ಪ್ಯಾರಿಸ್: ಮಂಗಳವಾರದ ಒಲಿಂಪಿಕ್ಸ್ ಹಾಕಿ ಮುಖಾಮುಖೀಯಲ್ಲಿ ಐರ್ಲೆಂಡ್ ತಂಡವನ್ನು 2-0 ಗೋಲುಗಳಿಂದ ಮಣಿಸಿದ ಭಾರತ ಕ್ವಾರ್ಟರ್ ಫೈನಲ್‌ಗೆ ಒಂದು ಕಾಲಿರಿಸಿದೆ. ಎರಡೂ ಗೋಲುಗಳನ್ನು ನಾಯಕ ಹರ್ಮನ್‌ಪ್ರೀತ್ ಸಿಂಗ್ ಬಾರಿಸಿದರು.
ನ್ಯೂಜಿಲ್ಯಾಂಡ್ ಹಾಗೂ ಆರ್ಜೆಂಟೀನ ವಿರುದ್ಧದ ಹಿಂದಿನೆರಡೂ ಪಂದ್ಯಗಳಲ್ಲಿ ಆಪತಾºಂಧವನ ಪಾತ್ರ ವಹಿಸಿದ್ದ ಹರ್ಮನ್‌ಪ್ರೀತ್ ಸಿಂಗ್ ಐರ್ಲೆಂಡ್ ವಿರುದ್ಧವೂ ಪ್ರಮುಖ ಭೂಮಿಕೆಯಲ್ಲಿ ಕಾಣಿಸಿಕೊಂಡರು. ಪಂದ್ಯದ 13ನೇ ಹಾಗೂ 19ನೇ ನಿಮಿಷಗಳಲ್ಲಿ ಗೋಲು ಸಿಡಿಸಿ ಭಾರತಕ್ಕೆ ಮೇಲುಗೈ ಒದಗಿಸಿದರು.
ಎಂದಿನಂತೆ ಭಾರತ ಪೆನಾಲ್ಟಿ ಕಾರ್ನರ್‌ಗಳನ್ನು ಗೋಲಾಗಿಸುವ ಅನೇಕ ಅವಕಾಶಗಳನ್ನು ಕೈಚೆಲ್ಲಿತು. ಇಲ್ಲವಾದರೆ ಗ್ರೂಪ್ “ಬಿ’ಯಲ್ಲೇ ಅತ್ಯಂತ ದುರ್ಬಲ ಎದುರಾಳಿಯಾಗಿದ್ದ ಐರ್ಲೆಂಡ್ ವಿರುದ್ಧ ಭಾರತ ಇನ್ನೂ ದೊಡ್ಡ ಅಂತರದಿಂದ ಗೆಲ್ಲಬಹುದಿತ್ತು.
ಭಾರತ 2 ಗೆಲುವು ಹಾಗೂ ಒಂದು ಡ್ರಾ ಫಲಿತಾಂಶದೊಂದಿಗೆ 7 ಅಂಕ ಗಳಿಸಿದೆ. ಮುಂದಿನ ಪಂದ್ಯಗಳಲ್ಲಿ ಬಲಿಷ್ಠ ಬೆಲ್ಜಿಯಂ (ಆ. 1) ಮತ್ತು ಆಸ್ಟ್ರೇಲಿಯ (ಆ. 2) ತಂಡಗಳನ್ನು ಎದುರಿಸಲಿದೆ.
ಪ್ರತೀ ವಿಭಾಗದ ಅಗ್ರ 4 ತಂಡಗಳು ಕ್ವಾರ್ಟರ್ ಫೈನಲ್ ಪ್ರವೇಶಿಸಲಿವೆ.