Advertisement

ಮಾಸ್ಕ್ ಬಳಸದ ಆಟೋಚಾಲಕರಿಂದ ಭೀತಿ

05:35 AM Jun 06, 2020 | Lakshmi GovindaRaj |

ಬೆಂಗಳೂರು: ನಗರದಲ್ಲಿ ಕೆಲ ಆಟೋ ಚಾಲಕರು ಮುಖಗವಸು ಹಾಕಚಾಲನೆ ಮಾಡುತ್ತಿದ್ದು, ಸ್ವಲ್ಪ ಯಾಮಾರಿದರೂ ಇವು ಸೋಂಕಿನ ಮೂಲಗಳಾಗಿ ಪರಿವರ್ತನೆ ಆಗುವ ಸಾಧ್ಯತೆ ಇದೆ. ನಮ್ಮ ಮೆಟ್ರೋ’ ಸೇವೆ ಸದ್ಯಕ್ಕಿಲ್ಲ. ಇನ್ನು  ಬಿಎಂಟಿಸಿ ಬಸ್‌ಗಳ‌ು ಏರಲು ನ ಹಿಂದೇಟು ಹಾಕುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಬೇರೆ ರಾಜ್ಯ ಮತ್ತು ಜಿಲ್ಲೆಗಳಿಂದ ನಗರದ ರೈಲು, ಬಸ್‌ ನಿಲಾಣಗಳಿಗೆ ಬಂದಿಳಿಯುವವರ ನ್ನು ಮನೆಗಳಿಗೆ ತಲುಪಿಸುವ “ಸಂಪರ್ಕ ಸೇತುವೆ’ಗಳಾಗಿ ಆಟೋಗಳು ಈಗ ಕಾರ್ಯನಿರ್ವಹಿಸುತ್ತಿವೆ.

Advertisement

ಆದರೆ, ಕೆಲ ಚಾಲಕರು ಮುಖಗವಸು ಮತ್ತು ಹ್ಯಾಂಡ್‌ ಸ್ಯಾನಿಟೈಸರ್‌ ಬಳಕೆ ಮಾಡುತ್ತಿಲ್ಲ. ಅಷ್ಟೇ ಅಲ್ಲ, ಸಾಮಾ ಜಿಕ ಅಂತರವಂತೂ ಮರೀಚಿಕೆ ಯಾಗಿದೆ. ಇದು ಸೋಂಕಿನ ಭೀತಿಗೆ ಎಡೆಮಾಡಿಕೊಡುತ್ತಿದೆ. ಹಲಸೂರು, ಕೆ.ಆರ್‌. ಪುರ, ರಾಜಾಜಿನಗರ, ಮಲ್ಲೇಶ್ವರ ಮತ್ತಿತರ ಕಡೆಗಳಲ್ಲಿ ಸಂಚರಿಸುವ ಆಟೋ ಚಾಲಕರು ಅಲ್ಲಲ್ಲಿ ಮುಖಗವಸು ಹಾಕದೆ, ಚಾಲನೆ ಮಾಡುತ್ತಿರುವುದು ಕಂಡುಬರುತ್ತಿದೆೆ.

ನ‌ಗರದಲ್ಲಿ  ಒಂದೆಡೆ ದಿನದಿಂದ ‌ಕ್ಕೆ ಸೋಂಕಿತರ ಸಂಖ್ಯೆ ಏರಿಕೆ ಯಾಗುತ್ತಿದೆ. ಮತ್ತೂಂದೆಡೆ ಲಾಕ್‌ ಡೌನ್‌ ತೆರವಾಗುತ್ತಿದ್ದು, ಜನ ಸಂಚಾರ ಹೆಚ್ಚಳವಾಗಿದೆ. ಈ ವೇಳೆ ಮುನ್ನೆಚ್ಚರಿಕೆ ಕ್ರಮಗಳ ನಿರ್ಲಕ್ಷ್ಯ ಮತ್ತೂಂದು ಸಮಸ್ಯೆಗೆ ಆಹ್ವಾನಿಸಿ ದಂತಾಗುತ್ತದೆ. ಈ  ನಿಟ್ಟಿನಲ್ಲಿ ಸಂಬಂಧಪಟ್ಟ ಇಲಾಖೆಗಳು ಕ್ರಮ ಕೈಗೊಳ್ಳಬೇಕು ಎಂಬ ಒತ್ತಾಯ ಪ್ರಯಾಣಿಕರಿಂದ ಕೇಳಿಬರುತ್ತಿದೆ.

“ತಡೆದು ವಿಚಾರಿಸಿದ್ದು ಕಂಡಿಲ್ಲ’: “ಮುಖಗವಸು ಇಲ್ಲದೆ ಚಾಲನೆ ಮಾಡುತ್ತಿರುವುದು ಅಥವಾ ಸಾಮಾಜಿಕ ಅಂತರ  ಇಲ್ಲದೆ ಹೆಚ್ಚು ಜನರನ್ನು ಕರೆದೊಯ್ಯುತ್ತಿರುವುದು ಕಂಡುಬಂದರೂ, ಇಲ್ಲಿಯವರೆಗೆ ಯಾವುದೇ ಆಟೋಗಳನ್ನು ತಡೆದು ವಿಚಾರಣೆ ಮಾಡಿದ್ದನ್ನು ನಾನು ನೋಡಿಲ್ಲ. ಸಿಗ್ನಲ್‌ಗ‌ಳಲ್ಲೇ ಎಷ್ಟೋ ಕಡೆ ಈ ರೀತಿ ಕೆಲವರು ಮುನ್ನೆಚ್ಚರಿಕೆ  ಕ್ರಮಗಳ ಬಗ್ಗೆ ನಿರ್ಲಕ್ಷ್ಯ ತೋರಿರುವುದನ್ನು ಕಾಣಬಹುದು’ ಎಂದು ಮಲ್ಲೇಶ್ವರ ನಿವಾಸಿ ಮೋಹನ್‌ ತಿಳಿಸುತ್ತಾರೆ. “ಉಳಿದವರಿಗಿಂತ ಆಟೋ ಚಾಲಕರು ಹೆಚ್ಚು ಜಾಗರೂ ಕರಾಗಿರಬೇಕು.

ಇದು ಗ್ರಾಹಕರ ಹಿತದೃಷ್ಟಿಯಿಂದ ಮಾತ್ರವಲ್ಲ; ಸ್ವತಃ  ಚಾಲಕರ ದೃಷ್ಟಿಯಿಂದಲೂ ಮುಖ್ಯ. ಯಾಕೆಂದರೆ, ಆಟೋ ಗಳಲ್ಲಿ ನಿತ್ಯ ನೂರಾರು ಜನ ಪ್ರಯಾಣಿಸುತ್ತಾರೆ. ಅದೂ ನಾನಾ ಭಾಗಗಳಿಂದ ನಗರಕ್ಕೆ ಬಂದಿಳಿದವರು ಇದರಲ್ಲಿ ಹತ್ತಿ-ಇಳಿದಿರುತ್ತಾರೆ. ಒಂದು ವೇಳೆ ಯಾರೊಬ್ಬರಲ್ಲಿ ವೈರಸ್‌  ಪತ್ತೆಯಾದರೂ ಸೋಂಕಿನ ಮೂಲ ಹಿಡಿಯುವುದು ಕಷ್ಟಕರ. ಈ ಹಿನ್ನೆಲೆಯಲ್ಲಿ ಸಾರಿಗೆ ಇಲಾಖೆ ಹಾಗೂ ಪೊಲೀಸರು ಕಾರ್ಯಾಚರಣೆ ನಡೆಸುವ ಅವಶ್ಯಕತೆ ಇದೆ’ ಎಂದು ಹಲಸೂರು ನಿವಾಸಿ ಗಿರೀಶ್‌ ಒತ್ತಾಯಿಸುತ್ತಾರೆ.

Advertisement

ಶೀಘ್ರ ವಿಶೇಷ ಕಾರ್ಯಾಚರಣೆ; ಅಧಿಕಾರಿ: ಲಾಕ್‌ಡೌನ್‌ ಪರಿಣಾಮ 2ತಿಂಗಳಿಂದ ಈ ವರ್ಗ ತೀವ್ರ ಸಂಕಷ್ಟಕ್ಕೆ ಸಿಲುಕಿತ್ತು. ಈಗಷ್ಟೇ ರಸ್ತೆಗಿಳಿಯುತ್ತಿದ್ದು, ಚೇತರಿಕೆ ಕಾಣುತ್ತಿದೆ. ಇದರ ಜತೆಗೆ ಆರೋಗ್ಯ ರಕ್ಷಣೆ ಕೂಡ ಮುಖ್ಯ. ದುಡಿಮೆ  ಭರದಲ್ಲಿ ಕೆಲವು ಆಟೋಗಳಲ್ಲಿ ನಾಲ್ಕೈದು ಜನರನ್ನು ಕೊಂಡೊ ಯ್ಯುವುದು ಸಾಮಾನ್ಯವಾಗಿ ದೆ. ನಿತ್ಯ ಮುಂಬೈ, ಬೆಳಗಾವಿ, ಹೌರಾ, ದೆಹಲಿ ಸೇರಿದಂತೆ ಹಲವು ಕಡೆಗಳಿಂದ ಯಶವಂತಪುರ, ಮೆಜೆಸ್ಟಿಕ್‌ಗೆ ಜನ ಬಂದಿಳಿಯುತ್ತಿದ್ದಾರೆ.

ಅವರೆಲ್ಲಾ ನೇರವಾಗಿ ಆಟೋಗಳನ್ನು ಏರಿ, ಮನೆಗಳಿಗೆ ತೆರಳುತ್ತಾರೆ. “ನಗರದಲ್ಲಿ ಸುಮಾರು 1.40 ಲಕ್ಷ ಆಟೋಗಳಿವೆ. 2-ಸ್ಟ್ರೋಕ್‌ ಆಟೋಗಳು ತುಂಬಾ ಕಡಿಮೆ. ಸರ್ಕಾರಿ ನಿಯಮದ ಪ್ರಕಾರ ಮುಖಗವಸು ಹಾಕಿಕೊಳ್ಳುವುದು ಹಾಗೂ  ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಡ್ಡಾಯ. ನಿಯಮ ಉಲ್ಲಂಘನೆ ದಂಡನಾರ್ಹವಾಗಿದೆ. ಈ ಬಗ್ಗೆ ಶೀಘ್ರ ಕಾರ್ಯಾಚರಣೆ ನಡೆಸಿ, ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಸದ್ಯಕ್ಕೆ ಅಂತಹ ಯಾವುದೇ ದೂರುಗಳಂತೂ ಬಂದಿಲ್ಲ’  ಎಂದು ಸಾರಿಗೆ ಇಲಾಖೆ ಅಪರ ಸಾರಿಗೆ ಆಯುಕ್ತ (ಪ್ರವರ್ತನ) ಶಿವರಾಜ್‌ ಪಾಟೀಲ್‌ “ಉದಯವಾಣಿ’ಗೆ ಸ್ಪಷ್ಟಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next