Advertisement
ಇವರನ್ನೊಳಗೊಂಡ ಜಾವೆಲಿನ್ ಫೈನಲ್ ಗುರುವಾರ ನಡುರಾತ್ರಿ ನಡೆಯಲಿದೆ. “ನಿಮ್ಮನ್ನೇ ನಂಬಿದ್ದೇವೆ ನೀರಜ್’ ಎಂಬುದು ಭಾರತದ ಕ್ರೀಡಾಪ್ರೇಮಿಗಳ ಪ್ರಾರ್ಥನೆ.
Related Articles
ಟೋಕಿಯೊ ಒಲಿಂಪಿಕ್ಸ್‌ಗೆ ಹೋಲಿಸಿದರೆ ಈ ಬಾರಿಯ ಜಾವೆಲಿನ್ ಸ್ಪರ್ಧೆ ಹೆಚ್ಚು ಕಠಿನ. ಇಲ್ಲಿ 9 ಮಂದಿ 84 ಮೀ. ಗಡಿ ದಾಟಿ ನೇರವಾಗಿ ಫೈನಲ್‌ಗೆ ಆಯ್ಕೆಯಾಗಿರುವುದೇ ಇದಕ್ಕೆ ಕಾರಣ. ಇಲ್ಲಿನ 9 ಎಸೆತಗಾರರಲ್ಲಿ ಐವರು ಮೊದಲ ಪ್ರಯತ್ನದಲ್ಲೇ ಫೈನಲ್ ಅರ್ಹತೆ ಸಂಪಾದಿಸಿದ್ದಾರೆ. ನೀರಜ್ ಕೂಡ ಇವರಲ್ಲೊಬ್ಬರು. ಟೋಕಿಯೊದಲ್ಲಿ ನೇರ ಫೈನಲ್ ಅರ್ಹತೆ ಸಂಪಾದಿಸಿದವರ ಸಂಖ್ಯೆ 6ಕ್ಕೆ ಸೀಮಿತಗೊಂಡಿತ್ತು.
Advertisement
ಕಳೆದ 8 ವರ್ಷಗಳಿಂದಲೂ ವಿಶ್ವ ಮಟ್ಟದ ಸ್ಪರ್ಧೆಗಳಲ್ಲಿ ಅಮೋಘ ಸಾಧನೆ ದಾಖಲಿಸುತ್ತಲೇ ಬಂದಿರುವ ನೀರಜ್ ಚೋಪ್ರಾಗೆ ಈ ಕಠಿನ ಸವಾಲಿನ ಅರಿವಿಲ್ಲದೇ ಇಲ್ಲ. “ಫೈನಲ್‌ನಲ್ಲಿ ಎಲ್ಲರೂ ವಿಭಿನ್ನ ಸನ್ನಿವೇಶ ಎದುರಿಸುವ ಜತೆಗೆ ವಿಭಿನ್ನ ಮನಸ್ಥಿತಿ ಹೊಂದಿರುತ್ತಾರೆ. ಇಲ್ಲಿ ಉತ್ತಮ ಪೈಪೋಟಿ ಕಂಡುಬರಲಿದೆ. ನೇರ ಅರ್ಹತೆ ಸಂಪಾದಿಸಿದವರ ತಯಾರಿ ಅತ್ಯುತ್ತಮವಾಗಿರುತ್ತದೆ’ ಎಂಬುದಾಗಿ ನೀರಜ್ ಅರ್ಹತಾ ಸುತ್ತಿನ ಬಳಿಕ ಹೇಳಿದ್ದರು.
ನೀರಜ್ ಚೋಪ್ರಾ ಚಿನ್ನ ಉಳಿಸಿಕೊಂಡರೆ ಒಲಿಂಪಿಕ್ಸ್‌ನಲ್ಲಿ ನೂತನ ಇತಿಹಾಸ ಬರೆದ ಭಾರತೀಯ ಕ್ರೀಡಾಪಟುವಾಗಿ ಮೂಡಿಬರಲಿದ್ದಾರೆ. ಎರಡು ಚಿನ್ನ ಗೆದ್ದ ದೇಶದ ಏಕೈಕ ಆ್ಯತ್ಲೀಟ್ ಎಂಬ ಹಿರಿಮೆಗೆ ಪಾತ್ರರಾಗಲಿದ್ದಾರೆ. ಈವರೆಗೆ ಪಿ.ವಿ. ಸಿಂಧು (1 ಬೆಳ್ಳಿ, 1 ಕಂಚು), ಕುಸ್ತಿಪಟು ಸುಶೀಲ್ ಕುಮಾರ್ (1 ಬೆಳ್ಳಿ, 1 ಕಂಚು) ಮತ್ತು ಮನು ಭಾಕರ್ (2 ಕಂಚು) ಮಾತ್ರ ಅವಳಿ ಪದಕ ಜಯಿಸಿದ್ದಾರೆ.
ಅರ್ಹತಾ ಸುತ್ತಿನ ಹೀರೋಅರ್ಹತಾ ಸುತ್ತಿನಲ್ಲಿ ನೀರಜ್ ಚೋಪ್ರಾ ಅವರದು ಅಮೋಘ ಪರಾಕ್ರಮ. ಒಂದೇ ಎಸೆತಕ್ಕೆ 89.34 ಮೀ. ಸಾಧನೆಗೈದು ಮೊದಲ ಸ್ಥಾನದೊಂದಿಗೆ “ಮಿಲಿಯನ್ಸ್ ಹೋಪ್ಸ್’ ಮೂಡಿಸಿದ ಹೆಗ್ಗಳಿಕೆ ಇವರದು. ಇದು ಅವರ ಜಾವೆಲಿನ್ ಬಾಳ್ವೆಯ 2ನೇ ಶ್ರೇಷ್ಠ ನಿರ್ವಹಣೆಯಷ್ಟೇ ಅಲ್ಲ, ಒಲಿಂಪಿಕ್ಸ್ ಅರ್ಹತಾ ಸುತ್ತಿನಲ್ಲೇ 2ನೇ ಅತ್ಯುತ್ತಮ ಸಾಧನೆಯಾಗಿದೆ. 2000ದ ಸಿಡ್ನಿ ಒಲಿಂಪಿಕ್ಸ್ ಅರ್ಹತಾ ಸುತ್ತಿನಲ್ಲಿ ಜಾನ್ ಝೆಲೆಜ್ನಿ 89.39 ಮೀ. ಎಸೆದದ್ದು ದಾಖಲೆ. ಫೈನಲ್‌ನಲ್ಲಿ ಚೋಪ್ರಾ 90 ಮೀ. ಗಡಿ ತಲುಪಿಯಾರೇ ಎಂಬುದೊಂದು ಕುತೂಹಲ. ಗ್ರೆನೆಡಾದ 2 ಬಾರಿಯ ವಿಶ್ವ ಚಾಂಪಿಯನ್ ಆ್ಯಂಡರ್ಸನ್ ಪೀಟರ್ (ಗರಿಷ್ಠ: 93.07 ಮೀ.), ಜರ್ಮನಿಯ ಜೂಲಿಯನ್ ವೆಬರ್, ಪಾಕಿಸ್ಥಾನದ ಅರ್ಷದ್ ನದೀಮ್, ಜೆಕ್ ಗಣರಾಜ್ಯದ ಜಾಕುಬ್ ವಾದೆÉಶ್ ಅವರೆಲ್ಲ ಫೈನಲ್‌ನಲ್ಲಿ ಜಬರ್ದಸ್ತ್ ಪ್ರದರ್ಶನ ನೀಡುವ ಎಲ್ಲ ಸಾಧ್ಯತೆ ಇದೆ.