Advertisement

ಪನ್ನೂನ್‌ ಹತ್ಯೆಯ ಸಂಚು :  ಮುಂದಿನ ವಾರ FBI ನಿರ್ದೇಶಕ ಭಾರತಕ್ಕೆ

11:48 PM Dec 07, 2023 | Team Udayavani |

ಹೊಸದಿಲ್ಲಿ: ಅಮೆರಿಕದಲ್ಲಿ ಸಿಕ್ಖ್  ಪ್ರತ್ಯೇಕತಾವಾದಿ, ಸಿಕ್ಖ್$ಫಾರ್‌ ಜಸ್ಟೀಸ್‌ನ ಉಗ್ರ ಗುರುಪತ್ವಂತ್‌ ಸಿಂಗ್‌ ಪನ್ನೂನ್‌ ಹತ್ಯೆಯ ಸಂಚು ಹಿಂದೆ ಭಾರತದ ಸರಕಾರಿ ಅಧಿಕಾರಿಯೊಬ್ಬರ ಕೈವಾಡವಿದೆ ಎಂಬ ಆರೋಪದ ಬೆನ್ನಲ್ಲೇ ಅಮೆರಿಕದ ತನಿಖಾ ಸಂಸ್ಥೆ ಎಫ್ಬಿಐ ನಿರ್ದೇಶಕ ಕ್ರಿಸ್ಟೋಫ‌ರ್‌ ರೇ ಮುಂದಿನ ವಾರ ಭಾರತಕ್ಕೆ ಭೇಟಿ ನೀಡಲಿದ್ದಾರೆ.

Advertisement

ಭಾರತದಲ್ಲಿರುವ ಅಮೆರಿಕ ರಾಯಭಾರಿ ಎರಿಕ್‌ ಗರ್ಸೆಟ್ಟಿ ಅವರು ಈ ವಿಚಾರವನ್ನು ತಿಳಿಸಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ವಿದೇಶಾಂಗ ಇಲಾಖೆ ವಕ್ತಾರ ಅರಿಂದಮ್‌ ಬಗಿc, ನಾವು ಅಮೆರಿಕದೊಂದಿಗೆ ಎಲ್ಲ ವಲಯಗಳಲ್ಲಿ ಉತ್ತಮ ಬಾಂಧವ್ಯ ಹೊಂದಿದ್ದೇವೆ. ಇದರ ಭಾಗವಾಗಿಯೇ ಎಫ್ಬಿಐ ನಿರ್ದೇಶಕರು ಭಾರತಕ್ಕೆ ಬರುತ್ತಿದ್ದಾರೆ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next