Advertisement
ಫೈನಲ್‌ಗೆ ಸುಹಾಸ್ಪುರುಷರ ಎಸ್‌ಎಲ್4 “ಆಲ್ ಇಂಡಿ ಯನ್’ ಬ್ಯಾಡ್ಮಿಂಟನ್ ಸೆಮಿಫೈನಲ್‌ನಲ್ಲಿ ಸುಹಾಸ್ ಯತಿರಾಜ್ 21-17, 21-12 ಅಂತರದಿಂದ ಸುಕಾಂತ್ ಕದಂ ಅವರನ್ನು ಸೋಲಿಸಿ ಫೈನಲ್ ಪ್ರವೇಶಿಸಿದರು.
Related Articles
ರವಿವಾರ ರಾತ್ರಿ ನಡೆದ ಪುರುಷರ ಎಸ್‌ಎಲ್3 ಸೆಮಿಫೈನಲ್ ಸೆಣಸಾಟದಲ್ಲಿ ನಿತೇಶ್ ಕುಮಾರ್ ಜಪಾನ್‌ನ ದೈಸುಕೆ ಫುಜಿಹಾರ ಅವರನ್ನು 21-16, 21-12 ಅಂತರದಿಂದ ಮಣಿಸಿದರು. ಫೈನಲ್‌ನಲ್ಲಿ ಇವರು ಬ್ರಿಟನ್‌ನ ಡೇನಿಯಲ್ ಬೆಥೆಲ್ ವಿರುದ್ಧ ಕಣಕ್ಕಿಳಿಯಲಿದ್ದಾರೆ.
ಇದಕ್ಕೂ ಮೊದಲು ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ 19 ವರ್ಷದ ಮನೀಷಾ ರಾಮದಾಸ್ ಜಪಾನ್‌ನ ಮಮಿಕೊ ಟೊಯೋಡಾ ವಿರುದ್ಧ 21-13, 21-16 ಅಂತರದ ಸುಲಭ ಜಯ ಸಾಧಿಸಿದರು. ದ್ವಿತೀಯ ಶ್ರೇಯಾಂಕದ ಎಡಗೈ ಆಟಗಾರ್ತಿಯಾಗಿರುವ ಮನೀಷಾ ಕೇವಲ 30 ನಿಮಿಷಗಳಲ್ಲಿ ಶ್ರೇಯಾಂಕ ರಹಿತ ಆಟಗಾರ್ತಿಯನ್ನು ಮಣಿಸಿದರು.
Advertisement
ಎಸ್‌ಎಚ್6 ಬ್ಯಾಡ್ಮಿಂಟನ್ ಕ್ವಾರ್ಟರ್ ಫೈನಲ್‌ನಲ್ಲಿ ನಿತ್ಯಶ್ರೀ ಸುಮತಿ ಶಿವನ್ ಪೋಲೆಂಡ್‌ನ ಒಲಿವಿಯಾ ಮಿಜೆಲ್ ಅವರನ್ನು 21-4, 21-7ರಿಂದ ಮಣಿಸಿದರು. ಸೆಮಿಫೈನಲ್‌ನಲ್ಲಿ ಇವರು ಚೀನದ ಲಿನ್ ಶುವಾಂಗ್‌ಬಾವೊ ವಿರುದ್ಧ ಸೆಣಸಲಿದ್ದಾರೆ. ಮನ್‌ದೀಪ್, ಪಲಕ್ ಪರಾಭವ
ವನಿತೆಯರ ಎಸ್‌ಎಲ್3 ಮತ್ತು ಎಸ್‌ಎಲ್ 4 ವಿಭಾಗದ ಕ್ವಾರ್ಟರ್ ಫೈನಲ್‌ನಲ್ಲಿ ಭಾರತ ನಿರಾಸೆ ಅನುಭವಿಸಿತು. ಇಲ್ಲಿ ಮನ್‌ದೀಪ್ ಕೌರ್ ಮತ್ತು ಪಲಕ್ ಕೊಹ್ಲಿ ಇಬ್ಬರೂ ಪರಾಭವಗೊಂಡರು. ಮನ್‌ದೀಪ್ ಕೌರ್ ಅವರನ್ನು ನೈಜೀರಿಯಾದ ಬೋಲಾಜಿ ಮರಿಯಂ ಇನಿಯೋಲಾ 21-8, 21-9 ಅಂತರದಿಂದ ಮಣಿಸಿದರು. ಇನ್ನೊಂದು ಪಂದ್ಯದಲ್ಲಿ ಪಲಕ್ ಕೊಹ್ಲಿ ಅವರನ್ನು ಇಂಡೋನೇಷ್ಯಾದ ಖಲೀಮಾತುಸ್ ಸದಿಯಾ 21-9, 21-15ರಿಂದ ಪರಾಭವಗೊಳಿಸಿದರು. ಆರ್ಚರಿ: ರಾಕೇಶ್ ಸೆಮಿಫೈನಲ್ ಪ್ರವೇಶ
ವಿಶ್ವದ ನಂ.1 ಆರ್ಚರ್ ರಾಕೇಶ್ ಕುಮಾರ್ ಪ್ಯಾರಾಲಿಂಪಿಕ್ಸ್ ಸೆಮಿಫೈನಲ್ ತಲುಪಿದ್ದಾರೆ. ಶೂಟ್ ಆಫ್ನಲ್ಲಿ ಅವರು ಕೆನಡಾದ ಕೈಲ್ ಟ್ರೆಂಬ್ಲೆ ವಿರುದ್ಧ ಗೆಲುವು ಸಾಧಿಸಿದರು. ಇದಕ್ಕೂ ಮೊದಲು ಇಂಡೋನೇಷ್ಯಾದ ಕೆನ್ ಸ್ವಾಗುಲಿಲಾಂಗ್ ಅವರನ್ನೂ ಶೂಟೌಟ್‌ನಲ್ಲಿ ಪರಾಭವಗೊಳಿ ಸಿದ್ದರು. 15 ಸುತ್ತುಗಳಲ್ಲಿ ಇಬ್ಬರೂ 144 ಅಂಕ ಗಳಿಸಿದ್ದರು.