Advertisement

ಇವರನ್ನು ಕಂಡರೆ ತಾಲಿಬಾನಿಗಳಿಗೇಕೆ ನಡುಕ?: ಪಂಜ್‌ಶೀರ್‌ನ ಲಾಸ್ಟ್‌ “ಪಂಚ್‌’

11:43 PM Sep 04, 2021 | Team Udayavani |

ಒಂದೆಡೆ ತಾಲಿಬಾನ್‌ ಉಗ್ರರು ಕಾಬೂಲ್‌ನಲ್ಲಿ ಗದ್ದುಗೆ ಏರಲು ತುದಿಗಾಲಿನಲ್ಲಿ ನಿಂತಿದ್ದಾರೆ. ಏತನ್ಮಧ್ಯೆ ಕಾಬೂಲ್‌ನಿಂದ ಅಣತಿ ದೂರದ ಪಂಜ್‌ಶೀರ್‌ ಎಂಬ ಪುಟ್ಟ ಪ್ರಾಂತ್ಯ ತಾಲಿಬಾನಿಗಳಿಗೆ ತೊಡೆತಟ್ಟಿ ಸವಾಲು ಹಾಕಿದೆ. ಪಂಜ್‌ಶೀರ್‌ನ ತಾಲಿಬಾನ್‌ ವಿರೋಧಿಬಣ ಎನ್‌ಆರ್‌ಎಫ್, ಸತತ 2 ವಾರಗಳಿಂದ ಕೆಚ್ಚೆದೆಯ ಹೋರಾಟ ನಡೆಸುತ್ತಿದೆ.

Advertisement

ಪಂಜ್‌ಶೀರ್‌ ಎಲ್ಲಿದೆ? :

ಪಂಜ್‌ಶೀರ್‌ ನದಿಯ ತಟದಲ್ಲಿನ ಪ್ರಶಾಂತ ಕಣಿವೆಗಳ ಪುಟ್ಟ ಪ್ರಾಂತ್ಯ. 9,800 ಅಡಿ ಎತ್ತರದ ಪರ್ವತ ಶ್ರೇಣಿಗಳು ಇಲ್ಲಿವೆ. 2 ಲಕ್ಷ ಜನಸಂಖ್ಯೆಯಿದ್ದು, ಸಾಂಪ್ರದಾಯಿಕ ಬುಡಕಟ್ಟು ಜನ “ತಜಿಕ್ಸ್‌’ ಇಲ್ಲಿ ಹೇರಳ ಸಂಖ್ಯೆಯಲ್ಲಿದ್ದಾರೆ.

ಇಲ್ಲಿ ತಾಲಿಬಾನಿಗಳಿಗೆ ಸವಾಲು ಹಾಕಿದ್ಯಾರು? :

ಬಹುಸಂಪ್ರದಾಯವಾದಿ ಬಣಗಳ ಒಕ್ಕೂಟವಾಗಿರುವ ನ್ಯಾಶನಲ್‌ ರೆಸಿಸ್ಟನ್ಸ್‌ ಫ್ರಂಟ್‌ (ಎನ್‌ಆರ್‌ಎಫ್) ಇಲ್ಲಿ ಬಲಿಷ್ಠ ಸೇನೆ ಕಟ್ಟಿದ್ದು, ತಾಲಿಬಾನಿಗಳಿಗೆ ಸವಾಲಾಗಿದೆ. “ಪಂಜ್‌ಶೀರ್‌ನ ಸಿಂಹ’ ಎಂದೇ ಖ್ಯಾತಿ ಪಡೆದ ಅಹ್ಮದ್‌ ಮಸೌದ್‌ ಎನ್‌ಆರ್‌ಎಫ್ನ ಸಂಸ್ಥಾಪಕ.

Advertisement

ಅಹ್ಮದ್‌ ಮಸೌದ್‌ ಯಾರು? :

1980ರಲ್ಲಿ ಸೋವಿಯತ್‌ ಆಕ್ರಮಣ ತಡೆಯುವಲ್ಲಿ ಹಾಗೂ 1990ರಲ್ಲಿ ತಾಲಿಬಾನ್‌ ಉಗ್ರರನ್ನು ಕಾಬೂಲ್‌ನಿಂದ ಹೊರಗಟ್ಟುವಲ್ಲಿ ಸಫ‌ಲರಾಗಿದ್ದ ನಾಯಕ ಅಹ್ಮದ್‌ ಶಾ ಮಸೌದ್‌ರ ಪುತ್ರ. ಅಹ್ಮದ್‌, ಲಂಡನ್‌ನ ಕಿಂಗ್ಸ್‌ ಕಾಲೇಜ್‌ ಮತ್ತು ಸ್ಯಾಂಡ್ರಸ್ಟ್‌ ಮಿಲಿಟರಿ ಅಕಾಡೆಮಿಯಲ್ಲಿ ಪದವೀಧರ. ಫ್ರಾನ್ಸ್‌ ಅಧ್ಯಕ್ಷ ಇಮ್ಮಾನುಯಲ್‌ ಮ್ಯಾಕ್ರಾನ್‌ನ ಆಪ್ತನೂ ಹೌದು.

ಎನ್‌ಆರ್‌ಎಫ್ ಉದ್ದೇಶ ಏನು? :

ತಾಲಿಬಾನಿಗಳ ಆಕ್ರಮಣ ತಡೆ ಮತ್ತು ಪ್ರಜಾಪ್ರಭುತ್ವ ಮರುಸ್ಥಾಪನೆ.

ಎನ್‌ಆರ್‌ಎಫ್ ಸೇನೆ ಹೇಗಿದೆ? :

ದೊಡ್ಡ ದೊಡ್ಡ ಮರದ ದಿಮ್ಮಿಗಳನ್ನು ಹೊತ್ತು ಎನ್‌ಆರ್‌ಎಫ್ ಸೈನಿಕರು ಗುಡ್ಡಗಾಡುಗಳಲ್ಲಿ ತಾಲೀಮು ನಡೆಸುತ್ತಿರುವ ಫೋಟೋಗಳು ಭಾರೀ ವೈರಲ್‌ ಆಗಿವೆ. ಪಂಜ್‌ಶೀರ್‌ನ ಸುತ್ತ ಬಲಿಷ್ಠ ಸೈನಿಕರು ಮಷೀನ್‌ ಗನ್‌ ಹಿಡಿದು, ಕಣ್ಗಾವಲು ಪೋಸ್ಟ್‌ಗಳನ್ನು ನಿರ್ಮಿಸಿ, ಉಗ್ರರಿಗೆ ತಡೆಗೋಡೆಯಾಗಿದ್ದಾರೆ. ಈ 2 ವಾರಗಳಿಂದ ಇಲ್ಲಿ ನಿರಂತರ ಸಂಘರ್ಷ ಸಾಗಿದ್ದು, ಸಾಕಷ್ಟು ಪ್ರಾಣಹಾನಿಯಾಗಿದೆ.

ಪಂಜ್‌ಶೀರ್‌ ಕಬಳಿಸಲು  ತಾಲಿಬಾನ್‌ ಪಟ್ಟೇಕೆ? :

ಬೆಲೆಬಾಳುವ ಮುತ್ತುರತ್ನಗಳು, ಗಣಿಗಾರಿಕೆಗೆ ಈ ಪ್ರಾಂತ್ಯ ಹೆಸರುವಾಸಿ. ಇಲ್ಲಿನ ಮೈನಿಂಗ್‌ಗೆ ಅಮೆರಿಕ ಸಾಕಷ್ಟು ಹೂಡಿಕೆ ಮಾಡಿದೆ. ಹೈಡ್ರೋಎಲೆಕ್ಟ್ರಿಕ್‌ ಡ್ಯಾಂ, ವಿಂಡ್‌ ಫಾರ್ಮ್, ಸುಸಜ್ಜಿತ ರಸ್ತೆ, ರೇಡಿಯೊ ಟವರ್‌- ಹೀಗೆ ಪ್ರಾಂತ್ಯ ಅಪಾರ ಅಭಿವೃದ್ಧಿ ಕಂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next