Advertisement

ಹೆತ್ತವರು ಮಕ್ಕಳಿಗೆ ಮಾರ್ಗದರ್ಶನ ನೀಡಿ: ಮಾಣಿಲ ಶ್ರೀ

09:25 AM Mar 27, 2018 | Team Udayavani |

ಕಾಸರಗೋಡು: ಅಡ್ಡದಾರಿ ಹಿಡಿಯದಂತೆ ಮಕ್ಕಳಿಗೆ ಹೆತ್ತವರು ಸತ್ಸಂಪ್ರದಾಯ, ಆಚಾರ, ವಿಚಾರಗಳ ಬಗ್ಗೆ ಮಾರ್ಗದರ್ಶನ ನೀಡಬೇಕೆಂದು ಶ್ರೀಧಾಮ ಮಾಣಿಲದ ಯೋಗಿ ಕೌಸ್ತುಭ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಅವರು ಹೇಳಿದರು. ಕೋಟೆಕಣಿಯ ಶ್ರೀ ರಾಮನಾಥ ದೇವಸ್ಥಾನದಲ್ಲಿ ರಾಮನವಮಿಯ ಅಂಗವಾಗಿ ಆಯೋಜಿಸಿದ ಶ್ರೀ ರಾಮ ತಾರಕ ಯಜ್ಞದ ಧಾರ್ಮಿಕ ಸಭೆಯಲ್ಲಿ ಅವರು ಆಶೀರ್ವಚನವಿತ್ತು ಮಾತನಾಡಿದರು.
ಯಜ್ಞ ಅಂದರೆ ಬಹಳಷ್ಟು ಅರ್ಥವಿದೆ. ಯಜ್ಞ ಅಂದರೆ ತಮ್ಮ ಭಾವನೆ, ತನುವನ್ನು, ಭಕ್ತಿಯನ್ನು, ಪ್ರೀತಿಯನ್ನು ಅರ್ಪಿಸುವುದು. ಈ ಮೂಲಕ ಭಗವಂತನನ್ನು ಒಲಿಸಿಕೊಳ್ಳುವುದು. ಸಮಾಜದಲ್ಲಿ ಸುಖ, ಶಾಂತಿ ನೆಲೆಗೊಳ್ಳುವಂತೆ ಪ್ರಾರ್ಥಿಸುವ ಉದ್ದೇಶವನ್ನು ಹೊಂದಿದೆ. ಹೆತ್ತಬ್ಬೆಯ ಋಣವನ್ನು ತೀರಿಸಲು ಸಾಧ್ಯವಿಲ್ಲ. ಆದರೂ ಸಾಕಷ್ಟು ಪ್ರಯತ್ನವನ್ನು ಮಾಡಬಹುದು ಎಂದು ಅಭಿಪ್ರಾಯಪಟ್ಟ ಸ್ವಾಮೀಜಿಯವರು ಮಕ್ಕಳನ್ನು ಸತ್ಪ್ರಜೆಯನ್ನಾಗಿ ಬೆಳೆಸುವುದರಲ್ಲಿ ಹೆತ್ತಬ್ಬೆಯ ಪಾತ್ರ ಮಹತ್ವದ್ದಾಗಿದೆ. ಸಂಸ್ಕೃತಿ, ಆಚಾರ, ವಿಚಾರಗಳನ್ನು ಕೈಬಿಡುತ್ತಿರುವುದರಿಂದ ಮನೆಯಲ್ಲಿ ಅಶಾಂತಿಗೆ ಕಾರಣವಾಗುತ್ತದೆ. ಮನಸ್ಸು ಸ್ವಚ್ಛವಾದಾಗ ದೇಶ ಸ್ವತ್ಛವಾಗುತ್ತದೆ ಎಂದರು.

Advertisement

ಕಾರ್ಯಕ್ರಮದಲ್ಲಿ ಯಕ್ಷಗಾನ ಭಾಗವತ ರಾಮಕೃಷ್ಣ ಮಯ್ಯ ಸಿರಿಬಾಗಿಲು ಅವರನ್ನು ಗೌರವಿಸಲಾಯಿತು. ಆರ್‌ಎಸ್‌ಎಸ್‌ ಸಂಘಚಾಲಕ ದಿನೇಶ್‌ ಮಡಪ್ಪುರ ಮುಖ್ಯ ಅತಿಥಿಯಾಗಿ ಭಾಗವಹಿಸಿದರು. ಬದಿಯಡ್ಕದ ಶ್ರೀ ಭಗವತಿ ಟೆಕ್ಸ್‌ಟೈಲ್ಸ್‌ ಮಾಲಕ ನರೇಂದ್ರ ಬಿ.ಎನ್‌, ನಗರಸಭಾ ಸದಸ್ಯೆ ಸಂಧ್ಯಾ ಶೆಟ್ಟಿ, ಶ್ರೀ ರಾಮ ತಾರಕ ಯಜ್ಞ ಸಮಿತಿಯ ಮಹಿಳಾ ಘಟಕದ ಅಧ್ಯಕ್ಷೆ ಪ್ರೇಮಲತಾ ಎಲ್ಲೋಜಿ ರಾವ್‌, ಹಿರಿಯ ಕನ್ನಡ ಹೋರಾಟಗಾರ ನ್ಯಾಯವಾದಿ ಅಡೂರು ಉಮೇಶ್‌ ನಾೖಕ್‌ ಅಭ್ಯಾಗತರಾಗಿ ಭಾಗವಹಿಸಿದರು. ಕಾರ್ಯಕ್ರಮದಲ್ಲಿ ಯಜ್ಞ ಸಮಿತಿ ಅಧ್ಯಕ್ಷ ಕೃಷ್ಣ ಪ್ರಸಾದ್‌ ಕೋಟೆಕಣಿ ಅಧ್ಯಕ್ಷತೆ ವಹಿಸಿದರು. ಕೋಟೆಕಣಿಯ ಶ್ರೀ ರಾಮನಾಥ ದೇವಸ್ಥಾನದ ಅಧ್ಯಕ್ಷ ಶರತ್‌ ಕುಮಾರ್‌ ಉಪಸ್ಥಿತರಿದ್ದರು. ಹರಿದಾಸ ಜಯಾನಂದ ಕುಮಾರ್‌ ಹೊಸದುರ್ಗ ಸ್ವಾಗತಿಸಿದರು. ಯಜ್ಞ ಸಮಿತಿ ಪ್ರಧಾನ ಸಂಚಾಲಕ ಗುರುಪ್ರಸಾದ್‌ ಕೋಟೆಕಣಿ ಪ್ರಾಸ್ತಾವಿಕ ನುಡಿದರು. ಯಜ್ಞ ಸಮಿತಿ ಪ್ರಧಾನ ಕಾರ್ಯದರ್ಶಿ ಹರಿಶ್ಚಂದ್ರ ಸೂರ್ಲು ವಂದಿಸಿದರು. ಯಜ್ಞ ಸಮಿತಿ ಕಾರ್ಯದರ್ಶಿ ಸತ್ಯನಾರಾಯಣ ಅಮೈ ಕಾರ್ಯಕ್ರಮ ನಿರೂಪಿಸಿದರು. ಇದಕ್ಕೂ ಮುನ್ನ ಶ್ರೀಧಾಮ ಮಾಣಿಲದ ಯೋಗಿ ಕೌಸ್ತುಭ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಅವರಿಗೆ ಪೂರ್ಣಕುಂಭ ಸ್ವಾಗತ ನೀಡಲಾಯಿತು.


ಕಾರ್ಯಕ್ರಮದ ಅಂಗವಾಗಿ ಬೆಳಗ್ಗೆ ಮಹಾಗಣಪತಿ ಹೋಮ, ವಿದ್ಯಾಶ್ರೀ ಮಂಗಳೂರು ಅವರಿಂದ ಸ್ಯಾಕ್ಸೋಫೋನ್‌ ವಾದನ,  ಮಧ್ಯಾಹ್ನ ವೇದಮೂರ್ತಿ ಕಸಕೋಡಿ ಸೂರ್ಯನಾರಾಯಣ ಭಟ್‌ ಅವರಿಂದ ಶ್ರೀ ರಾಮತಾರಕ ಯಜ್ಞದ ಬಗ್ಗೆ ಉಪನ್ಯಾಸ, ಅನ್ನಪ್ರಸಾದ ವಿತರಣೆ, ಹರಿದಾಸ ಜಯಾನಂದ ಕುಮಾರ್‌ ಹೊಸದುರ್ಗ ಅವರಿಂದ ‘ಶ್ರೀ ರಾಮತಾರಕ ಯಜ್ಞ’ ಹರಿಕಥೆ, ಸ್ಥಳೀಯ ಪ್ರತಿಭೆಗಳಿಂದ ನೃತ್ಯ ವೈವಿಧ್ಯ ಜರಗಿತು. ರಾತ್ರಿ ಓಜ ಸಾಹಿತ್ಯ ಕೂಟ ಮಂಜೇಶ್ವರ ಅವರಿಂದ ಭಜನೆ, ರಾತ್ರಿ ಮಹಾಪೂಜೆ, ಯಕ್ಷಗಾನ ಬಯಲಾಟ “ಸಂಪೂರ್ಣ ರಾಮಾಯಣ’ ಜರಗಿತು.

Advertisement

Udayavani is now on Telegram. Click here to join our channel and stay updated with the latest news.

Next