Advertisement

ಪರಮೇಶ್ವರ್‌ ರಾಮನಗರ ಕ್ಷೇತ್ರ ಮಾರಲು ಹೊರಟಿದ್ದಾರೆ: ಲಿಂಗಪ್ಪ

06:00 AM Jun 06, 2018 | Team Udayavani |

ರಾಮನಗರ: ರಾಮನಗರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಮೈತ್ರಿ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್‌ ಅವರು ಏಕಪಕ್ಷೀಯ ನಿಲುವು ತಳೆದಿದ್ದು, ರಾಮನಗರ ಕ್ಷೇತ್ರವನ್ನು ಮಾರಲು ಹೊರಟಿದ್ದಾರೆ. ಅದಕ್ಕೆ ಅವಕಾಶ ನೀಡುವುದಿಲ್ಲ ಎಂದು 
ಎಂಎಲ್‌ಸಿ ಸಿ.ಎಂ.ಲಿಂಗಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಪರಮೇಶ್ವರ್‌ ಅವರನ್ನು ನಮ್ಮ ಪಕ್ಷದ ಅಧ್ಯಕ್ಷ ಎಂದು ಹೇಳಿಕೊಳ್ಳಲು ಬೇಸರವಾಗುತ್ತಿದೆ. ಪರಮೇಶ್ವರ್‌ ಹೇಳಿದಂತೆ ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟು ಕೊಟ್ಟರೆ ರಾಮನಗರದಲ್ಲಿ ಕಾಂಗ್ರೆಸ್ಸಿಗರು ತಮ್ಮ ಹೆಂಡತಿ, ಮಕ್ಕಳನ್ನು ಮಾರಿಕೊಳ್ಳಬೇಕಾಗುತ್ತದೆ. ಅದರ ಬದಲಿಗೆ ನಮಗೆಲ್ಲ ವಿಷ ಕೊಟ್ಟು ಬಿಡಲಿ. ಇಡೀ ಕಾಂಗ್ರೆಸ್‌ ಸಮೂಹವೇ ಸಾಯುತ್ತೇವೆ. ರಾಮನಗರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ವಿಚಾರದಲ್ಲಿ ಈ ಕ್ಷೇತ್ರದ ಪ್ರಮುಖರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕೆಂಬ ಸೌಜನ್ಯವೂ ಅವರಿಗಿಲ್ಲ. ಇಂತಹ ಅಧ್ಯಕ್ಷರಿರುವ ಬದಲಿಗೆ ರಾಜಕೀಯ ನಿವೃತ್ತಿ ಹೊಂದುವುದೇ ಲೇಸು. ಈ ವಿಚಾರದಲ್ಲಿ ನಾನು ನೇರವಾಗಿ ಕೆಪಿಸಿಸಿ ಅಧ್ಯಕ್ಷರನ್ನು ಪ್ರಶ್ನಿಸುತ್ತೇನೆ. ಕೆಪಿಸಿಸಿ ಅಧ್ಯಕ್ಷರಾಗಿ ಪರಮೇಶ್ವರ್‌ ಅವರು ಪಕ್ಷವನ್ನು ಅಧೋಗತಿಗೆ ತರುತ್ತಿದ್ದಾರೆ. ಅವರು ಉಪಮುಖ್ಯಮಂತ್ರಿಯಾಗಿದ್ದೇ ಹೆಚ್ಚು ಎಂದು ಮೆರೆಯುತ್ತಿದ್ದಾರೆ. ಮುಖ್ಯಮಂತ್ರಿ ಆಗಬೇಕು ಎಂಬ ಛಲವೇ ಇಲ್ಲದೆ ಪಕ್ಷವನ್ನು ಹಾಳು ಮಾಡಲು ಹೊರಟಿದ್ದಾರೆ. ರಾಮನಗರ ಸೇರಿ ರಾಜ್ಯದ ಹಲವು ಕ್ಷೇತ್ರಗಳನ್ನು ಮಾರಲು ಹೊರಟಿದ್ದಾರೆ ಎಂದು ಕಿಡಿಕಾರಿದರು.

ಇದೇ ವೇಳೆ, ಡಿಕೆಶಿ ಪರ ಬ್ಯಾಟಿಂಗ್‌ ಮಾಡಿದ ಅವರು, ಡಿಕೆಶಿ ಕೆಪಿಸಿಸಿ ಅಧ್ಯಕ್ಷರಾಗಿದ್ದರೆ ಕಾಂಗ್ರೆಸ್‌ ನಿರಾಯಾಸವಾಗಿ 115 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಬಹುದಿತ್ತು. ಡಿ.ಕೆ.ಶಿವಕುಮಾರ್‌ ಇಲ್ಲದೆ ಹೋಗಿದ್ದರೆ ಜೆಡಿಎಸ್‌ -ಕಾಂಗ್ರೆಸ್‌ ಮೈತ್ರಿ ಸರ್ಕಾರ ರಚನೆ ಸಾಧ್ಯವೇ ಆಗುತ್ತಿರಲಿಲ್ಲ. ಕಾಂಗ್ರೆಸ್‌ನಿಂದ 20 ಮಂದಿ ಶಾಸಕರು ಬಿಜೆಪಿಗೆ ಹೋಗಲು ಸಿದ್ಧರಾಗಿದ್ದರು. ಅದೆಲ್ಲವನ್ನು ತಪ್ಪಿಸಿ ಶಿವಕುಮಾರ್‌ ಪಕ್ಷವನ್ನು ಉಳಿಸಿದರು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next