Advertisement

ಪರಪ್ಪನ ಅಗ್ರಹಾರ ಪರಿಶೀಲಿಸಿದ ಎಐಜಿಪಿ

03:30 AM Jul 15, 2017 | Team Udayavani |

ಬೆಂಗಳೂರು: ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಆಪೆ¤ ಶಶಿಕಲಾ ನಟರಾಜನ್‌ ಹಾಗೂ ಛಾಪಾ
ಕಾಗದ ಹಗರಣದಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿರುವ ಅಬ್ದುಲ್‌ ಕರೀಂ ಲಾಲ್‌ ತೆಲಗಿಗೆ ವಿಐಪಿ ಸೌಲಭ್ಯ ಸೇರಿ ಪರಪ್ಪನ ಅಗ್ರಹಾರ ಜೈಲಿನಲ್ಲಿ ನಡೆದಿದೆ ಎನ್ನಲಾದ ಹಗರಣ ಸಂಬಂಧ ಕಾರಾಗೃಹ ಇಲಾಖೆಯ ಎಐಜಿಪಿ ವೀರಭದ್ರಸ್ವಾಮಿ ಕಾರಾಗೃಹಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

Advertisement

ಶುಕ್ರವಾರ ಬೆಳಗ್ಗೆ 11 ಗಂಟೆ ಸುಮಾರಿಗೆ ಭೇಟಿ ನೀಡಿದ ವೀರಭದ್ರಸ್ವಾಮಿ ಅವರ ನೇತೃತ್ವದ ತಂಡ ಸಂಜೆ 5 ಗಂಟೆವರೆಗೆ ಶಶಿಕಲಾ ನಟರಾಜನ್‌ ಅವರಿಗೆ ನೀಡಿದ ವಿಶೇಷ ಅಡುಗೆ ಮನೆ ಮತ್ತು ತೆಲಗಿಗೆ ನೀಡಿದ ಸಹಾಯಕರ ಬಗ್ಗೆ ಮಾಹಿತಿ ಸಂಗ್ರಹಿಸಿದ್ದಾರೆ.

ಆದರೆ, ಕಾರಾಗೃಹ ಇಲಾಖೆ ಡಿಐಜಿ ಡಿ. ರೂಪಾ ಆರೋಪಿಸಿದಂತೆ ಅಲ್ಲಿ ಶಶಿಕಲಾ ಅವರಿಗೆ ಯಾವುದೇ ರೀತಿಯ
ಐಷಾರಾಮಿ ಸೌಲಭ್ಯ ನೀಡಿಲ್ಲ. ತೆಲಗಿ ಅನಾರೋಗ್ಯದಿಂದ ಬಳಲುತ್ತಿದ್ದರಿಂದ ಒಂದಿಬ್ಬರು ಸಹಾಯಕರನ್ನು ನೇಮಿಸಲಾಗಿದೆ. ಅದನ್ನು ಹೊರತು ಪಡಿಸಿ ಬೇರೆ ಯಾವುದೇ ಅಕ್ರಮಗಳು ನಡೆದಿಲ್ಲ ಎಂದು ವೀರಭದ್ರಸ್ವಾಮಿ ಅವರು ಹಿರಿಯ ಅಧಿಕಾರಿಗಳಿಗೆ ಮೌಖೀಕ ಮಾಹಿತಿ ನೀಡಿದ್ದಾರೆಂದು ಮೂಲಗಳು ತಿಳಿಸಿವೆ.

ಈ ಮಧ್ಯೆ ಕಾರಾಗೃಹ ಮೂಲಗಳ ಪ್ರಕಾರ, ಎಐಜಿಪಿ ವೀರಭದ್ರಸ್ವಾಮಿ ಭೇಟಿ ನೀಡುವ ಮೊದಲೇ ಶಶಿಕಲಾ
ಅವರಿಗಾಗಿ ಸಿದ್ಧಪಡಿಸಿದ್ದ ವಿಶೇಷ ಅಡುಗೆ ಕೊಠಡಿಯನ್ನು ತೆರವುಗೊಳಿಸಲಾಗಿದೆ ಎನ್ನಲಾಗಿದೆ.

ಡಿಜಿಪಿಗೆ ಮತ್ತೂಂದು ಪತ್ರ: ಕಾರಾಗೃಹದ ಹಗರಣಗಳು ಬಹಿರಂಗಗೊಂಡ ಬಳಿಕ ಸರ್ಕಾರ ಹಾಗೂ ಪೊಲೀಸ್‌
ಇಲಾಖೆಯಲ್ಲಿ ಭಾರಿ ಚರ್ಚೆ ನಡೆಯುತ್ತಿರುವ ಹೊತ್ತಿನಲ್ಲಿ ಡಿಐಜಿ ರೂಪಾ ಅವರು ಡಿಜಿ ಸತ್ಯನಾರಾಯಣರಾವ್‌ ಅವರಿಗೆ
ಮತ್ತೂಂದು ಪತ್ರ ಬರೆದಿದ್ದಾರೆ. ಹಗರಣ ಹೊರಬರುತ್ತಿದ್ದಂತೆ ತಮ್ಮ ವಿರುದ್ದ ಕಾರಾಗೃಹದ ಬಳಿ ಪ್ರತಿಭಟನೆ ನಡೆಸಿದ ಜೈಲಿನ ಮುಖ್ಯಅಧೀಕ್ಷಕ ಕೃಷ್ಣಕುಮಾರ್‌ ಮತ್ತು ಶೇಷ ಎಂಬುವರ ವಿರುದ್ಧ ಏಕೆ ಕ್ರಮಕೈಗೊಳ್ಳಬಾರದು ಎಂದು ಪತ್ರದಲ್ಲಿ ಪ್ರಶ್ನಿಸಿದ್ದಾರೆ.

Advertisement

ವರದಿ ಲೀಕ್‌ ಮಾಡಿಲ್ಲ: ಡಿಐಜಿ ರೂಪಾ
ಪರಪ್ಪನ ಅಗ್ರಹಾರದಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರ ಪ್ರಕರಣ ಬಹಿರಂಗಗೊಳ್ಳುತ್ತಿದ್ದಂತೆ ಡಿಜಿ ಸತ್ಯನಾರಾಯಣರಾವ್‌ ಮತ್ತು ಡಿಐಜಿ ರೂಪಾ ಅವರಿಗೆ ಕಾರಣ ಕೇಳಿ ಸರ್ಕಾರ ನೋಟಿಸ್‌ ಜಾರಿ ಮಾಡಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ರೂಪಾ ಅವರು, “ನನ್ನನ್ನು ಟಾರ್ಗೆಟ್‌ ಮಾಡಲಾಗುತ್ತಿದೆ. ನಾನು ಮೊದಲು ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿಲ್ಲ. ಬದಲಾಗಿ ಡಿಜಿಪಿ ಮಾತನಾಡಿದ ಬಳಿಕವೇ ನಾನು ಮಾತನಾಡಿದ್ದೇನ. ಕಾನೂನು ಎಲ್ಲರಿಗೂ ಅನ್ವಯವಾಗುತ್ತದೆ.

ನಾನಾಗಿಯೇ ಮಾಧ್ಯಮಗಳ ಮುಂದೆ ಬಂದು ಮಾತನಾಡಿಲ್ಲ. ಅವರಾಗಿಯೇ ಬಂದು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ್ದೇನೆ ಅಷ್ಟೆ’ ಎಂದಿದ್ದಾರೆ. “ನಾನು ಯಾವುದೇ ವರದಿಯನ್ನು ಬಹಿರಂಗ ಮಾಡಿಲ್ಲ.

ಪ್ರಕರಣದ ತನಿಖೆಗೆ ಆದೇಶಿಸಿರುವುದನ್ನು ನಾನು ಸ್ವಾಗತಿಸುತ್ತೇನೆ. ಯಾವುದೇ ತನಿಖೆ ನಡೆಸಿದರೂ ಅದಕ್ಕೆ ಸಂಪೂರ್ಣ ಸಹಕರಿಸುತ್ತೇನೆ. ನನ್ನ ಜತೆ ಉಳಿದ ಅಧಿಕಾರಿಗಳ ವಿಚಾರಣೆಯನ್ನು ನಡೆಸಲಿ.

ಕೆಲವು ಅಧಿಕಾರಿಗಳು ಚರ್ಚೆಯಲ್ಲಿ ಭಾಗಿಯಾಗಿದ್ದಾರೆ. ಅವರ ವಿರುದಟಛಿ ಏಕೆ ಕ್ರಮಕೈಗೊಳ್ಳುತ್ತಿಲ್ಲ. ನನಗೂ ಕೈದಿಗಳಿಗೂ ವೈರತ್ವ ಇಲ್ಲ. ವರದಿಯ ವಿವರವನ್ನು ಯಾರಿಗೂ ಕೊಟ್ಟಿಲ್ಲ’ ಎಂದು ಸ್ಪಷ್ಟಪಡಿಸಿರುವುದಾಗಿ ಮೂಲಗಳು ತಿಳಿಸಿವೆ. ಇನ್ನು ಜೈಲಿನಲ್ಲಿ ನಡೆದ ಪ್ರತಿಭಟನೆಯ ವಿಡಿಯೋ ಹೇಗೆ ಮಾಧ್ಯಮಕ್ಕೆ ಬಹಿರಂಗವಾಗಿದೆ. ನಾನು ಫೇಸ್‌ಬುಕ್‌ನಲ್ಲಿ ಸಕಾರಾತ್ಮಕವಾಗಿಯೇ ಪ್ರಕಟಣೆಗಳನ್ನು ಹಾಕುತ್ತಿದ್ದೇನೆ ಎಂದು ತಿಳಿಸಿದರು.

ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಮಹಿಳಾ ಕೈದಿಯಾಗಿರುವ ಶಶಿಕಲಾ ನಟರಾಜನ್‌ಗೆ ರಾಜಾತಿಥ್ಯ ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ ತನಿಖೆಗೆ ಆದೇಶಿಸಲಾಗಿದೆ. ಪದೇ ಪದೆ ಮಾಧ್ಯಮಗಳ ಮುಂದೆ ಹೇಳಿಕೆ ನೀಡಿರುವ ಕಾರಾಗೃಹ ಇಲಾಖೆ ಡಿಐಜಿ ರೂಪಾಗೆ ನೋಟಿಸ್‌ ಜಾರಿ ಮಾಡಲಾಗಿದೆ.
– ಸಿದ್ದರಾಮಯ್ಯ, ಮುಖ್ಯಮಂತ್ರಿ

ಹಣ ಹಂಚಿಕೆ ವ್ಯತ್ಯಾಸ: ಎಚ್‌ಡಿಕೆ ಬಾಂಬ್‌ 
ಬೆಂಗಳೂರು:
ಕಾರಾಗೃಹ ಡಿಜಿಪಿ-ಡಿಐಜಿ ನಡುವಿನ ಸಂಘರ್ಷ ಹಣ ಹಂಚಿಕೆಯಲ್ಲಿನ ವ್ಯತ್ಯಾಸದಿಂದ ಆಗಿರುವುದು ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ನೇರ ಆರೋಪ ಮಾಡಿದ್ದಾರೆ.

ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಸ್ತಾಪವಾಗಿರುವ ಪ್ರಕರಣದಲ್ಲಿ ಎರಡು ಕೋಟಿ ರೂ. ಜತೆಗೆ ಪ್ರತಿ ತಿಂಗಳು 10 ಲಕ್ಷ ರೂ. ಕೊಡಬೇಕು ಎಂಬ ಒಪ್ಪಂದವಾಗಿತ್ತು. ಪ್ರತಿ ತಿಂಗಳು ಕಾರಾಗೃಹಗಳಿಂದ 1 ಕೋಟಿ ರೂ. ವಸೂಲಿಗೆ ಸೂಚಿಸಲಾಗಿದೆ. ಆ ಹಣ ಹಂಚಿಕೆಯಲ್ಲೇ ಇಬ್ಬರ ನಡುವೆ ಗಲಾಟೆ ಪ್ರಾರಂಭವಾಗಿದೆ
ಎಂಬ ಮಾತುಗಳು ಪೊಲೀಸ್‌ ಇಲಾಖೆಯಲ್ಲೇ ಕೇಳಿಬರುತ್ತಿವೆ. ಹೀಗಾದರೆ, ಜೈಲುಗಳಲ್ಲಿ ಗಾಂಜಾ, ಚರಸ್‌ ಯಾಕೆ ಸಿಗಲ್ಲ ಎಂದು ಪ್ರಶ್ನಿಸಿದರು.

ಸರ್ಕಾರದ ಮಾನ ಮರ್ಯಾದೆ ಹರಾಜು ಆಗುತ್ತಿದೆ. ಇಬ್ಬರು ಅಧಿಕಾರಿಗಳು ಬಹಿರಂಗವಾಗಿ ಮಾಧ್ಯಮಕ್ಕೆ ಹೇಳಿಕೆ ಕೊಡಬಹುದಾ? ನಿಯಮಾವಳಿ ಏನು ಹೇಳುತ್ತೆ? ಇಬ್ಬರೂ ಅಧಿಕಾರಿಗಳನ್ನು ರಜಾ ಕೊಟ್ಟು ಕಳುಹಿಸಬೇಕಿತ್ತಲ್ಲವೇ?
ಈಗಲಾದರೂ ಮುಖ್ಯಮಂತ್ರಿ ಆ ಕೆಲಸ ಮಾಡಲಿ ಎಂದು ಎಚ್‌ಡಿಕೆ ಒತ್ತಾಯಿಸಿದರು.

ಶೇಂಗಾ ಸಿಪ್ಪೆಯಲ್ಲಿ ಕಾರಾಗೃಹದ
ಕೈದಿಗೆ ಗಾಂಜಾ ಪೂರೈಕೆ!
ಬೆಳಗಾವಿ:
ಶೇಂಗಾ ಸಿಪ್ಪೆಯೊಳಗೆ ಗಾಂಜಾ ಸೇರಿಸಿ ಇಲ್ಲಿನ ಹಿಂಡಲಗಾ ಕಾರಾಗೃಹದ ಕೈದಿಯೊಬ್ಬನಿಗೆ ಪೂರೈಕೆ ಮಾಡುವ ವೇಳೆ ಸಿಕ್ಕಿಬಿದ್ದ ಘಟನೆ ಒಂದೂವರೆ ತಿಂಗಳ ಹಿಂದೆ ನಡೆದಿದ್ದು, ಶುಕ್ರವಾರ ಬೆಳಕಿಗೆ ಬಂದಿದೆ. ಹಿಂಡಲಗಾ ಜೈಲಿನಲ್ಲಿರುವ ಕೈದಿಯನ್ನು ಭೇಟಿ ಮಾಡಲು ಆತನ ಪತ್ನಿ ಬಂದಾಗ ಸಿಪ್ಪೆ ಇರುವ ಶೇಂಗಾ ನೀಡಿ ಹೋಗಿದ್ದಾಳೆ.

ಶೇಂಗಾ ಬೀಜಗಳನ್ನೇ ಕೊಡಬಹುದಾಗಿತ್ತಲ್ಲ. ಸಿಪ್ಪೆ ಇರುವುದನ್ನು ಏಕೆ ಕೊಟ್ಟಿರಬಹುದು ಎಂದು ಅನುಮಾನದಿಂದ ಜೈಲಿನ ಸಿಬ್ಬಂದಿ ಪರಿಶೀಲಿಸಿ ನೋಡಿದಾಗ ಅದರಲ್ಲಿ ಗಾಂಜಾ ಇರುವುದು ಪತ್ತೆಯಾಗಿದೆ. ಒಂದೂವರೆ ತಿಂಗಳ ಹಿಂದೆಯೇ ಈ ಪ್ರಕರಣ ನಡೆದಿದ್ದು, ಘಟನೆ ನಡೆದ ಕೂಡಲೇ ಸಂಬಂಧಿಸಿದ ಕೈದಿಯನ್ನು 15 ದಿನಗಳ ಕಾಲ ಬೇರೆ
ಸೆಲ್‌ಗೆ ಸ್ಥಳಾಂತರ ಮಾಡುವ ಮೂಲಕ ಶಿಕ್ಷೆ ನೀಡಲಾಗಿತ್ತು ಎಂದು ಜೈಲಿನ ಅಧೀಕ್ಷಕ ಟಿ.ಪಿ. ಶೇಷ “ಉದಯವಾಣಿ’ಗೆ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next