Advertisement

Paris olympics: ಒಲಿಂಪಿಕ್ಸ್‌ನ ವೈರಲ್‌ ಸ್ಟಾರ್‌ಗಳು

04:35 PM Aug 12, 2024 | Team Udayavani |

ಈ ಒಲಿಂಪಿಕ್ಸ್‌ನಲ್ಲಿ ಕೆಲವು ಕ್ರೀಡಾಪಟುಗಳು ಬೇರೆ ಬೇರೆ ಕಾರಣಕ್ಕಾಗಿ ಸುದ್ದಿಯಾಗಿದ್ದರು. ಪದಕಗಳಿಸಿದ್ದಕ್ಕಿಂತಲೂ ಬೇರೆಯ ವಿಚಾರಕ್ಕೇನೆ ಹೆಚ್ಚು ಸುದ್ದಿಯಾದ ಅಂಥ ಕೆಲವು ಕ್ರೀಡಾಪಟುಗಳ ಪುಟಾಣಿ ಮಾಹಿತಿ ಇಲ್ಲಿದೆ..

Advertisement


1 . ಯೂಸುಫ್ ಡಿಕೆಚ್‌
ಟರ್ಕಿಯ ಯೂಸುಫ್ ಡಿಕೆಚ್‌ ಶೂಟಿಂಗ್‌ ವೇಳೆ ಕಣ್ಣಿಗೆ ಬಳಸುವ ಯಾವುದೇ ಸಾಧನ ಬಳಸದೆ ಸಾದಾ-ಸೀದ ಶೂಟಿಂಗ್‌ ಮೂಲಕ ಗಮನ ಸೆಳೆದಿದ್ದರು. ಕಿಸೆಗೆ ಕೈಯಿಟ್ಟು ಸರಳವಾಗಿ ಸ್ಪರ್ಧಿಸಿ ಬೆಳ್ಳಿ ಗೆದ್ದಿದ್ದ ಅವರ ಚಿತ್ರ ವೈರಲ್‌ ಆಗಿದ್ದವು.

2. ಸ್ಟೀಫ‌ನ್‌ ನೆಡೆರೋಸಿಕ್‌
ಅಮೆರಿಕದ ಜಿಮ್ನಾಸ್ಟ್‌ ಆದ ಸ್ಟೀಫ‌ನ್‌ ನೆಡೆರೋಸಿಕ್‌ ತನ್ನ ವಿಭಿನ್ನ ಪೋಸ್‌ಗಾಗಿ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗಿದ್ದರು. ಇವರಿಗೆ ಟೀಮ್‌ ಅಲ್‌ರೌಂಡ್‌ ವಿಭಾಗದಲ್ಲಿ ಕಂಚು ಲಭಿಸಿತ್ತು.

3.  ಕಿಮ್‌ ಯೆಜಿ
ಸುದ್ದಿಗೋಷ್ಠಿಯ ವೇಳೆ ಮಾತನಾಡುತ್ತಿದ್ದ ದಕ್ಷಿಣ ಕೊರಿಯಾದ ಶೂಟರ್‌ ಕಿಮ್‌ ಯೆಜಿ, ಇದ್ದಕ್ಕಿದ್ದಂತೆ ಕುಸಿದುಬಿದ್ದಿದ್ದರು. ಇದರ ವೀಡಿಯೋ ಜಾಲತಾಣದಲ್ಲಿ ಹರಿದಾಡಿದ್ದವು. ಇವರು ಏರ್‌ ಪಿಸ್ತೂಲ್‌ನಲ್ಲಿ ಬೆಳ್ಳಿ ಗೆದ್ದಿದ್ದರು.

Advertisement

4. ಜಾರ್ಜಿಯಾ ವಿಲ್ಲಾ
ಇಟಲಿಯ ಜಿಮ್ನಾಸ್ಟ್‌ ಜಾರ್ಜಿಯಾ ವಿಲ್ಲಾ ಒಲಿಂಪಿಕ್ಸ್‌ ದಿನಗಳಲ್ಲಿ ಬಹಳ ವೈರಲ್‌ ಆಗಿದ್ದರು. ಇದಕ್ಕೆ ಕಾರಣ ಅವರು ಚೀಸ್‌ ಸಂಸ್ಥೆ ಪಾರ್ಮಾ ಜತೆಗೆ ಪ್ರಾಯೋಜಕ ಒಪ್ಪಂದ ಮಾಡಿಕೊಂಡಿ ದ್ದರು. ಸ್ಪರ್ಧೆಯಲ್ಲಿ ಇವರಿಗೆ ಬೆಳ್ಳಿ ಲಭಿಸಿತ್ತು.

5. ಆ್ಯಲಿಸ್‌ ಫಿನಾಟ್‌
ಫ್ರೆಂಚ್‌ ಆ್ಯತ್ಲೀಟ್‌ ಆ್ಯಲಿಸ್‌ ಫಿನಾಟ್‌, 3000 ಮೀ. ಸ್ಟೀಫ‌ಲ್‌ ಚೇಸ್‌ನಲ್ಲಿ 8:58.67 ನಿ. ಕಾಲಾವ ಧಿಯೊಂದಿಗೆ ಯುರೋಪಿಯನ್‌ ದಾಖಲೆ ನಿರ್ಮಿಸಿದ್ದರು. ಇದರ ಬೆನ್ನಲ್ಲೇ ಅವರು ಬಾಯ್‌ ಫ್ರೆಂಡ್‌ ಜತೆ ಡ್ಯಾನ್ಸ್‌ ಮಾಡಿ ವೈರಲ್‌ ಆಗಿದ್ದರು.

6. ಸೈಮನ್‌ ಬೈಲ್ಸ್‌
ಅಮೆರಿಕದ ಚಿನ್ನ ವಿಜೇತ ಜಿಮ್ನಾಸ್ಟ್‌ ಸೈಮನ್‌ ಬೈಲ್ಸ್‌ ವಿವಾದಕ್ಕಾಗಿ ಸುದ್ದಿಯಾ­ಗಿ­ದ್ದರು. ಇವರು ತನ್ನ ತಂಡದ ಸಹ ಆಟಗಾರ್ತಿ ಮಿಕಲ್ಯ ಸ್ಕಿನ್ನರ್‌ ಜತೆಗಿದ್ದ ಫೋಟೋ ಹಂಚಿಕೊಂಡು ವಿವಾದ ಸೃಷ್ಟಿಸಿದ್ದರು.

7. ಸಿನಿಕೋವಾ-ಮಚಾಕ್‌
ಝೆಕ್‌ ಟೆನಿಸ್‌ ಆಟಗಾರರಾದ ಕತರಿನಾ ಸಿನಿಕೋವಾ ಮತ್ತು ಟೊಮಾಸ್‌ ಮಚಾಕ್‌ ಜೋಡಿ ಒಲಿಂಪಿಕ್ಸ್‌ ಮಿಶ್ರ ಡಬಲ್ಸ್‌ನಲ್ಲಿ ಚಿನ್ನ ಗೆದ್ದ ಬಳಿಕ ಪರಸ್ಪರ ಕಿಸ್‌ ಮಾಡಿ ವೈರಲ್‌ ಆಗಿದ್ದರು. ಈ ಜೋಡಿಯೀಗ ಬ್ರೇಕಪ್‌ ಆಗಿದೆ.

8. ನೀರಜ್‌ ಚೋಪ್ರಾ
ಒಲಿಂಪಿಕ್ಸ್‌ ಪುರುಷರ ಜಾವೆಲಿನ್‌ನಲ್ಲಿ ಬೆಳ್ಳಿ ಗೆದ್ದ ಬಳಿಕ ಭಾವುಕರಾದ ನೀರಜ್‌ ಚೋಪ್ರಾ, ಬಾಲಿವುಡ್‌ ನಟ ಅಭಿಷೇಕ್‌ ಬಚ್ಚನ್‌ ಅವರನ್ನು ಅಪ್ಪಿದ್ದರು. ಇದರ ಚಿತ್ರಗಳು ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿತ್ತು.

9. ಆ್ಯಂಟನಿ ಅಮ್ಮಿರತಿ
ಫ್ರೆಂಚ್‌ ಪೋಲ್ವಾಲ್ಟ್ ಪಟು ಆ್ಯಂಟನಿ ಅಮ್ಮಿರತಿ, ಸ್ಪರ್ಧೆಯ ವೇಳೆ ತನ್ನ ಮರ್ಮಾಂಗ ಪೋಲ್‌ಗೆ ತಾಗಿ ವೈಫ‌ಲ್ಯ ಅನುಭವಿಸಿದ್ದರು. ಇದರ ವೀಡಿಯೋ ವೈರಲ್‌ ಆಗಿ ಅನೇಕರು ಮುಸಿಮುಸಿ ನಗುವಂತೆ ಮಾಡಿತ್ತು.

10. ನೋವಾ ಲೈಲ್ಸ್‌
100 ಮೀ. ಓಟದಲ್ಲಿ ಬಂಗಾರ ಗೆದ್ದಿದ್ದ ಅಮೆರಿಕದ ಸ್ಟ್ರಿಂಟರ್‌ ನೋವಾ ಲೈಲ್ಸ್‌ ಕೂಡ ಈ ಬಾರಿ ಬಹಳ ಸುದ್ದಿಯಾಗಿದ್ದರು. ಕಾರಣ, 100 ಮೀ.ನಲ್ಲಿ 9.79 ಸಾಧನೆ ತೋರಿದ್ದ ಅವರಿಗೆ ಕೊರೊನಾ ಸೋಂಕು ತಗಲಿತ್ತು.

Advertisement

Udayavani is now on Telegram. Click here to join our channel and stay updated with the latest news.

Next