Advertisement

ನಾಸೀರುದ್ದೀನ್‌ ಶಾ ವಾಕ್‌ ಸ್ವಾತಂತ್ರ್ಯ ಹೇಳಿಕೆ: ಪರೇಶ್‌ ಟಾಂಗ್‌

11:17 AM Jan 08, 2019 | udayavani editorial |

ಮುಂಬಯಿ :  ದೇಶದಲ್ಲಿನ ವಾಕ್‌ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ಬಾಲಿವುಡ್‌ ಹಿರಿಯ ನಟ ನಾಸೀರುದ್ದೀನ್‌ ಶಾ ಈಚೆಗೆ ನೀಡಿದ ವಿವಾದಾತ್ಮಕ ಹೇಳಿಕೆಗೆ ತಿರುಗೇಟು  ನೀಡಿರುವ ಬಾಲಿವುಡ್‌ ನಟ ಮತ್ತು ಬಿಜೆಪಿ ಸಂಸದ ಪರೇಶ್‌ ರಾವಲ್‌ ಅವರು “ನೀವು ಮುಕ್ತವಾಗಿ ನಿಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದೀರಿ ಎಂದರೆ ದೇಶದಲ್ಲಿ ಪೂರ್ಣ ವಾಕ್‌ ಸ್ವಾತಂತ್ರ್ಯ ಇದೆ ಎಂದರ್ಥ’ ಎಂದು ಹೇಳಿದ್ದಾರೆ.  

Advertisement

“ನಿಮ್ಮ ನಿರ್ದಿಷ್ಟ ಹೇಳಿಕೆಗೆ ಪ್ರತಿಕ್ರಿಯಿಸಲು ನಾನು ಬಯಸುವುದಿಲ್ಲ; ಆದರೆ ಭಾರತದಲ್ಲಿ ಬದುಕುವುದರಲ್ಲಿ ಅರ್ಥ ಇಲ್ಲ ಎಂದು ನೀವು ಹೇಳಿರುವುದು ಸರಿಯಲ್ಲ; ನಾನದನ್ನು ಒಪ್ಪುವುದಿಲ್ಲ. ಘಟನೆಗಳು ನಡೆಯುತ್ತಲೇ ಇರುತ್ತವೆ; ಅವನ್ನು ಸಾಮಾನ್ಯಿಕರಿಸುವುದು ಸರಿಯಲ್ಲ’ ಎಂದು ಪರೇಶ್‌ ರಾವ್‌ ಎಎನ್‌ಐ ಜತೆಗೆ ಮಾತನಾಡುತ್ತಾ ಹೇಳಿದರು. 

ಜನವರಿ 4ರಂದು ನಾಸಿರುದ್ದೀನ್‌ ಶಾ ಅವರು ವಿಡಿಯೋ ಒಂದರಲ್ಲಿ “ಈ ದೇಶದಲ್ಲಿ ಹಕ್ಕು ಆಗ್ರಹಿಸುವವರಿಗೆ ಬೀಗ ಜಡಿಯಲಾಗುತ್ತದೆ. ಕಲಾವಿದರು, ನಟರು, ಕವಿಗಳು, ಚಿಂತಕರು ಮತ್ತು ಜ್ಞಾನವೇತ್ತರ ಧ್ವನಿಯನ್ನು ಹಿಸುಕಲಾಗುತ್ತಿದೆ; ಪತ್ರಕತರ ಬಾಯಿಯನ್ನೂ ಮುಚ್ಚಲಾಗುತ್ತಿದೆ’ ಎಂದು ಹೇಳಿದ್ದರು.  

“ದೇಶದಲ್ಲಿ ದ್ವೇಷದ ಗೋಡೆಗಳನ್ನು ನಿರ್ಮಿಸಲಾಗುತ್ತಿದೆ; ಧರ್ಮದ ಹೆಸರಿನಲ್ಲಿ ಅಮಾಯಕರನ್ನು ಕೊಲ್ಲಲಾಗುತ್ತಿದೆ; ಈ ಅನ್ಯಾಯದ ವಿರುದ್ಧ ಧ್ವನಿ ಎತ್ತಿದವರ ಕಚೇರಿಗಳ ಮೇಲೆ ದಾಳಿ ನಡೆಸಲಾಗುತ್ತಿದೆ ಮತ್ತು ಅವರ ಲೈಸನ್ಸ್‌ ರದ್ದು ಮಾಡಲಾಗುತ್ತದೆ’ ಎಂದು ನಾಸಿರುದ್ದೀನ್‌ ಶಾ ಹೇಳಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next