Advertisement
ದಕ್ಷಿಣ ಕಾಶಿಯೆಂದೇ ಖ್ಯಾತಿ ಗಳಿಸಿರುವ ನಂಜನಗೂಡು, ದೇಶದ ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳಲ್ಲೊಂದಷ್ಟೇ ಅಲ್ಲದೆ ಪುರಾಣೇತಿಹಾಸದಲ್ಲಿ ಕ್ಷೇತ್ರ ಮಹಾತೆ¾ಯಿಂದ ಐತಿಹಾಸಿಕ ದೇಗುಲಗಳ ಬೀಡಾಗಿದೆ. ಅವುಗಳಲ್ಲಿ ಎಷ್ಟೋ ದೇಗುಲಗಳು ಮಾಹಿತಿಯ ಕೊರತೆಯಿಂದಲೋ, ಪ್ರಚಾರದ ಅಭಾವದಿಂದಲೋ ಏನೋ ತನ್ನಲ್ಲಿ ಶ್ರೇಷ್ಠತೆಯನ್ನ, ಐತಿಹಾಸಿಕ ಹಿನ್ನೆಲೆಯನ್ನ ಹೊಂದಿದ್ದರೂ ಬೆಳಕಿಗೆ ಬಂದಿಲ್ಲ.
Related Articles
ಪರಶುರಾಮನು ಈ ಘಟನೆಯಿಂದಾಗಿ ಆಘಾತಕ್ಕೊಳಗಾಗುತ್ತಾನೆ ನಂತರ ಶಿವನು ಆಘಾತಕ್ಕೊಳಗಾದ ಪರಶುರಾಮನನ್ನ ಕುರಿತು, “ಚಿಂತೆ ಮಾಡಬೇಡ ಪರಶುರಾಮ. ನಿನ್ನಿಂದ ಯಾವುದೇ ಅಪಚಾರವಾಗಿಲ್ಲ. ಬದಲಾಗಿ ನಿನ್ನ ಕೊಡಲಿಯ ಸ್ಪರ್ಶದಿಂದಾಗಿ ನಾನು ಗೋಚರ ಸ್ಥಿತಿಯಲ್ಲಿ ಕಾಣುವಂತಾಯಿತು’ ಎಂದು ಹೇಳುತ್ತಾನೆ. ಈ ನೆನಪಿನಾರ್ಥವಾಗಿ ಆ ಸ್ಥಳದಲ್ಲಿ ತನ್ನ ಗರ್ಭಗುಡಿ ನಿರ್ಮಿಸುವಂತೆಯೂ, ಸ್ವಲ್ಪ ದೂರದಲ್ಲಿರುವ ನದಿ ದಡದಲ್ಲಿ ಪರಶುರಾಮನು ನೆಲೆಸುವಂತೆಯೂ ಸೂಚಿಸುತ್ತಾನೆ. ಭಕ್ತರು ತನ್ನ ದರ್ಶನದ ನಂತರ ನಿನ್ನ (ಪರಶುರಾಮನ) ದೇಗುಲದ ದರ್ಶನ ಪಡೆದಲ್ಲಿ ಅವರಿಗೆ ಪೂರ್ಣ ಕ್ಷೇತ್ರಫಲ ದೊರಕುತ್ತದೆಂದು ಶಿವನು ವರ ನೀಡುತ್ತಾನೆ.
Advertisement
ದೇಗುಲ ಎಲ್ಲಿದೆ ?
ನಂಜನಗೂಡು ಶ್ರೀಕಂಠೇಶ್ವರ ದೇಗುಲದ ಎದುರಿಗಿನ ಹೊಳೆಯ ಪಕ್ಕದಲ್ಲೆ ಈ ದೇಗುಲವಿದೆ. ಶ್ರೀಕಂಠೇಶ್ವರ ದೇವಾಲಯದ ಎದುರಿಗಿರುವ ಟಿ. ನರಸೀಪುರಕ್ಕೆ ಸಾಗುವ ರಸ್ತೆಯಲ್ಲಿ ಸಾಂಡಿಲ ನದಿಗೆ ನಿರ್ಮಿಸಿರುವ ಸೇತುವೆಯ ನಂತರ ಅರ್ಧ ಕಿ.ಮೀ ಸಾಗಿದರೆ ಎಡಭಾಗಕ್ಕೆ ಈ ದೇಗುಲ ಕಾಣಸಿಗುತ್ತದೆ. ನಂಜನಗೂಡಿಗೆ ಬಂದಲ್ಲಿ ಈ ದೇಗುಲಕ್ಕೆ ಬರುವುದನ್ನ ಮರೆಯದಿರಿ. ಹಿಂದೆ ದಟ್ಟ ಅಡವಿಯಾಗಿದ್ದ ಈ ಸ್ಥಳಕ್ಕೆ ಹೊಳೆ ಹಾಯ್ದು ಬರಬೇಕಾದ್ದರಿಂದ ಕಷ್ಟಕರವಾಗಿತ್ತು. ಆದರೆ ಇಂದು ಉತ್ತಮ ರಸ್ತೆ ಮತ್ತು ಸೇತುವೆಯಿದ್ದು ಪ್ರಶಾಂತ ವಾತಾವರಣದಲ್ಲಿ ಕಲ್ಲಿನಿಂದ ನಿರ್ಮಿಸಿದ ದೇಗುಲವಿದೆ. ಈ ದೇಗುಲವು ಎರಡು ಕೊಳಗಳನ್ನ ಹೊಂದಿದ್ದು ಒಂದು ಸುಕನಾಸಿನಿ ( ಭಕ್ತರು ನಿಲ್ಲುವ ಸ್ಥಳ) ಮತ್ತೂಂದು ಕೋಣೆ ಗರ್ಭಗುಡಿಯಾಗಿದ್ದು ಪರಶುರಾಮನು ವಿರಾಜಮಾನವಾಗಿ ನಿಂತಿರುವ ವಿಗ್ರಹವಿದೆ. ದೇಗುಲದ ಸುತ್ತಲೂ ಹಿಂದೆ ಜೀರ್ಣೋದ್ಧಾರ ಕ್ಕಾಗಿ ಬಳಸಲು ಇಟ್ಟಿದ್ದ ಕಲ್ಲು ಕಂಬಗಳಿವೆ. ಈ ದೇಗುಲ ಯಾರಿಂದ ಜೀರ್ಣೋದ್ಧಾರವಾಯಿತೆಂಬುದರ ಬಗ್ಗೆ ಮಾಹಿತಿ ಇಲ್ಲ. ಈ ಕ್ಷೇತ್ರದ ಮತ್ತೂಂದು ವಿಶೇಷತೆಯೆಂದರೆ ದೇಗುಲದ ಎದುರಿನ ಸುವರ್ಣವತಿ ಹೊಳೆಯಲ್ಲಿ ಭಕ್ತರು ತಪ್ಪುಗಳನ್ನು, ಸುಖ- ದುಃಖಗಳನ್ನು ಬೆಲ್ಲ, ಉಪ್ಪಿನ ರೂಪದಲ್ಲಿ ಹೊಳೆಯಲ್ಲಿ ಕರಗಲು ಬಿಡುವ ಪರಿಪಾಠವಿದೆ. ಆದರೆ, ಸುವರ್ಣವತಿ ಹೊಳೆಯ ಹೊರ ಹರಿವು ಹೆಚ್ಚಾದಾಗ ದೇಗುಲ ಅರ್ಧ ಭಾಗ ಮುಳುಗಿ ಹೋಗುತ್ತದೆ. ಈ ಬಗ್ಗೆ ಯಾರೂ ತಲೆ ಕೆಡಿಸಿಕೊಂಡಿಲ್ಲ.
ಲೋಕೇಶ್ ಡಿ.ನಂಜನಗೂಡು