Advertisement

ಏಷ್ಯಾದ ಅಕ್ಕಿ ಮಾರುಕಟ್ಟೆಯಲ್ಲಿ ತಲ್ಲಣ; ಭಾರತದಲ್ಲಿ ಅಕ್ಕಿ ರಫ್ತು ಸುಂಕ ಹೆಚ್ಚಳ

12:58 AM Sep 13, 2022 | Team Udayavani |

ಭಾರತವು ಕುಚ್ಚಿಗೆ ಮತ್ತು ಬಾಸ್ಮತಿಯೇತರ ಅಕ್ಕಿ ರಫ್ತಿನ ಮೇಲೆ ರಫ್ತು ಸುಂಕ ಹೆಚ್ಚಳ, ನುಚ್ಚಕ್ಕಿ ರಫ್ತು ನಿಷೇಧ ಕ್ರಮಗಳನ್ನು ಕೈಗೊಂಡ ಬೆನ್ನಲ್ಲೇ ಏಷ್ಯಾದ ವ್ಯಾಪಾರ ವಹಿವಾಟು ವಲಯದಲ್ಲಿ ತಲ್ಲಣ ಉಂಟಾಗಿದೆ. ಆಮದುಗಾರ ದೇಶಗಳು ವಿಯೆಟ್ನಾಂ, ಥೈಲ್ಯಾಂಡ್, ಮ್ಯಾನ್ಮಾರ್‌ನಂತಹ ದೇಶಗಳತ್ತ ಗಮನಹರಿಸಿವೆ.

Advertisement

ಮಣಿಪಾಲ: ಜಗತ್ತಿನ ಅತೀ ದೊಡ್ಡ ಅಕ್ಕಿ ರಫ್ತುದಾರನಾದ ಭಾರತ ದೇಶೀಯವಾಗಿ ಆಹಾರ ಭದ್ರತೆಯನ್ನು ಕಾಪಾಡಿಕೊಳ್ಳುವ ಸಲು ವಾಗಿ ನುಚ್ಚಕ್ಕಿ ರಫ‌¤ನ್ನು ನಿಷೇಧಿಸಿದೆ, ಕುಚ್ಚಿಗೆ ಮತ್ತು ಬಾಸ್ಮತಿಯೇತರ ಅಕ್ಕಿ ರಫ್ತಿನ ಮೇಲೆ ಶೇ. 20 ಸುಂಕ ವಿಧಿಸಿದೆ. ಈ ಕ್ರಮದ ಬೆನ್ನಲ್ಲೇ ಏಷ್ಯಾದ ಮಾರುಕಟ್ಟೆಗಳಲ್ಲಿ ಅಕ್ಕಿಯ ದರ ಶೇ. 5ರಷ್ಟು ಹೆಚ್ಚಳವಾಗಿದ್ದು, ಈ ವಾರದಲ್ಲಿಯೇ ಇನ್ನಷ್ಟು ಏರಿಕೆಯಾಗುವ ಸಾಧ್ಯತೆ ಇದೆ.

“ಏಷ್ಯಾದಾದ್ಯಂತ ಅಕ್ಕಿ ಮಾರಾಟಕ್ಕೆ ಲಕ್ವಾ ಬಡಿದಂತಾಗಿದೆ. ಮಾರಾಟಗಾರರು ತರಾತುರಿಯ ನಿರ್ಧಾರಗಳನ್ನು ಕೈಗೊಳ್ಳುತ್ತಿಲ್ಲ’ ಎಂದು ಭಾರತದ ಅತೀ ದೊಡ್ಡ ಅಕ್ಕಿ ರಫ್ತುಗಾರನಾದ ಸತ್ಯಂ ಬಾಲಾಜಿ ಸಂಸ್ಥೆಯ ಕಾರ್ಯಕಾರಿ ನಿರ್ದೇಶಕ ಹಿಮಾಂಶು ಅಗರ್ವಾಲ್‌ ಹೇಳಿ ದ್ದಾರೆ. ಜಾಗತಿಕ ಅಕ್ಕಿ ರಫ್ತಿನಲ್ಲಿ ಭಾರತದ ಪಾಲು ಶೇ. 40. ಹೀಗಾಗಿ ಮುಂಬರುವ ತಿಂಗಳುಗಳಲ್ಲಿ ಬೆಲೆ ಎಷ್ಟು ಎತ್ತರಕ್ಕೆ ಏರೀತು ಎಂಬ ಅಂದಾಜು ಯಾರಿಗೂ ಇಲ್ಲ ಎಂದು ಅಗರ್ವಾಲ್‌ ಹೇಳಿದ್ದಾರೆ.

ರಫ್ತು ಸ್ಥಗಿತ
ಭಾರತದ ಬಂದರುಗಳಿಂದ ಅಕ್ಕಿ ರವಾನೆ ಸ್ಥಗಿತಗೊಂಡಿದೆ. ಈಗಾಗಲೇ ಗುತ್ತಿಗೆ ಒಪ್ಪಂದ ಮಾಡಿಕೊಳ್ಳಲಾದ ದರದ ಮೇಲೆ ಇಷ್ಟು ಕರ ಪಾವತಿಸಲು ಕೊಳ್ಳುಗರು ಹಿಂದೇಟು ಹಾಕಿರುವು ದರಿಂದ ಅಂದಾಜು 10 ಲಕ್ಷ ಟನ್‌ ಅಕ್ಕಿ ಬಂದರುಗಳಲ್ಲಿ ರಾಶಿ ಬಿದ್ದಿದೆ. ಕೆಲವರು ಹೆಚ್ಚು ದರ ತೆತ್ತು ಹೊಸ ಗುತ್ತಿಗೆ ಒಪ್ಪಂದಕ್ಕೆ ಆಸಕ್ತಿ ತೋರಿದ್ದರೂ ರವಾನೆದಾರರು ಮಾತ್ರ ಹಳೆಯ ಒಪ್ಪಂದಗಳನ್ನು ಬಗೆಹರಿಸಿಕೊಳ್ಳದೆ ಹೊಸ ಒಪ್ಪಂದಗಳತ್ತ ಆಸಕ್ತಿ ತೋರುತ್ತಿಲ್ಲ.

01 ಶೇ. 5 ಅಥವಾ ಪ್ರತೀ ಟನ್‌ಗೆ 20 ಡಾಲರ್‌: ಕಳೆದ 4 ದಿನಗಳಲ್ಲಿ ಥಾçಲಂಡ್‌, ವಿಯೆಟ್ನಾಂ, ಮ್ಯಾನ್ಮಾರ್‌ ಮೂಲದ ಬೆಳ್ತಿಗೆ ನುಚ್ಚಕ್ಕಿ ಬೆಲೆಯೇರಿಕೆ
02 ಪ್ರತೀ ಟನ್‌ಗೆ 410 ಡಾಲರ್‌: ಸೋಮ ವಾರ ವಿಯೆಟ್ನಾಮಿ ನುಚ್ಚಕ್ಕಿ ಬೆಲೆ
03 ಕಳೆದ ವಾರ ಇದ್ದ ಬೆಲೆ: ಪ್ರತೀ ಟನ್‌ಗೆ 390-393 ಡಾಲರ್‌

Advertisement

ಥೈಲ್ಯಾಂಡ್, ವಿಯೆಟ್ನಾಮ್‌, ಪಾಕಿಸ್ಥಾನ, ಅಮೆರಿಕಗಳ ಒಟ್ಟು ರಫ್ತಿಗಿಂತ ಹೆಚ್ಚು

ಪ್ರೀಮಿಯಂ ದರ್ಜೆಯ ಬಾಸ್ಮತಿ ಅಕ್ಕಿ ಆಮದುಗಾರ ದೇಶಗಳು
ಇರಾನ್‌ ,ಇರಾಕ್‌ ,ಸೌದಿ ಅರೇಬಿಯಾ

ಸಾಮಾನ್ಯ ದರ್ಜೆ ಅಕ್ಕಿಯ ಪ್ರಮುಖ ಆಮದುಗಾರ ದೇಶಗಳು
ಚೀನ ,ಫಿಲಿಪ್ಪೀನ್ಸ್‌ , ಸೆನೆಗಲ್‌ ,ಬೆನಿನ್‌, ,ನೈಜೀರಿಯಾ , ಘಾನಾ

 

Advertisement

Udayavani is now on Telegram. Click here to join our channel and stay updated with the latest news.

Next