Advertisement

ಮತ್ತೆ ಪ್ಯಾರಸಿಟಮಾಲ್‌ ಔಷಧ ಪ್ರಮಾದ? : ಬಳಕೆ ಹೆಚ್ಚಿದ್ದರಿಂದ ಸೋಂಕು ಪತ್ತೆಗೆ ಅಡ್ಡಿ

09:01 AM Apr 23, 2020 | Hari Prasad |

ಬೆಂಗಳೂರು: ಕೋವಿಡ್ 19 ವೈರಸ್ ಹಾವಳಿಯ ಅನಂತರದ ದಿನಗಳಲ್ಲಿ ಎಲ್ಲೆಡೆ ಪ್ಯಾರಸಿಟಮಾಲ್‌ ಮಾತ್ರೆ ಸೇವನೆ ಹೆಚ್ಚುತ್ತಿದೆ. ಇದು ಕೋವಿಡ್ 19 ವೈರಸ್ ಪೀಡಿತರ ಪತ್ತೆಗೆ ತಡೆಯುಂಟು ಮಾಡುತ್ತಿದೆ ಎಂಬ ಆತಂಕವಿದೆ.

Advertisement

ಜ್ವರ ಅನುಭವವಾದ ಕೂಡಲೇ ಅಥವಾ ಕಾಣಿಸಿಕೊಂಡರೆ ಪ್ಯಾರಸಿಟಮಾಲ್‌ ಔಷಧ ಖರೀದಿಸಿ ಸೇವಿಸುವುದು ಅನೇಕರ ಅಭ್ಯಾಸ. ಈ ಮಾತ್ರೆ ಸೇವನೆಯಿಂದ ಜ್ವರದ ಲಕ್ಷಣಗಳು ಕಡಿಮೆಯಾಗುತ್ತವೆ.

ಆದರೆ ಸೋಂಕು ನಿವಾರಣೆಯಾಗುವುದಿಲ್ಲ. ಇದರಿಂದಾಗಿ ಜ್ವರದ ಮೂಲ ಕಾರಣವಾಗಿರಬಹುದಾದ ಕೋವಿಡ್ 19 ವೈರಸ್ ಸೋಂಕು ಉಲ್ಬಣ ಸ್ಥಿತಿಯವರೆಗೂ ಪತ್ತೆಯಾಗದೆ ಇರುವ ಸಾಧ್ಯತೆ ಇದೆ ಎನ್ನುತ್ತಾರೆ ತಜ್ಞವೈದ್ಯರು.

ಅಗತ್ಯವಿದೆ ಕಾನೂನು
ಕೋವಿಡ್ 19 ವೈರಸ್ ಹೆಚ್ಚುತ್ತಿರುವ ಈ ಸಂದರ್ಭದಲ್ಲಿ ಪ್ಯಾರಸಿಟಮಾಲ್‌ ಮಾತ್ರೆ ಖರೀದಿ ಸಂಬಂಧ ನಿರ್ದಿಷ್ಟ ಕಾನೂನು ರೂಪಿಸುವ ಅಗತ್ಯವಿದೆ. ಈಗಾಗಲೇ ಉಡುಪಿ, ದಕ್ಷಿಣ ಕನ್ನಡ ಸಹಿತ ಕೆಲವು ಜಿಲ್ಲೆಗಳಲ್ಲಿ ಅಲ್ಲಿನ ಜಿಲ್ಲಾಧಿಕಾರಿಗಳು ಈ ಸಂಬಂಧ ಆದೇಶ ನೀಡಿದ್ದು, ಔಷಧ ಮಳಿಗೆಗಳು ವೈದ್ಯರ ಚೀಟಿ ಇಲ್ಲದೆ ಪ್ಯಾರಸಿಟಮಾಲ್‌ ಮಾತ್ರೆ ನೀಡಬಾರದು ಎಂದು ಸೂಚಿಸಿದ್ದಾರೆ. ರಾಜ್ಯ ಔಷಧ ನಿಯಂತ್ರಕ ಮಂಡಳಿಯೂ ಕೆಲವೆಡೆ ಪ್ಯಾರಸಿಟಮಲ್‌ ಖರೀದಿ ಕುರಿತು ಜನರಲ್ಲಿ ಜಾಗೃತಿ ಮೂಡಿಸುತ್ತಿದೆ.

ಜ್ವರ ಲಕ್ಷಣಗಳು ಕಂಡ ಕೂಡಲೇ ಜನರು ನಿರ್ಲಕ್ಷಿಸಬಾರದು, ಪ್ಯಾರಸಿಟಮಾಲ್‌ ಮಾತ್ರೆ ಸೇವಿಸಿ ಸುಮ್ಮನಿರಬಾರದು. ಎಲ್ಲೆಡೆ ಫೀವರ್‌ ಕ್ಲಿನಿಕ್‌ಗಳಿದ್ದು, ಹೋಗಿ ಪರೀಕ್ಷಿಸಿಕೊಳ್ಳಬೇಕು.
– ಡಾ| ಸಿ.ಎನ್‌. ಮಂಜುನಾಥ್‌, ನಿರ್ದೇಶಕರು, ಜಯದೇವ ಹೃದ್ರೋಗ ವಿಜ್ಞಾನ ಸಂಶೋಧನ ಸಂಸ್ಥೆ

Advertisement
Advertisement

Udayavani is now on Telegram. Click here to join our channel and stay updated with the latest news.

Next