Advertisement
ಜಪಾನಿನ ಚಕ್ರವರ್ತಿ ನೌರುಹಿಟೊ ಅಧಿಕೃತವಾಗಿ ಕೂಟ ಉದ್ಘಾಟನೆಯಾಗಿದೆ ಎಂದು ಘೋಷಿಸಿದರು. ಈ ಕೂಟದ ಮುಖ್ಯಧ್ಯೇಯ “ನಮಗೆ ರೆಕ್ಕೆಗಳಿವೆ’ ಎನ್ನುವುದಾಗಿದೆ. ವರ್ಣರಂಜಿತ ಕಾರ್ಯಕ್ರಮದಲ್ಲಿ ಈ ಧ್ಯೇಯ ಪ್ರಕಟವಾಯಿತು. ದಿವ್ಯಾಂಗರು (ಅಂಗವಿಕಲರು) ಕೂಡಾ ಅದ್ಭುತ ಸಾಧನೆ ಮಾಡಬಹುದು ಎನ್ನುವುದರ ಸೂಚಕವಾಗಿ ಇದನ್ನು ಬಳಸಲಾಗಿದೆ.
Related Articles
Advertisement
1964ರಲ್ಲಿ ಜಪಾನ್ ರಾಜಧಾನಿ ಟೋಕ್ಯೊದಲ್ಲೇ ಪ್ಯಾರಾಲಿಂಪಿಕ್ಸ್ ನಡೆದಿತ್ತು. ಅದಾದ 57 ವರ್ಷಗಳ ನಂತರ ಮತ್ತೆ ಇದೇ ಸ್ಥಳದಲ್ಲಿ ಪ್ಯಾರಾಲಿಂಪಿಕ್ಸ್ ಆರಂಭವಾಗಿದೆ. 1964ರಲ್ಲಿ ಟೋಕೊÂದಲ್ಲೇ ಒಲಿಂಪಿಕ್ಸ್ ಕೂಡಾ ನಡೆದಿತ್ತು ಎನ್ನುವುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಪ್ಯಾರಾಲಿಂಪಿಕ್ಸ್ ಅನ್ನು ಎರಡು ಬಾರಿ ಆಯೋಜಿಸಿದ ನಗರ ಎಂಬ ಹೆಗ್ಗಳಿಕೆಯೂ ಟೋಕ್ಯೊಗೆ ದಕ್ಕಿದೆ.
ನಾವಿಲ್ಲಿದ್ದೇವೆ, ಕೂಟ ಶುರುವಾಗಿದೆ ಎಂದು ನನಗೆ ನಂಬಲಿಕ್ಕೆ ಆಗುತ್ತಿಲ್ಲ. ಈ ದಿನ ಬರುತ್ತದೆ ಎನ್ನುವುದರ ಬಗ್ಗೆ ಹಲವರು ಅನುಮಾನ ವ್ಯಕ್ತಪಡಿಸಿದ್ದರು. ನೂರಾರು ಮಂದಿಯ ಪರಿಶ್ರಮಕ್ಕೆ ಧನ್ಯವಾದ, ಅದ್ಭುತ ಪರಿವರ್ತನೆಯೊಂದು ಜರುಗುತ್ತಿದೆ. ಸಂಘಟಕರು ಭರವಸೆ ಕಳೆದುಕೊಂಡಿರಲಿಲ್ಲ. ದಣಿವರಿಯದೇ ಜಪಾನ್ ಸರ್ಕಾರದೊಂದಿಗೆ ಹೋರಾಟ ಮಾಡಿದ್ದರು. -ಆಂಡ್ರ್ಯೂ ಪಾರ್ಸನ್ಸ್, ಅಂತಾರಾಷ್ಟ್ರೀಯ ಪ್ಯಾರಾಲಿಂಪಿಕ್ಸ್ ಸಮಿತಿ ಅಧ್ಯಕ್ಷ