Advertisement

ಹೆತ್ತವರು ಜಗಳಗಂಟ ಮಕ್ಕಳನ್ನು ಹೊರಗಟ್ಟಬಹುದು: ದಿಲ್ಲಿ ಹೈಕೋರ್ಟ್‌

12:03 PM Mar 16, 2017 | udayavani editorial |

ಹೊಸದಿಲ್ಲಿ : ಆಸ್ತಿಪಾಸ್ತಿಗಾಗಿ ಹೆತ್ತವರನ್ನು ಹೊಡೆದು ಬಡಿದು, ಮನೆಯಿಂದ ಹೊರಹಾಕುವುದಾಗಿ ಬೆದರಿಸಿ ಹಿಂಸಿಸುವ ಪ್ರಾಪ್ತ ವಯಸ್ಸಿನ ಗಂಡು ಅಥವಾ ಹೆಣ್ಣು ಮಕ್ಕಳನ್ನು, ವಯಸ್ಸಾದ ಹೆತ್ತವರು ತಮ್ಮೊಂದಿಗೆ ಮನೆಯಲ್ಲಿ ಇರಿಸಿಕೊಳ್ಳಬೇಕಾಗಿಲ್ಲ; ಅಂತಹ ಹಿಂಸ್ರ ಮಕ್ಕಳನ್ನು ಹೆತ್ತವರು ನಿರ್ದಾಕ್ಷಿಣ್ಯವಾಗಿ ಮನೆಯಿಂದ ಹೊರಗಟ್ಟಬಹುದು ಎಂದು ದಿಲ್ಲಿ ಹೈಕೋರ್ಟ್‌ ಹೇಳಿದೆ.

Advertisement

ವಯಸ್ಸಾದ ಹೆತ್ತವರು ಸ್ವಂತ ಮನೆಯಲ್ಲೇ ವಾಸಿಸಿಕೊಂಡಿರಲಿ, ಬಾಡಿಗೆ ಮನೆಯಲ್ಲೇ ವಾಸಿಸಿಕೊಂಡಿರಲಿ – ಅವರು ವಯಸ್ಸಿಗೆ ಬಂದ ತಮ್ಮ ಹಿಂಸ್ರ ಗಂಡು ಅಥವಾ ಹೆಣ್ಣು ಮಕ್ಕಳನ್ನು ತಮ್ಮ ಜತೆಗೆ ಮನೆಯಲ್ಲಿ ಇರಿಸಿಕೊಳ್ಳಬೇಕಾದ ಕಾನೂನು ಬದ್ಧತೆಯನ್ನು ಹೊಂದಿರುವುದಿಲ್ಲ; ವಯಸ್ಸಾದ ತಾವು ತಮ್ಮ ಮನೆಯಲ್ಲಿ ಶಾಂತಿಯುತ ಜೀವನವನ್ನು ನಡೆಸುವುದಕ್ಕಾಗಿ ಪ್ರಾಯ ಪ್ರಬುದ್ಧರಾಗಿರುವ ತಮ್ಮ ಹಿಂಸ್ರ ಮಕ್ಕಳನ್ನು ಅವರು ಮನೆಯಿಂದ ಹೊರಗಟ್ಟಬಹುದಾಗಿದೆ ಎಂದು ದಿಲ್ಲಿ ಹೈಕೋರ್ಟಿನ ಜಸ್ಟಿಸ್‌ ಮನಮೋಹನ್‌ ಅವರು 2007ರ ಹೆತ್ತವರು ಹಾಗೂ ಹಿರಿಯ ನಾಗರಿಕರ  ಕಲ್ಯಾಣ ಮತ್ತು ನಿರ್ವಹಣೆ ಕಾಯಿದೆಯಲ್ಲಿನ ಅಂಶಗಳನ್ನು ವ್ಯಾಖ್ಯಾನಿಸುತ್ತಾ ಈ ರೀತಿಯಾಗಿ ಹೇಳಿದರು. 

ಮಾತ್ರವಲ್ಲದೆ ಕಾಯಿದೆಯ ಸೆ.32 ಹಾಗೂ ಸೆ.22(2)ರಡಿ ಈ ಸಂಬಂಧದ ನಿಯಮಗಳಿಗೆ ಸೂಕ್ತ ತಿದ್ದುಪಡಿಯನ್ನು ಮಾಡುವಂತೆ ಎನ್‌ಸಿಟಿ ಗೆ ಆದೇಶಿಸಿದರು. 

ಪ್ರಾಯಪ್ರಬುದ್ಧ ಮಗನು, ಮದುವೆಯಾಗಿರಲಿ ಅಥವಾ ಅಗದೇ ಇರಲಿ, ಆತನಿಗೆ ತನ್ನ ಹೆತ್ತವರ ಸ್ವಂತ ಮನೆಯಲ್ಲಿ ಅಥವಾ ಅವರು ವಾಸಿಸಿಕೊಂಡಿರುವ ಮನೆಯಲ್ಲಿ, ಅವರ ಇಚ್ಛೆಗೆ ವಿರುದ್ಧ, ಜೀವಿಸಿಕೊಂಡಿರುವ ಕಾನೂನುಸಮ್ಮತ ಹಕ್ಕನ್ನು ಹೊಂದಿರುವುದಿಲ್ಲ ಎಂದು ಕಳೆದ ವರ್ಷ 2016ರ ನವೆಂಬರ್‌ನಲ್ಲಿ ಕೋರ್ಟ್‌ ತೀರ್ಪು ನೀಡಿತ್ತು. 

Advertisement

Udayavani is now on Telegram. Click here to join our channel and stay updated with the latest news.

Next