Advertisement

Parimala D’souza Movie Review; ನಿಗೂಢ ಹಾದಿಯಲ್ಲಿ ಪರಿಮಳ ಹೆಜ್ಜೆ

11:36 AM Sep 17, 2023 | Team Udayavani |

ನಗು ನಗುತ್ತಾ ಜಾಲಿಯಾಗಿ ಸಾಗುತ್ತಿರುವ ಸಂಸಾರದಲ್ಲೊಂದು ಆಘಾತ ನಡೆದೇ ಬಿಡುತ್ತದೆ. ಮನೆಯಲ್ಲೊಂದು ಕೊಲೆಯಾಗುವ ಮೂಲಕ ಇಡೀ ಸಂಸಾರದಲ್ಲಿ ಅಲ್ಲೋಲ- ಕಲ್ಲೋಲ. ಹಾಗಾದರೆ ಕೊಲೆ ಮಾಡಿದವರು ಯಾರು, ಕೊಲೆಯ ಹಿಂದಿನ ಕಾರಣ ಏನು ಎಂಬ ಹುಡುಕಾಟ ಶುರು… ಪೊಲೀಸ್‌ ಎಂಟ್ರಿ, ಮನೆಯವರಿಗೆ ಟೆನನ್‌ ಶುರು… ಇದು ಈ ವಾರ ತೆರೆಕಂಡಿರುವ “ಪರಿಮಳ ಡಿಸೋಜಾ’ ಸಿನಿಮಾದ ಒನ್‌ಲೈನ್‌. ಇಡೀ ಸಿನಿಮಾದಲ್ಲಿ ಪರಿಮಳ ಡಿಸೋಜಾ ಪಾತ್ರವೇ ಪ್ರಧಾನ. ಅದು ಹೇಗೆ ಎಂಬುದನ್ನು ನೀವು ತೆರೆಮೇಲೆ ನೋಡಬೇಕು.

Advertisement

ಇಡೀ ಸಿನಿಮಾದ ಕೊಲೆಯ ತನಿಖೆಯೊಂದರ ಸುತ್ತವೇ ಸಾಗುತ್ತದೆ. ಖಡಕ್‌ ಲೇಡಿ ಪೊಲೀಸ್‌ ಆಫೀಸರ್‌ ಜೊತೆಗೆ ಕಾಮಿಡಿ ಮಾಡುವ ಪೊಲೀಸ್‌ ಕೂಡಾ ಈ ತನಿಖೆಯ ಭಾಗವಾಗಿ ಸೀರಿಯಸ್‌ ಮಧ್ಯೆ ನಗಿಸುವ ಪ್ರಯತ್ನ ಮಾಡಿದ್ದಾರೆ. ತನಿಖಾ ಹಾದಿಯಲ್ಲಿ ಹಲವು ಸಂಶಯಗಳು, ವಿಚಾರಣೆಗಳು ಸಿನಿಮಾದ ಬಗೆಗಿನ ಕುತೂಹಲವನ್ನು ಹೆಚ್ಚುವಂತೆ ಮಾಡಿದ್ದು ನಿರ್ದೇಶಕರ ಜಾಣ್ಮೆ. ಜೊತೆಗೆ ಸಿನಿಮಾ ಸೀಕ್ರೇಟ್‌ ಅನ್ನು ಆರಂಭದಲ್ಲೇ ಹೇಳದೇ ಕ್ಲೈಮ್ಯಾಕ್ಸ್‌ನಲ್ಲಿ ಹೇಳುವ ಮೂಲಕ ಸಿನಿಮಾದುದ್ದಕ್ಕೂ ಕುತೂಹಲವನ್ನು ಕಾಯ್ದುಕೊಂಡು ಬರುವಲ್ಲಿ ಯಶಸ್ವಿಯಾಗಿದ್ದಾರೆ. ಥ್ರಿಲ್ಲರ್‌ನೊಂದಿಗೆ ತೆರೆದುಕೊಳ್ಳುವ ಈ ಸಿನಿಮಾ ಮುಂದೆ ತಾಯಿ ಸೆಂಟಿಮೆಂಟ್‌ನತ್ತ ವಾಲುತ್ತದೆ. ಇಲ್ಲೊಂದು ಫ್ಲ್ಯಾಶ್‌ಬ್ಯಾಕ್‌ ಕೂಡಾ ಇದೆ.

ಮೊದಲೇ ಹೇಳಿದಂತೆ ಸಿನಿಮಾದ ಹೈಲೈಟ್ಸ್‌ಗಳಲ್ಲಿ ಕ್ಲೈಮ್ಯಾಕ್ಸ್‌ ಕೂಡಾ ಒಂದು. ಇಲ್ಲಿ ಹೀರೋ, ಹೀರೋಯಿನ್‌ ಎಂಬುದಿಲ್ಲ. ಕಥೆಯ ಜೊತೆಗೆ ಪಾತ್ರಗಳು ಪ್ರಯಣಿಸುತ್ತವೆ. ಕಾಮಿಡಿ ಪೊಲೀಸ್‌ಗೂ ಒಂದು ಡ್ಯುಯೆಟ್‌ ಸಾಂಗ್‌ ನೀಡಲಾಗಿದೆ.

ಚಿತ್ರದಲ್ಲಿ ಶ್ರೀನಿವಾಸ್‌ ಪ್ರಭು, ಭವ್ಯ, ಕೋಮಲ ಬನವಾಸೆ, ವಿನೋದ್‌ ಶೇಷಾದ್ರಿ, ಶಿವಕುಮಾರ್‌ ಆರಾದ್ಯ, ಮೀಸೆ ಆಂಜನಪ್ಪ, ಶ್ವೇತಾ ರಮೇಶ್‌, ಸುನೀಲ್‌ ಎ ಮೋಹಿತೆ ಸೇರಿದಂತೆ ಅನೇಕರು ನಟಿಸಿದ್ದಾರೆ

Advertisement

Udayavani is now on Telegram. Click here to join our channel and stay updated with the latest news.

Next