Advertisement

ಮಿತ್ರನ ಹೊಸ ಪರಸಂಗ ನಾಳೆ ಮೈಸೂರಲ್ಲಿ ಮುಹೂರ್ತ

01:42 PM Jul 27, 2017 | Sharanya Alva |

“ರಾಗ’ ನಂತರ ಮಿತ್ರ ಏನು ಮಾಡುತ್ತಾರೆ ಎಂಬ ಪ್ರಶ್ನೆ ಎಲ್ಲರಲ್ಲೂ ಇತ್ತು. ಅವರು ಪುನಃ ನಿರ್ಮಾಣ ಕಾರ್ಯದಲ್ಲಿ ತೊಡಗುತ್ತಾರೋ ಅಥವಾ ನಟನೆಯಲ್ಲಿ ಮುಂದುವರೆಯುತ್ತಾರೋ ಎಂಬ ಮಾತುಗಳು ಕೇಳಿಬರುತ್ತಿದ್ದವು. ಮಿತ್ರ ಈಗ ಅದಕ್ಕೆ ಉತ್ತರ ಕೊಟ್ಟಿದ್ದಾರೆ.

Advertisement

ಅವರೀಗ ಹೊಸ ಚಿತ್ರಕ್ಕೆ ಹೀರೋ ಆಗಿದ್ದಾರೆ. ಹೌದು, “ಪರಸಂಗ’ ಎಂಬ ಹೊಸ ಚಿತ್ರದ ಮೂಲಕ ಮಿತ್ರ ಮತ್ತೆ
ಸುದ್ದಿಯಾಗುತ್ತಿದ್ದಾರೆ. ಅಂದಹಾಗೆ, ಈ ಚಿತ್ರದ ಶೀರ್ಷಿಕೆ ಕೇಳಿದೊಡನೆ, ಹಿರಿಯ ನಟ ಲೋಕೇಶ್‌ ಅಭಿನಯದ
“ಪರಸಂಗದ ಗೆಂಡೆತಿಮ್ಮ’ನ ನೆನಪಾಗೋದು ಸಹಜ. ಆದರೆ, ಅದಕ್ಕೂ ಇದಕ್ಕೂ ಯಾವುದೇ ಸಂಬಂಧವಿಲ್ಲ. ಆದರೆ, “ಪರಸಂಗ’ ಶೀರ್ಷಿಕೆ ಕೆಳಗೆ “ತಿಮ್ಮನ ಕಥೆ’ ಎಂಬ ಅಡಿಬರಹ ಇದೆ. ಅಲ್ಲಿಗೆ ಇದೊಂದು ಹಳ್ಳಿ ಕಥೆ ಅನ್ನೋದು ಪಕ್ಕಾ ಆಗೋಯ್ತು. ಈ ಚಿತ್ರಕ್ಕೆ ರಘು ನಿರ್ದೇಶಕರು. ಈ ಹಿಂದೆ ಇವರು “ತರೆಲ ವಿಲೇಜ್‌’ ಚಿತ್ರ ನಿರ್ದೇಶಿಸಿದ್ದರು. ಇನ್ನು, ಈ ಚಿತ್ರವನ್ನು “ರಾಟೆ’ ಸಿನಿಮಾದ ಸಹ ನಿರ್ಮಾಪಕರಾದ ಕುಮಾರ್‌ ತಮ್ಮ ಗೆಳೆಯರಾದ ಮಹೇಶ್‌ಗೌಡ, ಕೆ.ಎಂ.ಲೋಕೇಶ್‌ ಜತೆಗೂಡಿ ನಿರ್ಮಾಣ ಮಾಡುತ್ತಿದ್ದಾರೆ.

“ಪರಸಂಗ’ ಚಿತ್ರಕ್ಕೆ ಅಕ್ಷತಾ ಶ್ರೀನಿವಾಸ್‌ ನಾಯಕಿಯಾಗಿದ್ದಾರೆ. ಈ ಹಿಂದೆ ಅಕ್ಷತಾ, ಹಿಂದಿ ಹಾಗೂ ತೆಲುಗು ಚಿತ್ರದಲ್ಲಿ ನಟಿಸಿದ್ದಾರೆ. ಇದು ಅವರ ಮೊದಲ ಕನ್ನಡ ಸಿನಿಮಾ. ಇದೊಂದು ಹಳ್ಳಿಗಾಡಿನಲ್ಲಿ ನಡೆಯೋ ಕಥೆ. ಸಿನಿಮಾದಲ್ಲಿ ಹಾಸ್ಯವಿದೆ, ಪ್ರೀತಿ ಇದೆ, ಎಮೋಷನ್ಸ್‌ ಇದೆ. ಅದರೊಂದಿಗೆ ಒಳ್ಳೆಯ ಸಂದೇಶವೂ ಇದೆ ಎಂದು ವಿವರ ಕೊಡುವ ಮಿತ್ರ, “ನಾನು “ರಾಗ’ ನಂತರ ಹಲವು ಕಥೆಗಳನ್ನು ಕೇಳಿದೆ. ಆ ಪೈಕಿ “ಪರಸಂಗ’ ಹೊಸ ಜಾನರ್‌ನ ಕಥೆಯಾದ್ದರಿಂದ ವಾಸ್ತವಕ್ಕೂ ಹತ್ತಿರವಾಗಿರುವು ದರಿಂದ ಇದನ್ನು ಮೊದಲು ಮಾಡಲು ಒಪ್ಪಿದ್ದೇನೆ. ಈ ಸಿನಿಮಾದ ಪಾತ್ರ ನನ್ನ ಹಿಂದಿನ ಸಿನಿಮಾಗಳ ಪಾತ್ರಗಳಿಗಿಂತಲೂ ಭಿನ್ನ ಎನ್ನಬಹುದು’ ಎನ್ನುತ್ತಾರೆ ಅವರು.

ಈ ಚಿತ್ರಕ್ಕೆ ಹರ್ಷವರ್ಧನ್‌ ರಾಜ್‌ ಸಂಗೀತ ನೀಡಿದರೆ, ಸುಜಯ್‌ಕುಮಾರ್‌ ಕ್ಯಾಮೆರಾ ಹಿಡಿಯುತ್ತಿದ್ದಾರೆ. ಎಚ್‌
.ಡಿ.ಕೋಟೆ, ಮೈಸೂರು, ಮಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆಯಲಿದೆ. ಚಿತ್ರದಲ್ಲಿ ಕಾಮಿಡಿ ಕಿಲಾಡಿಯ ಸ್ಟಾರ್ಗಳಾದ ಮನೋಜ್‌ ಪುತ್ತೂರ್‌, ಚಂದ್ರಪ್ರಭಾ, ಗೋವಿಂದೇಗೌಡ, ಡೈಮಂಡ್‌ ರಾಜಣ್ಣ, ಸಂಜು ಬಸಯ್ಯ ಇತರರು ನಟಿಸುತ್ತಿದ್ದಾರೆ. 

ಜುಲೈ 28 ರಂದು (ನಾಳೆ) ಮೈಸೂರಿನಲ್ಲಿ ಮುಹೂರ್ತ ನಡೆಯಲಿದೆ. ಎರಡು ಹಂತದ ಚಿತ್ರೀಕರಣ ನಡೆಸಿ, ಇದೇ
ವರ್ಷ ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next