ಶಿರ್ವ: ಇಲ್ಲಿನ ಗ್ರಾ.ಪಂ. ಕಚೇರಿ ಕಟ್ಟಡದ ಅಂಗಡಿ ಕೋಣೆಗಳ ಮೇಲೆ ಕಟ್ಟಿರುವ ಪ್ಯಾರಪೆಟ್ ಗೋಡೆ ಬಿರುಕು ಬಿಟ್ಟು ಶಿಥಿಲಗೊಂಡು ವಾಲಿಕೊಂಡಿದೆ. ಸಿಮೆಂಟಿನ ಭಾಗ ಕುಸಿದಿದ್ದು ಕಬ್ಬಿಣದ ರಾಡ್ ಹೊರಬಂದಿದೆ. ಈ ಗೋಡೆಯ ಅಡಿಯಲ್ಲಿ ಮೆಡಿಕಲ್,ಬೇಕರಿ,
ಹೋಟೇಲ್‌ಗಳಿದ್ದು ಯಾವುದೇ ಸಂದರ್ಭದಲ್ಲಿ ಗೋಡೆ ಕುಸಿದು ಬೀಳುವ ಅಪಾಯ ಎದುರಾಗಿದೆ.
ಕಳೆದ ಸುಮಾರು 9 ವರ್ಷಗಳ ಹಿಂದೆ ಕಟ್ಟಲಾದ ಈ ಅಂಗಡಿ ಕೋಣೆಗಳ ಮೇಲೆ ಪ್ಯಾರಪೆಟ್ ವಾಲ್ ನಿರ್ಮಿಸಲಾಗಿತ್ತು. ಈ ಬಾರಿ ಪಂಚಾಯತ್ ಕಟ್ಟಡದ ಮೇಲೆ ಸಭಾಂಗಣ ನಿರ್ಮಿಸಲಾಗಿದ್ದು ಶಿಥಿಲಗೊಂಡಿರುವ ಪ್ಯಾರಪೆಟ್‌ಗೊàಡೆಯನ್ನು ಹಾಗೆಯೇ ಬಿಡಲಾಗಿದೆ.
ಅಂಗಡಿ, ಹೊಟೇಲ್‌ಗಳ ಗ್ರಾಹಕರಲ್ಲದೆ, ಬಸ್ಸು ತಂಗುದಾಣದ ಬದಿಯಲ್ಲಿರುವ ಈ ಕಟ್ಟಡದ ಬಳಿ ದಿನವೊಂದಕ್ಕೆ ನೂರಾರು ವಿದ್ಯಾರ್ಥಿಗಳು ಮತ್ತು ಪ್ರಯಾಣಿಕರು ನಿಲ್ಲುತ್ತಿದ್ದು ಗೋಡೆ ಕುಸಿತದ ಭೀತಿ ಎದುರಾಗಿದೆ.ಸೋಮವಾರ ಮುಂಜಾನೆ ಗೋಡೆಯ ಸ್ವಲ್ಪಭಾಗ ಕುಸಿದು ಬಿದ್ದಿದೆ. ಮೆಡಿಕಲ್ ಶಾಪ್ ಮಾಲಿಕರು ಅಂಗಡಿಯ ಎದುರಿಗೆ ತಡೆಯಿರಿಸಿ ಮುಂಜಾಗ್ರತೆ ವಹಿಸಿದರೂ ಪಂಚಾ ಯತ್ ಆಡಳಿತ ಮಾತ್ರ ಈ ಬಗ್ಗೆ ತಲೆಕೆಡಿಸಿಕೊಂಡಿಲ್ಲ.
ಅಂಗಡಿ ಬಾಡಿಗೆದಾರ ಹಲವಾರು ಬಾರಿ ಮೌಖೀಕವಾಗಿ ಪಂಚಾಯತ್‌ಗೆ ದೂರು ನೀಡಿದರೂ ದುರಸ್ತಿಗೆ ಸ್ಥಳಿಯಾಡಳಿತ ಯಾವುದೇ ಕ್ರಮ ಕೈಗೊಂಡಿಲ್ಲ. ಸ್ಥಳೀಯ ಶಾಸಕರಿಗೂ ಈ ಬಗ್ಗೆ ವಾಟ್ಸಪ್ ಮೂಲಕ ಮಾಹಿತಿ ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲವೆಂದು ಬಾಡಿಗೆದಾರ ತ್ರಿವಿಕ್ರಮ ಶೆಣೈ ನೋವು ವ್ಯಕ್ತಪಡಿಸಿದ್ದಾರೆ. ಗೋಡೆ ಕುಸಿದು ಅಂಗಡಿ ಗ್ರಾಹಕರ ಯಾ ಪ್ರಯಾಣಿಕರ ಮೇಲೆ ಬಿದ್ದು ಯಾವುದೇ ದುರಂತ ಸಂಭವಿಸುವ ಮುನ್ನ ಸ್ಥಳಿಯಾಡಳಿತ ಎಚ್ಚೆತ್ತುಕೊಂಡು ಪ್ಯಾರಪೆಟ್ ಗೋಡೆಯನ್ನು ಕೆಡವಿ ದುರಸ್ತಿಗೊಳಿಸಬೇಕಾಗಿದೆ.
ತಿಂಗಳ ಬಾಡಿಗೆ ಕಟ್ಟುವಾಗ ಹಲವಾರು ಬಾರಿ ಅಧ್ಯಕ್ಷರು ಮತ್ತು ಉಪಾಧ್ಯಕ್ಷರಲ್ಲಿ ಗೋಡೆ ಶಿಥಿಲಗೊಂಡ ಬಗ್ಗೆ ಮೌಖೀಕವಾಗಿ ತಿಳಿಸಿದ್ದೇನೆ. ಯಾವುದೇ ಪ್ರಯೋಜನವಾಗಿಲ್ಲ. ಗೋಡೆ ಕುಸಿದು ಅಂಗಡಿಗೆ ಬರುವ ಗ್ರಾಹಕರ ತಲೆಮೇಲೆ ಬೀಳುವ ಅಪಾಯವಿದೆ.
– ತ್ರಿವಿಕ್ರಮ ಶೆಣೈ,
ಮೆಡಿಕಲ್ ಶಾಪ್ ಮಾಲಕ