ಹೈದರಾಬಾದ್ : ತನ್ನ ಓರಗೆಯ ಹುಡುಗರೊಂದಿಗೆ ಪ್ರೀತಿ ಮತ್ತು ಅನ್ಯೋನ್ಯತೆ ಇದ್ದಾಳೆ ಎನ್ನುವ ಕಾರಣಕ್ಕೆ ಕುಪಿತರಾದ ಹದಿಮೂರು ವರ್ಷ ಪ್ರಾಯದ ಹುಡುಗಿಯ ಹೆತ್ತವರು ಆಕೆಯನ್ನು ಕುತ್ತಿಗೆ ಹಿಸುಕಿ ಕೊಂದು, ‘ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ‘ ಎಂದು ಬಿಂಬಿಸುವ ಸಲುವಾಗಿ ಆಕೆಯ ದೇಹವನ್ನು ಸುಟ್ಟು ಹಾಕಿರುವ ನಂಬಲಸಾಧ್ಯವಾದ ಅತ್ಯಮಾನುಷ ಘಟನೆ ತೆಲಂಗಾಣದ ತೀಡೇದು ಗ್ರಾಮದಲ್ಲಿ ನಡೆದಿದೆ.
ತೆಲಂಗಾಣ ಪೊಲೀಸರು ಹುಡುಗಿಯ ತಂದೆ ಮತ್ತು ತಾಯಿ ಇಬ್ಬರನ್ನೂ ಬಂಧಿಸಿ ಕೊಲೆ ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ನಿನ್ನೆ ಮಂಗಳವಾರವಷ್ಟೇ ಹುಡುಗಿಯ ತಂದೆ ತನ್ನ ಮಗಳು ಸಹಪಾಠಿ ಹುಡುಗನೊಬ್ಬನೊಂದಿಗೆ ಅನ್ಯೋನ್ಯವಾಗಿ ಮಾತನಾಡುವುದನ್ನು ಕಂಡಿದ್ದ. ಬಳಿಕ ಮನೆಗೆ ಆಗಮಿಸಿದ ಆತ, ಮಗಳನ್ನು ಆ ಬಗ್ಗೆ ಪ್ರಶ್ನಿಸಿದ. ಸಿಟ್ಟಿನ ಆವೇಶದಲ್ಲಿ ಮಗಳನ್ನು ಮಾರಣಾಂತಿಕ ಹೊಡೆದು ಬಳಿಕ ಆಕೆಯ ಕುತ್ತಿಗೆಯನ್ನು ಬಿಗಿದು ಉಸಿರುಗಟ್ಟಿ ಸಾಯಿಸಿದ.
ತನ್ನ ಕ್ರೌರ್ಯಕ್ಕೆ ಮಗಳು ಸತ್ತು ಹೋಗಿದ್ದಾಳೆ ಎಂಬುದನ್ನು ಅರಿತ ಆತ, ಕಾನೂನಿನ ಪರಿಣಾಮಗಳಿಂದ ತಪ್ಪಿಸಿಕೊಳ್ಳಲು ಒಡನೆಯೇ ಮಗಳ ಶವವನ್ನು ಸುಟ್ಟು ಹಾಕಿದ.
ತೆಲಂಗಾಣದ ತೀಡೇದು ಗ್ರಾಮದಲ್ಲಿನ ಸರಕಾರಿ ಶಾಲೆಯಲ್ಲಿ 7ನೇ ತರಗತಿ ಓದುತ್ತಿದ್ದ ಹುಡುಗಿಯ ತನ್ನ ಸಹಪಾಠಿಗಳೊಂದಿಗೆ ಅನ್ಯೋನ್ಯವಾಗಿದ್ದಳು.
ಮಗಳ ಕೊಲೆಗೈದ ಹುಡುಗಿಯ ಹೆತ್ತವರನ್ನು ಸ್ಥಳೀಯ ನ್ಯಾಯಾಲಯ ನ್ಯಾಯಾಂಗ ಕಸ್ಟಡಿಗೆ ಒಪ್ಪಿಸಿದೆ. ಹುಡುಗಿಯ ತಂದೆ ತಾನು ತನ್ನ ಮಗಳನ್ನು ಸಿಟ್ಟಿನ ಭರದಲ್ಲಿ ಕೊಂದದ್ದು ಹೌದೆಂದು ತನ್ನ ಅಪರಾಧವನ್ನು ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.