Advertisement

ಶಿಕ್ಷಕರ ಜೊತೆ ಪಾಲಕರು ಕೈ ಜೋಡಿಸಿ: ರಾಮೇಗೌಡ

03:54 PM Dec 28, 2017 | Team Udayavani |

ಚನ್ನರಾಯಪಟ್ಟಣ: ಶಿಕ್ಷಕರ ಜತೆ ಪಾಲಕರು ಕೈ ಜೋಡಿಸಿದ್ದಲ್ಲಿ ಮಾತ್ರ ಶಿಕ್ಷಣ ವ್ಯವಸ್ಥೆ ಸರ್ವತೋಮುಖವಾಗಿ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಸಮೂಹ ಸಂಪನ್ಮೂಲ ವ್ಯಕ್ತಿ ರಾಮೇಗೌಡ ಹೇಳಿದರು.

Advertisement

ತಾಲೂಕಿನ ಕನುವನಘಟ್ಟ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಏರ್ಪಡಿಸಿದ್ದ ಪಾಲಕರ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿ, ಸರ್ಕಾರಿ ಶಾಲೆಗಳು ಉಳಿಯಲು ಪಾಲಕರ ಸಹಕಾರ ಅಗತ್ಯ ಎಂದರು.

ಸರ್ಕಾರಿ ಶಾಲೆಗಳಿಗೆ ಅಂಗನವಾಡಿ ಕೇಂದ್ರಗಳೇ ತಳಹದಿಯಾಗಲಿದ್ದು, ಶಾಲೆಗಳಲ್ಲಿ ನಡೆಯುವ ಎಲ್ಲ ಕಾರ್ಯಕ್ರಮಗಳಲ್ಲಿಯೂ ಸಹ ಅಂಗನವಾಡಿ ಪುಟಾಣಿಗಳಿಗೂ ಅವಕಾಶ ಕಲ್ಪಿಸಿ ಪ್ರೋತ್ಸಾಹ ನೀಡಬೇಕು ಎಂದು ತಿಳಿಸಿದರು.

ಮಕ್ಕಳ ಬಗ್ಗೆ ಎಚ್ಚರವಹಿಸಿ: ಗ್ರಾಮದ ಮುಖಂಡ ವೇಣುಗೋಪಾಲ್‌ ಮಾತನಾಡಿ, ಗ್ರಾಮೀಣ ಪ್ರದೇಶದ
ಜನತೆ ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಿದರೆ ಎಲ್ಲವೂ ಮುಗಿಯಿತು ಎಂದುಕೊಳ್ಳುತ್ತಾರೆ, ನಂತರ ಶಾಲೆಯತ್ತ ಸುಳಿಯುವುದಿರಲಿ ತಿರುಗಿಯೂ ನೋಡುವುದಿಲ್ಲ, ಆದರೆ ಪಾಲಕರ ದಿನ, ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸುವ ಮೂಲಕ ಪಾಲಕರನ್ನು ಶಾಲೆಯತ್ತ ಆಕರ್ಷಿಸುವುದು ಒಂದು ಉತ್ತಮ ಬೆಳವಣಿಗೆ, ಇಂತಹ ವೇದಿಕೆಗೆ ನಮ್ಮ ಗ್ರಾಮದ ಶಾಲೆ ಸಾಕ್ಷಿ ಹಾಗೂ ಮಾದರಿಯಾಗಿದೆ ಎಂದರು.

ಕ್ರೀಡಾಕೂಟದ ಫ‌ಲಿತಾಂಶ: ಆದರ್ಶ ದಂಪತಿಗಳು: ರಾಧ ಶಿವರಾಜ್‌.ಕೆ.ಎನ್‌(ಪ್ರಥಮ), ಭಾಗ್ಯಲಕ್ಷ್ಮೀ ಶಿವರಾಜ್‌ (ದ್ವಿತೀಯ), ಜೋಡಿ-ಗೂಡಿ ಆಡು: ಭಾರತಿ ನಾಗರಾಜ್‌ (ಪ್ರಥಮ), ರತ್ನ ಶಿವನಂಜೇಗೌಡ(ದ್ವಿತೀಯ), ಸಮತೋಲನ
ಸ್ವರ್ಧೆ: ಭಾಗ್ಯಮ್ಮ(ಪ್ರಥಮ), ಶೈಲಜಾ(ದ್ವಿತೀಯ), ಬೊಗಸೆಯಿಂದ ನೀರು ಸಂಗ್ರಹ: ಭಾಗ್ಯಲಕ್ಷ್ಮೀ (ಪ್ರಥಮ),
ಚಂದ್ರಕಲಾ (ದ್ವಿತೀಯ), ಅದೃಷ್ಟದ ಆಟ(ಮ): ಚಂದ್ರಕಲಾ (ಪ್ರಥಮ), ಶೋಭಾ(ದ್ವಿತೀಯ), ಗೋಣಿಚೀಲದ ಓಟ:
ಶಿವನಂಜೇಗೌಡ(ಪ್ರಥಮ), ಶಿವರಾಜು(ದ್ವಿತೀಯ), ಅದೃಷ್ಟದ ಆಟ(ಪು): ಗುರು(ಪ್ರಥಮ) ಹಾಗೂ ಶಿವರಾಜು(ದ್ವಿತೀಯ) ಸ್ಥಾನ ಪಡೆದರು.

Advertisement

ಎಸ್‌ಡಿಎಂಸಿ ಅಧ್ಯಕ್ಷ ಶಿವರಾಜ್‌, ಉಪಾಧ್ಯಕ್ಷೆ ನಾಗರತ್ನ, ಸದಸ್ಯರಾದ ದಿನೇಶ್‌, ಶಿವನಂಜೇಗೌಡ, ಲಕ್ಷ್ಮೀ, ರಾಧ, ಭಾಗ್ಯ, ಮುಖ್ಯಶಿಕ್ಷಕಿ ಎಚ್‌.ಎಸ್‌. ತೇಜಸ್ವಿನಿ, ಸಹಶಿಕ್ಷಕಿ ಡಿ.ಮಂಜುಳಾ, ಗ್ರಾಮದ ಪ್ರಮುಖರಾದ ವೇಣುಗೋಪಾಲ್‌, ಚಂದ್ರು, ರಮೇಶ್‌ ಹಾಗೂ ಇತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next