Advertisement

Parashurama Theme Park: ಪರಶುರಾಮ ಪ್ರತಿಮೆ ವೀಕ್ಷಣೆಗೆ ಇನ್ನೆರಡು ತಿಂಗಳು ಬೇಕು!

08:52 AM Sep 07, 2023 | Team Udayavani |

ಕಾರ್ಕಳ: ತುಳುನಾಡಿನ ಸೃಷ್ಟಿಕರ್ತ ಪರಶುರಾಮನ ಕಂಚಿನ ವಿಗ್ರಹವನ್ನು ಸ್ಥಾಪಿಸಿರುವ ಬೈಲೂರಿನ ಉಮಿಕ್ಕಳ ಬೆಟ್ಟದಲ್ಲಿ ಕಾಮಗಾರಿ ನಿಮಿತ್ತ ಪ್ರವಾಸಿಗರ ಭೇಟಿಯನ್ನು ನಿಷೇಧಿಸಿದ್ದು, ಪ್ರವಾಸಿಗರಿಗೆ ತೆರುದುಕೊಳ್ಳಲು ಇನ್ನೂ ಎರಡು ತಿಂಗಳು ತಗಲುವ ಸಾಧ್ಯತೆ ಇದೆ.

Advertisement

ಪ್ರವಾಸಿ ತಾಣವಾಗಿ ಕಾರ್ಕಳ ಕ್ಷೇತ್ರವನ್ನು ಅಭಿವೃದ್ಧಿಗೊಳಿಸುವ ಸಲುವಾಗಿ ಉಮಿಕ್ಕಳ ಬೆಟ್ಟದಲ್ಲಿ ಪರಶುರಾಮನ ಮೂರ್ತಿಯನ್ನು ಬೃಹತ್‌ ಮೂರ್ತಿಯನ್ನು ಸ್ಥಾಪಿಸಿ ಉದ್ಘಾಟನೆ ನೆರವೇರಿಸಿದ್ದರೂ ಪರಿಸರದಲ್ಲಿ ಪೂರಕ ಕಾಮಗಾರಿಗಳು ಪೂರ್ಣಗೊಂಡಿರದ ಹಿನ್ನೆಲೆಯಲ್ಲಿ ಜೂನ್‌ 26ರಿಂದ ಸೆಪ್ಟಂಬರ್‌ ತನಕ ಪ್ರವಾಸಿಗರಿಗೆ ನಿಷೇಧ ಹೇರಲಾಗಿತ್ತು. ಸುಮಾರು 2 ತಿಂಗಳಲ್ಲಿ ಕಾಮಗಾರಿ ಪೂರ್ಣಗೊಂಡು ಜಿಲ್ಲಾಡಳಿತಕ್ಕೆ ಹಸ್ತಾಂತರ ಆಗುವ ನಿರೀಕ್ಷೆಯಿದೆ.

ರಕ್ಷಣಾತ್ಮಕ ಬಲ ಕೊರತೆ
ಬೆಟ್ಟದ ಕಲ್ಲಿನ ಮೇಲೆ ನೆಲದಿಂದ 57 ಅಡಿ ಎತ್ತರದಲ್ಲಿ 33 ಅಡಿ ಎತ್ತರವಿರುವ ಪರಶುರಾಮನ ಮೂರ್ತಿಯನ್ನು ಸ್ಥಾಪಿಸಲಾಗಿದೆ. ಇಲ್ಲಿ ಮಿಂಚು ಗುಡುಗು-ಸಿಡಿಲು, ಗಾಳಿ ಹೆಚ್ಚಿದೆ. ಬಹುತೇಕ ಕಡೆಗಳಲ್ಲಿ ಸ್ಥಾಪನೆಗೊಂಡಿರುವ ಪ್ರತಿಮೆ, ಮೂರ್ತಿಗಳು 90 ಡಿಗ್ರಿ ಕೋನದಲ್ಲಿದ್ದರೆ ಇಲ್ಲಿರುವ ಪ್ರತಿಮೆ 100 ಡಿಗ್ರಿ ಕೋನದಲ್ಲಿರುವುದರಿಂದ ರಕ್ಷಣಾತ್ಮಕ ಬಲದ ಕೊರತೆ ಇದೆ. ಮೂರ್ತಿಗೆ ಬಲ ನೀಡುವ ಕಾರ್ಯ ಆಗಬೇಕಿದೆ.

ಪೂರ್ಣಗೊಳ್ಳಲು 2 ವರ್ಷ
ಪ್ರವಾಸೋದ್ಯಮ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಹಾಗೂ ಇತರ ಇಲಾಖೆಗಳ ಸಹಯೋಗದಲ್ಲಿ 10 ಕೋ.ರೂ. ಅಂದಾಜು ವೆಚ್ಚದಲ್ಲಿ ಆರಂಭಿಸಿ, 3 ಹಂತದಲ್ಲಿ ಸುಮಾರು 15 ಕೋ.ರೂ. ವೆಚ್ಚದಲ್ಲಿ ಇತರ ಕಾಮಗಾರಿಗಳು ಪ್ರಗತಿಯಲ್ಲಿವೆ. ಥೀಂ ಪಾರ್ಕನ್ನು 2023ರ ಜನವರಿಯಲ್ಲಿ ಉದ್ಘಾಟಿಸಿದ್ದರೂ ಕಾಮಗಾರಿ ಬಾಕಿಯಿದ್ದು, ಪೂರ್ಣವಾಗಲು ಇನ್ನೂ 2 ವರ್ಷ ಹಿಡಿಯುವ ಬಗ್ಗೆ ಸಾರ್ವಜನಿಕವಾಗಿ ಅಂದು ಘೋಷಿಸಲಾಗಿತ್ತು.

ನಿರ್ಮಾಣದ ಜವಾಬ್ದಾರಿ ವಹಿಸಿಕೊಂಡ ನಿರ್ಮಿತಿ ಕೇಂದ್ರವು ಭೌತಿಕ ದೃಷ್ಟಿಕೋನದಲ್ಲಿ ಪ್ರತಿಮೆಯನ್ನು 1 ವರ್ಷ ಕಾಲ ಪ್ರಾಯೋಗಿಕವಾಗಿರಿಸಿ ನೋಡಿತ್ತು. ಮೂರ್ತಿಯ ಸುರಕ್ಷೆ ದೃಷ್ಟಿಯಿಂದ ಕೆಲವೊಂದು ತಾಂತ್ರಿಕ ದೋಷಗಳು ಕಂಡುಬಂದ ಹಿನ್ನೆಲೆಯಲ್ಲಿ ಇದೀಗ ಸಣ್ಣ ಪುಟ್ಟ ಮಾರ್ಪಾಡುಗಳೊಂದಿಗೆ ಕಾಮಗಾರಿ ನಡೆಸಲು ಕಾಲಾವಕಾಶ ಬೇಕಿದೆ ಎಂದು ನಿರ್ಮಿತಿ ಕೇಂದ್ರ ಮಾಹಿತಿ ನೀಡಿದೆ. ಹೊನ್ನಾವರದ ಕೃಷ್ಣ ನಾಯ್ಕ ಅವರು ಮೂರ್ತಿಗೆ ರೂಪ ಕೊಟ್ಟಿದ್ದು 2 ಕೋ.ರೂ. ವಿನಿಯೋಗಿಸಲಾಗಿದೆ.

Advertisement

ಏನೇನು ಮಾರ್ಪಾಡು?
ಪರಶುರಾಮ ಬಲಗೈಯಲ್ಲಿ ಕೊಡಲಿಯನ್ನು ಹಿಡಿದು ಎಡಗೈಯಲ್ಲಿ ಬಿಲ್ಲು ಮತ್ತು ಎಡಗಾಲನ್ನು ಎತ್ತಿದ ರೀತಿಯಲ್ಲಿ ಇಲ್ಲಿ ವಿಗ್ರಹ ನಿರ್ಮಾಣಗೊಂಡಿದ್ದು, 15 ಟನ್‌ ಕಂಚು ಮತ್ತು ಉಕ್ಕು ಬಳಸಿ ಪರಶುರಾಮನ ಪ್ರತಿಮೆಯನ್ನು ನಿರ್ಮಿಸಲಾಗಿದೆ. ಕೊಡಲಿ ಮತ್ತು ಬಿಲ್ಲು ಭಾರವಾಗಿರುವುದರಿಂದ ರಕ್ಷಣೆ ದೃಷ್ಟಿಯಿಂದ ಆಧಾರವಾಗಿ ಬಿಲ್ಲನ್ನು ಮೊಣಕಾಲಿಗೆ, ಕೊಡಲಿಯನ್ನು ಬಲಕ್ಕಾಗಿ ತಲೆಗೆ ಸ್ಪರ್ಶಿಸಿ ಇಡಲಾಗುತ್ತಿದೆ. ಇದಕೆೆRಲ್ಲ ಒಂದೆರಡು ತಿಂಗಳು ಕಾಲ ಹಿಡಿಯಲಿದೆ.

ಬಹುಕಾಲ ಉಳಿಯಬಹುದಾದ ದೂರದೃಷ್ಟಿಯ ಪರಶುರಾಮ ಮೂರ್ತಿಯ ರಕ್ಷಣೆಗೆ ತಾಂತ್ರಿಕ ಕೆಲವೊಂದು ಮಾರ್ಪಾಡುಗಳ ಅಗತ್ಯ ಇದೆ. ಇನ್ನೂ ಕೆಲವು ಕೆಲಸಗಳು ಬಾಕಿಯಿದ್ದು, ಹಣ ಪಾವತಿಯೂ ಬಾಕಿ ಇದುವುದರಿಂದ ಪೂರ್ಣಗೊಳಿಸಲು ಸಮಯವಕಾಶ ಬೇಕಿದೆ. ಸಾರ್ವಜನಿಕರು ಸಹಕರಿಸಬೇಕು.
– ಅರುಣ್‌ ಕುಮಾರ್‌, ಯೋಜನಾ ನಿರ್ದೇಶಕ, ನಿರ್ಮಿತಿ ಕೇಂದ್ರ, ಉಡುಪಿ

ಇದನ್ನೂ ಓದಿ: G 20; ಸಹಯೋಗದ ಬೀಜ ಬಿತ್ತಲಿದೆ ಭಾರತದ ಜಿ20 ಅಧ್ಯಕ್ಷತೆ

Advertisement

Udayavani is now on Telegram. Click here to join our channel and stay updated with the latest news.

Next