Advertisement

ಪ್ಯಾರಾ ಕನೋಯಿ ವಿಶ್ವಕಪ್‌: ಕಂಚು ಗೆದ್ದ ಪ್ರಾಚಿ ಯಾದವ್‌

12:20 AM May 30, 2022 | Team Udayavani |

ಹೊಸದಿಲ್ಲಿ: ಪೋಲೆಂಡ್‌ನ‌ಲ್ಲಿ ನಡೆದ ಪ್ಯಾರಾ ಕನೋಯಿ ವಿಶ್ವಕಪ್‌ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಪ್ರಾಚಿ ಯಾದವ್‌ ಕಂಚಿನ ಪದಕ ಜಯಿಸಿದ್ದಾರೆ.

Advertisement

ವನಿತೆಯರ ವಿಎಲ್‌2 200 ಮೀ. ಸ್ಪರ್ಧೆಯಲ್ಲಿ ಪ್ರಾಚಿ ಯಾದವ್‌ 1:04.71 ಸೆಕೆಂಡ್‌ಗಳ ಸಾಧನೆಯೊಂದಿಗೆ ತೃತೀಯ ಸ್ಥಾನಿಯಾದರು. ಆಸ್ಟ್ರೇಲಿಯದ ಸುಸಾನ್‌ ಸೀಪೆಲ್‌ ಚಿನ್ನ (1.01.54 ಸೆಕೆಂಡ್ಸ್‌) ಮತ್ತು ಕೆನಡಾದ ಬ್ರಿಯಾನಾ ಹೆನ್ನೇಸಿ ಬೆಳ್ಳಿ (1:01.58 ಸೆಕೆಂಡ್ಸ್‌) ಬೆಳ್ಳಿ ಗೆದ್ದರು.

ಉಳಿದಂತೆ ಮನೀಷ್‌ ಕೌರವ್‌ (ಪುರುಷರ ಕೆಎಲ್‌3 200 ಮೀ.) ಮತ್ತು ಮನ್‌ಜಿàತ್‌ ಸಿಂಗ್‌ (ಪುರುಷರ ವಿಎಲ್‌2 200 ಮೀ.) ತಮ್ಮ ವಿಭಾಗಗಳಲ್ಲಿ ಫೈನಲ್‌ ಪ್ರವೇಶಿಸಿದ ಸಾಧನೆಗೈದರು.

ಜೈದೀಪ್‌ ಪುರುಷರ ವಿಎಲ್‌3 200 ಮೀ. ವಿಭಾಗದಲ್ಲಿ ಸೆಮಿಫೈನಲ್‌ ತಲುಪಿದರು. ಒಟ್ಟಾರೆಯಾಗಿ ಇದು ಪ್ಯಾರಾ ಕನೋಯಿ ವಿಶ್ವಕಪ್‌ ಇತಿಹಾಸದಲ್ಲೇ ಭಾರತದ ಅತ್ಯುತ್ತಮ ನಿರ್ವಹಣೆಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next