Advertisement

ಸಂಗೀತ-ಹಾಸ್ಯದ ಹೊನಲು ಹರಿಸಿ ರಂಜಿಸಿದ ಪನ್ವಿ ಕ್ರಿಯೇಷನ್ಸ್‌

02:54 PM Apr 03, 2018 | |

ತಮ್ಮಲ್ಲಿರುವ ಅಡಗಿರುವ  ಸ್ವಪ್ರತಿಭೆಯನ್ನು ನಿರಂತರ ಪ್ರಯತ್ನದ ಮೂಲಕ ಹೊರ ಜಗತ್ತಿಗೆ ತಿಳಿಯಪಡಿಸಿ  ಅದರಲ್ಲಿ  ಸೈ ಎನಿಸಿಕೊಂಡ ಹಲವಾರು ಪ್ರತಿಭೆಗಳನ್ನು ನಾವಿಂದು ಸಮಾಜದಲ್ಲಿ ಕಾಣಬಹುದು. ನಮ್ಮ ಕರಾವಳಿ ಕರ್ನಾಟಕದಿಂದ ಬಂದಂತಹ  ಹಲವಾರು ಪ್ರತಿಭಾನ್ವಿತರು ಇಂದು ಮುಂಬಯಿ ಪುಣೆ ಹಾಗು ಇತರೆ ನಗರಗಳಲ್ಲಿ ವಿವಿಧ ಕಲಾ ಕ್ಷೇತ್ರಗಳಲ್ಲಿ ಸಾಧನೆಯನ್ನು ಮಾಡಿ ಮಿಂಚುತ್ತಿರುವುದು ಅಭಿಮಾನದ ಸಂಗತಿ. ಅದರಲ್ಲಿ ಮುಂಬಯಿ ಕಲಾ ಜಗತ್ತು ಇದರ ರೂವಾರಿ, ಅಮ್ಮ ಚಾವಡಿ ಇದರ   ಸಂಸ್ಥಾಪಕ, ಪತ್ತನಾಜೆ ಚಲನ ಚಿತ್ರ ನಿರ್ಮಾಪಕ ನಿರ್ದೇಶಕ ತೋನ್ಸೆ ವಿಜಯಕುಮಾರ್‌ ಶೆಟ್ಟಿ ಅವರ ಗರಡಿಯಲ್ಲಿ ಪಳಗಿದ ಹಲಾವಾರು ಪ್ರತಿಭೆ  ಇಂದು ಮುಂಬಯಿ  ರಂಗಭೂಮಿ ಮತ್ತು ಚಿತ್ರರಂಗದಲ್ಲಿ ಹೆಸರು ಗಳಿಸಿರುವುದು ತುಳುನಾಡಿನ ಮಣ್ಣಿನ ಗುಣವನ್ನು ತೋರಿಸುತ್ತದೆ.

Advertisement

ಹರೀಶ್‌ ಶೆಟ್ಟಿ ಎರ್ಮಾಳ್‌ ಅವರು  ಇಂದು ಗಾಯನ ಕ್ಷೇತ್ರದಲ್ಲಿ ಸಾಧನೆಯನ್ನು ಮಾಡಿ ತನ್ನದೇ ಅದ ಒಂದು ಕಲಾ ಸಂಸ್ಥೆಯನ್ನು ಹುಟ್ಟುಹಾಕಿ ಮುಂಬಯಿಯಲ್ಲಿ ಹಲವಾರು ಕಾರ್ಯಕ್ರಮಗಳನ್ನು  ನೀಡಿ  ಯಶಸ್ಸನ್ನು ಕಂಡು ಪ್ರಸ್ತುತ ಪುಣೆಯಲ್ಲಿ  ಶಾಖೆಯನ್ನು ತೆರೆಯುವ ಮುಲಕ  ಮಹಾರಾಷ್ಟ್ರದಾಂದ್ಯಂತ  ಕಲಾ ಸೇವೆಯ ಕಾಯಕವನ್ನು ಮಾಡಲು ಮುಂದಾಗಿ ಪ್ರತಿಭೆ ಮತ್ತು ಸಾಮರ್ಥ್ಯದಿಂದ ಕಲಾ ಪ್ರೌಡಿಮೆಯನ್ನು ಪಡೆಯಬಹುದು ಎಂಬುವುದನ್ನು ಸಮಾಜಕ್ಕೆ  ತೋರಿಸಿಕೊಟ್ಟಿ¨ªಾರೆ.

ಇತ್ತೀಚೆಗೆ  ಪುಣೆಯ ಗಣೇಶ್‌ ನಗರದ ಕನ್ನಡ ಸಂಘದ  ಶಕುಂತಲಾ ಜಗನ್ನಾಥ ಸಭಾಗೃಹದಲ್ಲಿ ಪನ್ವಿ ಕ್ರಿಯೇಷನ್ಸ್‌ ಮುಂಬಯಿಯ  ಪುಣೆ ಶಾಖೆಯ  ಉದ್ಘಾಟನ ಸಮಾರಂಭವು ಜರಗಿತು. ಈ ಸಂದರ್ಭದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಪನ್ವಿ ಕ್ರಿಯೇಷನ್ಸ್‌ ಇದರ ರೂವಾರಿ ಹರೀಶ್‌ ಶೆಟ್ಟಿ ಎರ್ಮಾಳ್‌  ಇವರ ಸಾರಥ್ಯದಲ್ಲಿ   ತಂಡದ ಪ್ರಬುದ್ಧ ಕಲಾವಿದರಿಂದ  ಸಂಗೀತ  ರಸ ಮಂಜರಿ ಹಾಗು ಪ್ರತಿಭಾವಂತ ಹಾಸ್ಯ ಕಲಾವಿದ ಉಮೇಶ್‌ ಹೆಗ್ಡೆ ಕಡ್ತಲ ಇವರ ನೇತೃತ್ವದಲ್ಲಿ ಮುಂಬಯಿ ಹಾಗು ಊರಿನ ಪ್ರಸಿದ್ದ ಕಲಾವಿದರಿಂದ  ರಾಗದ ರಸೊಕು ತೆಲಿಕೆದ ನೆಸಲ್‌ ಎಂಬ ಮನೋರಂಜನಾ ಕಾರ್ಯಕ್ರಮವು ಸೇರಿದ ಕಲಾಭಿಮಾನಿಗಳನ್ನು ಸುಮಧುರ ರಾಗದೊಂದಿಗೆ ನಕ್ಕು ನಗಿಸುವ ಹಾಸ್ಯದೊಂದಿಗೆ ಮನ ತಣಿಸಿ ಪ್ರಶಂಸೆಗೆ ಪಾತ್ರವಾಯಿತು.

ಪನ್ವಿ ಕ್ರಿಯೇಷನ್ಸ್‌ನ ರೂವಾರಿ ಗಾಯಕ ಹರೀಶ್‌ ಶೆಟ್ಟಿ ಇವರ ಸುಮಧುರ ಕಂಠದ ರಾಗದಿಂದ  ತುಳು,  ಕನ್ನಡ, ಹಿಂದಿಯ ಹಾಡುಗಳು ಪ್ರೇಕ್ಷಕರ ಮನಸೂರೆಗೊಂಡಿತು.  ಅಲ್ಲದೆ ಅವರ ತಂಡದ  ಸದಸ್ಯರು  ಮತ್ತು ಗಾಯನ ಕ್ಷೇತ್ರದಲ್ಲಿ ಹೆಸರು ಗಳಿಸಿದ  ಪ್ರತಿಭೆಗಳಾದ  ಸುಧೀರ್‌ ಶೆಟ್ಟಿ ಮತ್ತು ಶ್ರ¨ªಾ ಬಂಗೇರ ಇವರ ಕಂಠದಿಂದ ಹೊರ ಹೊಮ್ಮಿದ ಹಾಡುಗಳು ಪುಣೆಯ ತುಳು ಕನ್ನಡಿಗರ ಮನ ಗೆಲ್ಲುವಲ್ಲಿ ಯಶಸ್ವಿಯಾಯಿತು. ಇವರಿಗೆ ಸಹಪಾಠಿಯಾಗಿ  ತಂಡದ ತಂಡದ ಇನ್ನೋರ್ವ ಸದಸ್ಯ ದೇವರಾಜ್‌ ಅವರು   ಹಾಡಿದ ಹಿಂದಿ ಗೀತೆಗಳು ಅತ್ಯಂತ ಮನಮೋಹಕವಾಗಿತ್ತು.

ಅಲ್ಲದೆ ಹಿನ್ನೆಲೆ  ವಾದ್ಯ ಸಂಗೀತದವರಿಂದ ಉತ್ತಮ ರೀತಿಯ   ಸಂಗೀತದ ಜುಗಲ್ಬಂದಿ ಕೂಡಾ ಈ ಕಾರ್ಯಕ್ರಮದ ಯಶಸ್ವಿಗೆ ಕಾರಣವಾಯಿತು. ಶ್ರ¨ªಾ ಬಂಗೇರ ಇವರು ಚಿಣ್ಣರ ಬಿಂಬದ ಸದಸ್ಯೆಯಾಗಿ, ವಿಜಯ ಕುಮಾರ್‌ ಶೆಟ್ಟಿ ಅವರ  ಶಿಷ್ಯೆಯಾಗಿ ಅವರ ಮಾರ್ಗದರ್ಶನದಲ್ಲಿ ಬೆಳೆದು ಇಂದು ಗಾಯನದಲ್ಲಿ   ಸುಂದರ ಸ್ವರ ಮಾದುರ್ಯದಿಂದ ಎಲ್ಲರ ಪ್ರಶಂಸೆಗೆ ಪಾತ್ರರಾದವರು. ವಿಜಯ ಕುಮಾರ್‌ ಶೆಟ್ಟಿಯವರು ಇವರ ಪ್ರತಿಭೆಯನ್ನು ಮೆಚ್ಚಿ ತನ್ನ ಮುಂದಿನ ತುಳು  ಚಿತ್ರದಲ್ಲಿ ಗಾಯಕರಾಗಿ ಇವರಿಗೆ ಅವಕಾಶವನ್ನು ಕೊಡುತ್ತೇನೆ ಎಂದು ಈ ಸಮಾರಂಭದಲ್ಲಿ ಹೇಳಿರುವುದು ಪನ್ವಿ ಕ್ರಿಯೇಶನ್ಸ್‌  ಕಾರ್ಯಕ್ರಮಗಳು ಹೇಗಿದ್ದವು ಎಂಬುದಕ್ಕೆ ಸಾಕ್ಷಿಯಾಗಿದೆ.

Advertisement

ರಾಗದ ರಸೋಕು ತೆಲಿಕೆದ ನೆಸಲ್‌ ಎಂಬ ಹೆಸರಿಗೆ ತಕ್ಕಂತೆ ಗಾಯನ ಮತ್ತು ಹಾಸ್ಯದ ಮಿಶ್ರಣದ ಈ ಕಾರ್ಯಕ್ರಮದಲ್ಲಿ ಉಮೇಶ್‌ ಹೆಗ್ಡೆ ಕಡ್ತಲ  ಮತ್ತು ಕಿಶೋರ್‌ ಶೆಟ್ಟಿ ಪಿಲಾರ್‌, ಮದುಸೂಧನ್‌ ಶೆಟ್ಟಿ ಮಾಣಿಬೆಟ್ಟು ಮತ್ತು ಪುಣೆಯ ಯಕ್ಷಗಾನ ಮತ್ತು  ನಾಟಕ ರಂಗದಲ್ಲಿ  ಹಾಸ್ಯ ಪಾತ್ರದಾರಿಯಾಗಿ ಈಗಾಗಲೇ ಹೆಸರು ಗಳಿಸಿರುವ ಸುಧೀರ್‌  ಶೆಟ್ಟಿ ಕುಕ್ಕುಂದುರು ಇವರ ಜೋಡಿಯ ಹಾಸ್ಯದ ತುಣುಕುಗಳು ಕಲಾ ರಸಿಕರನ್ನು ರಂಜಿಸಿತು.  ಉತ್ತಮ ನಟನೆಯೊಂದಿಗೆ ನಗೆಯ ಹಬ್ಬದ ಪಂಚ್‌ಗಳನ್ನು ನೀಡಿ ಸಮಾಜಕ್ಕೆ ಬೇಕಾಗುವ ಕಥಾ ಹಂದರದೊಂದಿಗೆ ಉತ್ತಮ ಸಂದೇಶವನ್ನು ನೀಡುವಂತಹ ಇವರ ಹಾಸ್ಯದ ಮೋಡಿ, ಮನಸ್ಸಿನ ದು:ಖ-ದುಮ್ಮಾನವನ್ನು ದೂರ ಮಾಡಿ ಉಲ್ಲಾಸವನ್ನು ನೀಡುವಂತೆ ಮಾಡಿತು.

ಈ ಕಾರ್ಯಕ್ರಮದಿಂದ ಹರೀಶ್‌ ಶೆಟ್ಟಿ ಎರ್ಮಾಳ್‌ ಮತ್ತು ತಂಡದವರ ಪ್ರತಿಭೆಯು ಪುಣೆಯ ತುಳು-ಕನ್ನಡಿಗರಿಗೆ ಅರಿಯಲು ಸಹಕಾರಿಯಾಯಿತು. ಅಲ್ಲದೆ ಪುಣೆಯಲ್ಲಿ ಸಂಘ ಸಂಸ್ಥೆಗಳು, ತುಳು-ಕನ್ನಡಿಗರು  ಇವರ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಕಲೆಗೆ ಮತ್ತು ಪನ್ವಿ ಕ್ರಿಯೇಷನ್ಸ್‌ಗೆ ಸಂಸ್ಥೆಗೆ  ಪ್ರೋತ್ಸಾಹ ನೀಡಬೇಕು. ಸಂಸ್ಥೆಯು ಉತ್ತಮ ಕಾರ್ಯಕ್ರಮಗಳೊಂದಿಗೆ ನೂತನ  ಪ್ರತಿಭೆಗಳಿಗೆ ಪ್ರೋತ್ಸಾಹ ನೀಡಿ ದೊಡ್ಡ ಮಟ್ಟದಲ್ಲಿ ಬೆಳೆಯಲಿ ಎಂಬುವುದೇ ನಮ್ಮ ಆಶಯ.

ಹರೀಶ್‌ ಮೂಡಬಿದ್ರೆ

Advertisement

Udayavani is now on Telegram. Click here to join our channel and stay updated with the latest news.

Next