Advertisement

Paralympics; ಪದಕ ಗೆದ್ದ ಕ್ರೀಡಾಪಟುಗಳೊಂದಿಗೆ ಪ್ರಧಾನಿ ಸಂವಾದ

12:24 AM Sep 13, 2024 | Team Udayavani |

ಹೊಸದಿಲ್ಲಿ: ಪ್ಯಾರಿಸ್‌ ಪ್ಯಾರಾಲಿಂಪಿಕ್ಸ್‌ನಲ್ಲಿ ದಾಖಲೆ ಸಂಖ್ಯೆಯ ಪದಕಗಳನ್ನು ಗೆದ್ದ ಭಾರತದ ಆ್ಯತ್ಲೀಟ್‌ಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ಭೇಟಿ ಮಾಡಿ ಮಾತುಕತೆ ನಡೆಸಿದರು. ಕ್ರೀಡಾಪಟುಗಳೆಲ್ಲ ಹೊಸದಿಲ್ಲಿಯಲ್ಲಿರುವ ಪ್ರಧಾನಿ ಮೋದಿ ಅವರ ನಿವಾಸಕ್ಕೆ ಭೇಟಿ ನೀಡಿ ಸಂವಾದದಲ್ಲಿ ಭಾಗಿಯಾದರು.

Advertisement

ಶೂಟಿಂಗ್‌ನಲ್ಲಿ ಸತತ 2 ಚಿನ್ನದ ಪದಕ ಗೆದ್ದ ಅವನಿ ಲೇಖರಾ, ದೃಷ್ಟಿ ಹೀನತೆಯಿಂದ ಬಳಲುತ್ತಿರುವ ಜೂಡೋಪಟು ಕಪಿಲ್‌ ಪಾರ್ಮರ್‌, ಮೊದಲ ಬಾರಿ ಪ್ಯಾರಾಲಿಂಪಿಕ್ಸ್‌ ಪದಕ ಗೆದ್ದ ಎಲ್ಲ ಕ್ರೀಡಾಪಟುಗಳು ಮೋದಿ ಅವರೊಂದಿಗೆ ಮಾತುಕತೆ ನಡೆಸಿದರು.

ಪ್ರಧಾನಿ ಮೋದಿ ಅವರು ಕಪಿಲ್‌ ಪರ್ಮಾರ್‌ ಅವರ ಪದಕದ ಮೇಲೆ ಸಹಿ ಮಾಡಿದರು. ಅವನಿ ಲೇಖರಾ ಅವರು “ಧನ್ಯವಾದಗಳು’ ಎಂದು ಬರೆದಿರುವ ಜೆರ್ಸಿಯೊಂದನ್ನು ಮೋದಿ ಅವರಿಗೆ ಉಡುಗೊರೆಯಾಗಿ ನೀಡಿದರು.
ಸಂವಾದ ಬಳಿಕ ಮಾತನಾಡಿದ ಕನ್ನಡಿಗ ಸುಹಾಸ್‌ ಯತಿರಾಜ್‌, “ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿ ಸಂತೋಷವಾಗಿದೆ. ಪ್ಯಾರಾಲಿಂಪಿಕ್ಸ್‌ಗೆ ಹೋಗುವ ಮೊದಲು ನಮ್ಮಲ್ಲಿ ಎರಡು ಗುರಿಯಿತ್ತು. ಒಂದು ಪದಕ ಗೆಲ್ಲುವುದು, ಮತ್ತೂಂದು ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡುವುದು’ ಎಂದು ಹೇಳಿದರು.

ನವದೀಪ್‌ಗಾಗಿ ನೆಲದಲ್ಲಿ ಕುಳಿತ ಮೋದಿ
ಪ್ಯಾರಾಲಿಂಪಿಕ್ಸ್‌ ಜಾವೆಲಿನ್‌ ಎಸೆತದಲ್ಲಿ ಚಿನ್ನದ ಪದಕ ಗೆದ್ದ, ಕುಬj ಗಾತ್ರದ ನವದೀಪ್‌ ಸಿಂಗ್‌ ಅವರಿ ಗಾಗಿ ಮೋದಿ ನೆಲದ ಮೇಲೆ ಕುಳಿತದ್ದು ವಿಶೇಷವಾಗಿತ್ತು. ನವದೀಪ್‌ ಅವರು ಮೋದಿಯವರಿಗೆ ನೀಲಿ ಟೋಪಿ ಯೊಂದನ್ನು ಹಾಕಿ ಸಂಭ್ರಮಿಸಿದರು. ಈ ವೀಡಿಯೊ ವೈರಲ್‌ ಆಗಿದ್ದು, ಪ್ರಧಾನಿ ನಡೆಗೆ ಮೆಚ್ಚುಗೆ ವ್ಯಕ್ತವಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next