Advertisement

ಕೃಷ್ಣನ ನೆನೆದರು ಪರಮೇಶ್ವರ ಹೆಗಡೆ

11:36 AM Jun 21, 2017 | |

ಕನ್ನಡದಲ್ಲಿ ಇದುವರೆಗೂ ಪುರಂದರ ದಾಸರ ಹಲವು ಪದಗಳನ್ನು ಹಾಡುಗಳನ್ನಾಗಿ ಬಳಸಿಕೊಳ್ಳಲಾಗಿದೆ. ಅಂತಹ ಹಾಡುಗಳ ಪೈಕಿ ಜನಪ್ರಿಯ ಹಾಡೆಂದರೆ, ಅದು “ಕಂಡು ಕಂಡು ನೀ ಎನ್ನ …’ ಎಂಬ “ಭಲೇ ಅದೃಷ್ಟವೋ ಅದೃಷ್ಟ’ ಚಿತ್ರದ ಹಾಡು. ಈ ಹಾಡನ್ನು ಎಸ್‌. ಜಾನಕಿ ಅವರು ಹಾಡಿದ್ದು, ಈಗಲೂ ಜನಪ್ರಿಯಲ. ಈಗ್ಯಾಕೆ ಈ ಹಾಡಿನ ನೆನಪು ಎಂದರೆ, ದಾಸರ ಅದೇ ಪದವನ್ನು ಈಗ “ದಯವಿಟ್ಟು ಗಮನಿಸಿ’ ಚಿತ್ರದಲ್ಲಿ ಮತ್ತೆ ಬಳಸಿಕೊಳ್ಳಲಾಗಿದೆ.

Advertisement

ಹೌದು, ಪುರಂದರದಾಸರ “ಕಂಡು ಕಂಡು ನೀ ಎನ್ನ …’ ಪದವನ್ನು “ದಯವಿಟ್ಟು ಗಮನಿಸಿ’ ಚಿತ್ರದಲ್ಲಿ ಮತ್ತೂಮ್ಮೆ ಬಳಸಿಕೊಳ್ಳಲಾಗಿದ್ದು, ಖ್ಯಾತ ಹಿಂದುಸ್ಥಾನಿ ಗಾಯಕ ಪಂಡಿತ್‌ ಪರಮೇಶ್ವರ ಹೆಗಡೆ ಅವರು ಈ ಹಾಡನ್ನು ಹಾಡಿದ್ದಾರೆ. ಬಹಳ ದಿನಗಳ ನಂತರ ಪರಮೇಶ್ವರ ಹೆಗಡೆ ಅವರು ಸಿನಿಮಾಗಾಗಿ ಹಾಡೊಂದನ್ನು ಹಾಡಿದ್ದು, ಚಿತ್ರಕ್ಕೆ ಹಾಡುವುದಕ್ಕೆ ಸಂಗೀತ ನಿರ್ದೇಶಕ ಅನೂಪ್‌ ಸೀಳಿನ್‌ ಮೊದಲು ಸಂಪರ್ಕಿಸಿದಾಗ, ಹೆಗಡೆಯವರು ಬೇಡ ಎಂದಿದ್ದರಂತೆ.

“ಅದೊಮ್ಮೆ ಅನೂಪ್‌ ಸೀಳಿನ್‌ ಅವರು ಚಿತ್ರಕ್ಕೆ ಹಾಡಬೇಕು ಎಂದು ಫೋನ್‌ ಮಾಡಿದ್ದರು. ಅವರಿಗೆ ಮೊದಲು ಆಗಲ್ಲ ಎಂದು ಹೇಳಿದ್ದೆ. ಆದರೆ, ಅವರು ಟ್ಯೂನ್‌ ಕಳಸಿಕೊಟ್ಟಿದ್ದರು. ಇಷ್ಟವಾಗಿ, ಹಾಡುವುದಕ್ಕೆ ಒಪ್ಪಿಕೊಂಡೆ. ಒಂದು ಪಕ್ಷ ನಾ ಹಾಡಿದ್ದು ಇಷ್ಟವಾಗಲಿಲ್ಲವೆಂದರೆ, ಬಳಸಿಕೊಳ್ಳುವುದು ಬೇಡ ಎಂದೆ. ಆದರೆ, ಅವರಿಗೆ ಹಾಡು ಇಷ್ಟವಾಗಿ ಬಳಸಿಕೊಂಡಿದ್ದಾರೆ’ ಎನ್ನುತ್ತಾರೆ ಪರಮೇಶ್ವರ ಹೆಗಡೆ.

ಸೋಮವಾರ ಸಂಜೆ ನಡೆದ “ದಯವಿಟ್ಟು ಗಮನಿಸಿ’ ಚಿತ್ರದ ಹಾಡುಗಳ ಬಿಡುಗಡೆ ಸಮಾರಂಭದಲ್ಲಿ ಹಾಜರಿದ್ದ ಅವರು, “ಕಂಡು ಕಂಡು ನೀ ಎನ್ನ …’ ಹಾಡನ್ನು ಹಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next