Advertisement

ವೈದ್ಯರ ನಿರ್ಲಕ್ಷ್ಯಕ್ಕೆ ಆಕ್ರೋಶ

05:08 PM May 13, 2019 | Team Udayavani |

ಪರಶುರಾಮಪುರ: ಗ್ರಾಮದ ಸಮುದಾಯ ಆರೋಗ್ಯ ಕೇಂದ್ರಕ್ಕೆ ವೈದ್ಯರು ಆಗಮಿಸಿ ಚಿಕಿತ್ಸೆ ನೀಡದೇ ಇರುವುದನ್ನು ವಿರೋಧಿಸಿ ರೋಗಿಗಳು ಪ್ರತಿಭಟನೆ ನಡೆಸಿದರು.

Advertisement

ಶನಿವಾರ ಮಧ್ಯಾಹ್ನ ಒಂದು ಗಂಟೆಯಾದರೂ ಯಾವ ವೈದ್ಯರೂ ರೋಗಿಗಳಿಗೆ ಚಿಕಿತ್ಸೆ ನೀಡಲು ಬರಲಿಲ್ಲ. ಈ ನಿರ್ಲಕ್ಷ್ಯದಿಂದ ಬೇಸತ್ತು 40-50ಕ್ಕೂ ಹೆಚ್ಚು ಒಳ ಮತ್ತು ಹೊರರೋಗಿಗಳು ಪ್ರತಿಭಟಿಸಿ ಆಕ್ರೋಶ ವ್ಯಕ್ತಪಡಿಸಿದರು.

ಪರಶುರಾಮಪುರ ಸಮುದಾಯ ಆರೋಗ್ಯ ಕೇಂದ್ರಕ್ಕೆ ಸುತ್ತಲಿನ 50-60 ಗ್ರಾಮಗಳು ಹಾಗೂ ಪಕ್ಕದಆಂಧ್ರಪ್ರದೇಶದವರೂ ಆಗಮಿಸುತ್ತಾರೆ. ವೈದ್ಯಾಧಿಕಾರಿ ಹಾಗೂ ವೈದ್ಯರಿಗಾಗಿ ಕಾದರೂ ನಮ್ಮ ಸಮಸ್ಯೆ ಆಲಿಸುವವರೇ ಇಲ್ಲ. ಈ ಆಸ್ಪತ್ರೆಗೆ ಗುತ್ತಿಗೆ ಆಧಾರದ ಮೇಲೆ ಇಬ್ಬರು ವೈದ್ಯರನ್ನು ನಿಯೋಜಿಸಲಾಗಿತ್ತು. ಅವರು ಮಾರ್ಚ್‌ವರೆಗೆ ಸೇವೆ ಸಲ್ಲಿಸಿದ್ದರು. ಅವರಲ್ಲಿ ಓರ್ವ ವೈದ್ಯರು ಮಾರ್ಚ್‌ನಲ್ಲಿ ಉನ್ನತ ವ್ಯಾಸಂಗಕ್ಕೆ (ಪಿಜಿ) ಹೋಗಿದ್ದಾರೆ. ಇನ್ನುಳಿದ ಓರ್ವ ವೈದ್ಯರು ಏಪ್ರಿಲ್ ತಿಂಗಳಲ್ಲಿ ಪಿಜಿಗೆ ತೆರಳಿದ್ದಾರೆ ಈ ಹಿನ್ನೆಲೆಯಲ್ಲಿ ಈ ಸಿಎಚ್ಸಿಗೆ ದಿನಕ್ಕೊಬ್ಬ ವೈದ್ಯರನ್ನು ನಿಯೋಜಿಸುತ್ತಿರುವುದು ಅವೈಜ್ಞಾನಿಕ ಎಂದು ಆರೋಪಿಸಿದರು.

ಸಮುದಾಯ ಆರೋಗ್ಯಕೇಂದ್ರದಲ್ಲಿ ಖಾಲಿ ಇರುವ ವೈದ್ಯಾಧಿಕಾರಿ ಹಾಗೂ ವೈದ್ಯರ ಹುದ್ದೆಗಳಿಗೆ ಕಾಯಂ ವೈದ್ಯರ ನೇಮಕ ಮಾಡಬೇಕು. ಅಲ್ಲದೆ ಅಗತ್ಯ ಸಿಬ್ಬಂದಿಯನ್ನು ನಿಯೋಜಿಸಿ ರೋಗಿಗಳ ಸಮಸ್ಯೆಗೆ ಸ್ಪಂದಿಸಬೇಕು. ರಕ್ತ-ಮೂತ್ರ ಪರೀಕ್ಷೆಗೆ ಖಾಸಗಿ ಆಸ್ಪತ್ರೆಗೆ ಕಳಿಸದೆ ಸರ್ಕಾರಿ ಆಸ್ಪತ್ರೆಯಲ್ಲೇ ವ್ಯವಸ್ಥೆ ಮಾಡಿಕೊಡಬೇಕು, ಎಕ್ಸರೇ, ರಕ್ತ ಪರೀಕ್ಷೆ, ಔಷಧಗಳ ವಿತರಣೆ, ಬಾಣಂತಿಯರು-ಗರ್ಭಿಣಿಯರಿಗೆ ನೀಡುವ ಸೌಲಭ್ಯಗಳನ್ನು ಅರ್ಹರಿಗೆ ಸಕಾಲದಲ್ಲಿ ವಿತರಿಸಬೇಕು. ಪ್ರತಿ ಗುರುವಾರಗರ್ಭಿಣಿಯರನ್ನು ಪರೀಕ್ಷಿಸಿ, ಚಿಕಿತ್ಸೆ ನೀಡಲುಒಬ್ಬ ನುರಿತ ಮಹಿಳಾ ವೈದ್ಯರನ್ನುಖಾಯಂ ನೇಮಿಸಬೇಕು, ಆಸ್ಪತ್ರೆಯಲ್ಲಿನಆರ್‌ಒ ಪ್ಲಾಂಟ್, ಇಲಾಖೆಯು ಪೂರೈಸಿದ್ದ ಶುಧ್ದ ನೀರಿನಘಟಕದಯಂತ್ರವನ್ನು ದುರಸ್ತಿಗೊಳಿಸಿ ಆಸ್ಪತ್ರೆಯ ರೋಗಿಗಳಿಗೆ, ಸಿಬ್ಬಂದಿಗೆ, ಆಸ್ಪತ್ರೆಯ ವಸತಿನಿಲಯಗಳಿಗೆ ಮೂಲ ಸೌಕರ್ಯ ಒದಗಿಸಿಕೊಡಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ರೋಗಿಗಳಾದ ಸರಸ್ವತಿ, ಪ್ರಶಾಂತ, ರಶ್ಮಿತಾ, ಕರಿಯಣ್ಣ, ಚಿತ್ತಪ್ಪ, ತಿಮ್ಮಣ್ಣ, ಶ್ರೀದೇವಿ, ನರಸಮ್ಮ, ದೊಡ್ಡಕ್ಕ, ಜಯಲಕ್ಷ್ಮೀ, ಲಲಿತಮ್ಮ, ಶೃತಿ, ರಂಗನಾಥ, ಮಾಳಪ್ಪ, ಎಂ.ಎನ್‌. ಸಂಜೀವಮೂರ್ತಿ, ಯಶವಂತ, ರವಿ, ಗ್ರಾಮಸ್ಥರಾದ ಚನ್ನಮಲ್ಲಪ್ಪ, ರೇಖಾ, ಶಾಹಿನಾ, ತಿಮ್ಮಯ್ಯ, ತಿಪ್ಪೇಸ್ವಾಮಿ, ರಾಜಪ್ಪ, ಲಕ್ಷ್ಮೀದೇವಿ ಮತ್ತಿತರರು ಭಾಗವಹಿಸಿದ್ದರು.

Advertisement

ನಾವು ಹೋಬಳಿ ವ್ಯಾಪ್ತಿಯ 40-50ಕ್ಕೂ ಗ್ರಾಮಗಳ ಚಿಕಿತ್ಸೆ ಪಡೆಯಲು ಬರುತ್ತಾರೆ. ಮತ್ತೆ ಕೆಲವರು ರಕ್ತ ಪರೀಕ್ಷೆ ಮಾಡಿಸಲು ಬಂದರೆ ಇಲ್ಲಿ ವೈದ್ಯರು ಹಾಗೂ ಸಿಬ್ಬಂದಿಯೇ ಇರುವುದಿಲ್ಲ. ಹೀಗಾದರೆ ಬರಗಾಲದಿಂದ ಬಸವಳಿದ ಜನರ ಗತಿ ಏನು ಎಂದು ಪ್ರತಿಭಟನಾಕಾರರು ಪ್ರಶ್ನಿಸಿದರು. ಸರ್ಕಾರ ಕೂಡಲೇ ಕಾಯಂ ಆಡಳಿತ ವೈದ್ಯಾಧಿಕಾರಿ ಮತ್ತು ವೈದ್ಯರನ್ನು ನೇಮಿಸಿ ಜನರಿಗೆ ಆರೋಗ್ಯ ಸೇವೆ ಒದಗಿಸಬೇಕು.ಇಲ್ಲವಾದರೆ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next