಪ್ಯಾರಾ ಆ್ಯತ್ಲೀಟ್‌ಗಳು ಅಡೆತಡೆ ಗಳನ್ನೆಲ್ಲ ಮೀರಿ ಗೆಲುವು ಸಾಧಿಸುವ, ಸವಾಲುಗಳನ್ನು ಅವಕಾಶಗಳಾಗಿ ಪರಿವರ್ತಿ ಸುವ ಸಾಮರ್ಥ್ಯ ಹೊಂದಿದ್ದಾರೆ. 2024ರ ಕ್ರೀಡಾಕೂಟದ ತಯಾರಿಯ ವೇಳೆ ಉತ್ತಮ ದೃಢತೆ ಮತ್ತು ಪರಿಶ್ರಮ ವಹಿಸಿದ್ದಾರೆ. ಅನೇಕ ಕ್ರೀಡಾಪಟುಗಳು ಖೇಲೋ ಇಂಡಿಯಾದಿಂದ ಲಾಭ ಪಡೆದಿದ್ದಾರೆ. ಸರಕಾರ ಸರ್ವರೀತಿಯ ಸವಲತ್ತು ನೀಡುತ್ತ ಬಂದಿದೆ. ಇವರೆಲ್ಲರ ಪಾಲಿಗೆ ಇದೊಂದು ಮಹತ್ವದ ಪಯಣ. ದೇಶದ ಪ್ರತಿಷ್ಠೆ ಹಾಗೂ ಗೌರವವನ್ನು ಎತ್ತಿಹಿಡಿಯುವ ವಿಶ್ವಾಸವಿದೆ’ ಎಂದು ಕ್ರೀಡಾ ಸಚಿವ ಮನ್‌ಸುಖ್ ಮಾಂಡವೀಯ ಈ ಸಂದರ್ಭದಲ್ಲಿ ಹೇಳಿದರು.
ಟೋಕಿಯೊ ಪ್ಯಾರಾಲಿಂಪಿಕ್ಸ್‌ಗಾಗಿ ಭಾರತ 54 ಕ್ರೀಡಾಳುಗಳನ್ನು ಕಳುಹಿಸಿತ್ತು. ಅಲ್ಲಿ 19 ಪದಕ ಒಲಿದಿತ್ತು. ಈ ಬಾರಿ 84 ಕ್ರೀಡಾಪಟುಗಳ ತಂಡ ಪ್ಯಾರಿಸ್‌ಗೆ ತೆರಳಲಿದೆ. ಆದರೆ ಬ್ಯಾಡ್ಮಿಂಟನ್ ತಾರೆ, ಟೋಕಿಯೊದಲ್ಲಿ ಚಿನ್ನ ಜಯಿಸಿದ್ದ ಪ್ರಮೋದ್ ಭಗತ್ ಅಮಾನತಿಗೊಳಗಾದದ್ದೊಂದು ಹಿನ್ನಡೆ. ಇದೇ ಸಂದರ್ಭದಲ್ಲಿ ಭಾರತದ ಪ್ಯಾರಾ ಲಿಂಪಿಕ್ಸ್ ಕ್ರೀಡಾಳುಗಳಿಗೆ ಸ್ಫೂರ್ತಿ ತುಂಬಬಲ್ಲ, ಅಭಿಷೇಕ್ ದುಬೆ ಮತ್ತು ಮಹಾವೀರ್ ರಾವತ್ ಬರೆದ “ಬ್ರೇಕಿಂಗ್ ಬ್ಯಾರಿಯರ್’ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು.
Related Articles
ಭಾರತದ ಕ್ರೀಡಾಪಟುಗಳು 12 ಸ್ಪರ್ಧೆ ಗಳಲ್ಲಿ ಪದಕ ಬೇಟೆಗೆ ಇಳಿಯಲಿದ್ದಾರೆ. ಇವುಗಳೆಂದರೆ ಆರ್ಚರಿ, ಆ್ಯತ್ಲೆಟಿಕ್ಸ್, ಬ್ಯಾಡ್ಮಿಂಟನ್, ಕನೋಯಿಂಗ್, ಸೈಕ್ಲಿಂಗ್, ಬ್ಲೆ„ಂಡ್ ಜೂಡೋ, ಪವರ್‌ಲಿಫ್ಟಿಂಗ್, ರೋವಿಂಗ್, ಶೂಟಿಂಗ್, ಸ್ವಿಮ್ಮಿಂಗ್, ಟೇಬಲ್ ಟೆನಿಸ್ ಮತ್ತು ಟೇಕ್ವಾಂಡೊ.
Advertisement
ಸುಮಿತ್, ಭಾಗ್ಯಶ್ರೀ ಧ್ವಜಧಾರಿಗಳುಪ್ಯಾರಾಲಿಂಪಿಕ್ಸ್ ಉದ್ಘಾಟನ ಸಮಾರಂಭದಲ್ಲಿ ಜಾವೆಲಿನ್ ಎಸೆತಗಾರ ಸುಮಿತ್ ಆಂಟಿಲ್ ಮತ್ತು ಶಾಟ್‌ಪುಟ್ ತಾರೆ ಭಾಗ್ಯಶ್ರೀ ಜಾಧವ್ ಭಾರತದ ತ್ರಿವರ್ಣ ಧ್ವಜಧಾರಿಗಳಾಗಿ ಆಯ್ಕೆಯಾಗಿದ್ದಾರೆ.