Advertisement
ಪಿಇಎಸ್ ವಿಶ್ವವಿದ್ಯಾಲಯದಲ್ಲಿ ಬುಧವಾರ ಹಮ್ಮಿಕೊಂಡಿದ್ದ ವಿಶ್ವ ವಿದ್ಯಾಲಯದ ಸಂಸ್ಥಾಪನ ದಿನಾಚರಣೆ ಮತ್ತು ಪ್ರೊ.ಸಿ.ಎನ್.ಆರ್.ರಾವ್ ಮತ್ತು ಪ್ರೊ.ಎಂ.ಆರ್.ಡಿ.ಪ್ರತಿಭಾ ವಿದ್ಯಾರ್ಥಿ ವೇತನ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಅನೇಕ ವರ್ಷಗಳ ಹಿಂದೆ ಶಿಕ್ಷಣ ಗಗನ ಕುಸುಮವಾಗಿತ್ತು. ಉನ್ನತ ಶಿಕ್ಷಣ ಎಲ್ಲರಿಗೂ ಸಿಗುತ್ತಿರಲಿಲ್ಲ. ಆಗ ಕೆಲವೇ ವಿದ್ಯಾಸಂಸ್ಥೆಗಳಿದ್ದವು. ಅಲ್ಲಿ ಸೀಟು ಪಡೆಯಲು ಹಣ ಅಥವಾ ಮೆರಿಟ್ ಇರಬೇಕಿತ್ತು. ಇಂದಿನ ವಿದ್ಯಾರ್ಥಿಗಳು ಶಿಕ್ಷಣದ ಸುವರ್ಣ ಯುಗದಲ್ಲಿದ್ದಾರೆ. ಯಾರು ಬೇಕಾದರೂ ಉನ್ನತ ಶಿಕ್ಷಣ ಪಡೆಯಲು ಮುಕ್ತ ಅವಕಾಶ ಇದೆ. ಶಿಕ್ಷಣ ಸಂಸ್ಥೆಗಳ ಸಂಖ್ಯೆಯೂ ಹೆಚ್ಚಾಗಿದೆ. ವಿದ್ಯಾರ್ಥಿಗಳು ಇರುವ ಅವಕಾಶಗಳನ್ನು ಸದುಪ ಯೋಗ ಪಡಿಸಿಕೊಂಡು ದೇಶದ ಅಭಿವೃದ್ಧಿಯಲ್ಲಿ ಪಾಲುದಾ ರರಾಗಬೇಕು ಎಂದು ಸಲಹೆ ನೀಡಿದರು. ಅವಕಾಶಗಳು ಸೃಷ್ಟಿಯಾಗಬೇಕು: ಅವಕಾಶಗಳ ಸೃಷ್ಟಿ ಹೆಚ್ಚಾದಾಗ ದೇಶದ ಆರ್ಥಿಕ ಮತ್ತು ಸಾಮಾಜಿಕ ಸ್ಥಿತಿ ಬದಲಾಗುತ್ತದೆ. ಭಾರತ ಬೃಹತ್ ದೇಶವಾಗಿದ್ದು, ಸ್ವಾತಂತ್ರ್ಯಾನಂತರ ಹಲವು ಸುಧಾರಣೆ ಕಂಡಿದೆ. ಆದರೂ, ಆಸಕ್ತಿದಾಯಕ ವಿಚಾರದಲ್ಲಿ ಅವಕಾಶಗಳು ಹೆಚ್ಚಾಗಬೇಕು. ಇದರಿಂದ ಬದಲಾವಣೆ ಸಾಧ್ಯ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.
Related Articles
ನಿವೃತ್ತ ಐಎಎಸ್ ಅಧಿಕಾರಿ ಎಚ್. ಸಿದ್ದಯ್ಯ, ಪಿಇಎಸ್ ವಿವಿ ಸಮಕುಲಾಧಿಪತಿ ಪ್ರೊ.ಡಿ.ಜವಹರ್, ಡಾ. ಕೆ.ಎನ್.ಬಿ.
ಮೂರ್ತಿ ಮೊದಲಾದವರು ಇದ್ದರು.
Advertisement
ವಿದ್ಯಾರ್ಥಿಗಳಿಗೆ ಪುರಸ್ಕಾರಏಕಲವ್ಯ ಪ್ರಶಸ್ತಿ ಪಡೆದ ಕಾಲೇಜಿನ ವಿದ್ಯಾರ್ಥಿ ಟಿ.ಕೆ. ಕೀರ್ತನಾ, 2018ರ ಗೇಟ್ ಪರೀಕ್ಷೆಯಲ್ಲಿ ಪ್ರಥಮ ಸ್ಥಾನಗಳಿಸಿದ ಬಿ.ರಾಹುಲ್ ಕಶ್ಯಪ್ ಸೇರಿ 1273 ವಿದ್ಯಾರ್ಥಿಗಳಿಗೆ ಪ್ರೊ.ಸಿ.ಎನ್.ಆರ್.ರಾವ್ ವಿದ್ಯಾರ್ಥಿ ವೇತನ, 230 ವಿದ್ಯಾರ್ಥಿಗಳಿಗೆ ಪ್ರೊ.ಎಂ.ಆರ್.ಡಿ ವಿದ್ಯಾರ್ಥಿ ವೇತನ ಮತ್ತು 3,708 ವಿದ್ಯಾರ್ಥಿಗಳಿಗೆ ಅತ್ಯುನ್ನತ ಶ್ರೇಣಿ ಪ್ರಶಸ್ತಿ ಸೇರಿ ಒಟ್ಟು 5211 ವಿದ್ಯಾರ್ಥಿಗಳಿಗೆ 2.99 ಕೋಟಿ ರೂ. ಮೌಲ್ಯದ ವಿದ್ಯಾರ್ಥಿವೇತನ ನೀಡಲಾಯಿತು. ಹೋರಾಟದ ಬದುಕು
200 ವರ್ಷಗಳ ಹಿಂದೆ ಕರಾವಳಿ ಮತ್ತು ಗೋವಾ ಭಾಗಗಳಲ್ಲಿ ನೆಲೆಸಿದ್ದ ಬ್ರಿಟೀಷರು, ಪೋರ್ಚುಗೀಸರು, ಡಚ್ಚರು, ಫ್ರೆಂಚರು ಹೀಗೆ ಎಲ್ಲರೊಂದಿಗೂ ದಕ್ಷಿಣ ಕನ್ನಡದವರು ಬದುಕಿಗಾಗಿ ಹೋರಾಟ ನಡೆಸುವ ಪರಿಸ್ಥಿತಿ ಇತ್ತು. ಕೈಗಾರಿಕೆಗಳ ಪ್ರಗತಿಯಿಂದಾಗಿ ಅಲ್ಲಿಂದ ಬೇರೆ ಊರಿಗೆ ಹೋಗಿ ನೆಲೆಸಿದೆವು. ಹೀಗಾಗಿ ವಿಶ್ವದ ಬಹುತೇಕ ಭಾಗದಲ್ಲಿ ದಕ್ಷಿಣ ಕನ್ನಡದವರು ನೆಲೆಸಿದ್ದಾರೆ. ಅವರ ಭಾಷೆ, ಹೆಸರು ಕೇಳಿದ ಕೂಡಲೇ ದಕ್ಷಿಣ ಕನ್ನಡದ ವಾಸನೆ ಬರುತ್ತದೆ ಎಂದು ವೀರೇಂದ್ರ ಹೆಗ್ಗಡೆ ಹೇಳಿದರು.