Advertisement

Paralympic ಚಿನ್ನವನ್ನು ಮೋದಿಗೆ ಅರ್ಪಿಸಿದ ಅಂತಿಲ್‌

10:59 PM Sep 13, 2024 | Team Udayavani |

ಹೊಸದಿಲ್ಲಿ: ಪ್ಯಾರಿಸ್‌ ಪ್ಯಾರಾಲಿಂಪಿಕ್ಸ್‌ ಜಾವೆಲಿನ್‌ ಎಸೆತದಲ್ಲಿ ಗೆದ್ದ ಚಿನ್ನದ ಪದಕವನ್ನು ಸುಮಿತ್‌ ಅಂತಿಲ್‌, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅರ್ಪಿಸಿದ್ದಾರೆ. ಗುರುವಾರ ಪ್ಯಾರಾ ಆ್ಯತ್ಲೀಟ್‌ಗಳು ಮೋದಿಯವರನ್ನು ಭೇಟಿಯಾಗಿ ಸಂವಾದ ನಡೆಸಿದ್ದರು. ಇದರ ವೀಡಿಯೊ ಬಿಡುಗಡೆಯಾಗಿದ್ದು, ಇದರಲ್ಲಿ ಸುಮಿತ್‌ ತಮ್ಮ ಪ್ಯಾರಾಲಿಂಪಿಕ್ಸ್‌ ಪದಕವನ್ನು ಪ್ರಧಾನಿಗೆ ಅರ್ಪಿಸಿದ್ದು ಕಂಡುಬಂತು.

Advertisement

ಮೋದಿ ಜತೆಗಿನ ಮಾತುಕತೆಯ ವೇಳೆ ಸುಮಿತ್‌ ಅಂತಿಲ್‌, “ಇದು ನನ್ನ ಸತತ 2ನೇ ಪ್ಯಾರಾಲಿಂಪಿಕ್ಸ್‌ ಚಿನ್ನದ ಪದಕ. ಟೋಕಿಯೊ ಕೂಟದ ವೇಳೆ ನಾನು 2 ಚಿನ್ನದ ಪದಕಗಳನ್ನು ಗೆಲ್ಲುವುದಾಗಿ ನಿಮ್ಮೊಂದಿಗೆ ಹೇಳಿದ್ದೆ. ಹೀಗಾಗಿ ಈ ಪದಕ ನಿಮಗೆ. ಇಡೀ ತಂಡದ ಪರವಾಗಿ ನಾನು ನಿಮಗೆ ಧನ್ಯವಾದ ಸಲ್ಲಿಸುತ್ತೇನೆ’ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next