ತಿರುವನಂತಪುರ: ಅದ್ಧೂರಿಯಾಗಿ ಮದುವೆ ನಡೆಯಬೇಕು ಎನ್ನುವ ಕಾರಣಕ್ಕಾಗಿ ಚಿತ್ರನಟರನ್ನು ಗಣ್ಯ ವ್ಯಕ್ತಿಗಳನ್ನು ಆಹ್ವಾನಿಸಲಾಗುತ್ತದೆ.
ಆದರೆ, ಕೇರಳದ ಯುವ ಜೋಡಿಯೊಂದು ದೇಶದ ಭದ್ರತೆಗಾಗಿ ತಮ್ಮ ಜೀವವನ್ನೇ ಮುಡಿಪಾಗಿ ಇರಿಸಿಕೊಳ್ಳುವ ಸೇನಾಧಿಕಾರಿಗಳು ಮತ್ತು ಯೋಧರನ್ನು ಇತ್ತೀಚೆಗೆ ಆಹ್ವಾನಿಸಿತ್ತು. ಇಂಥ ವಿಶೇಷ ಆಹ್ವಾನ ನೀಡಿದ್ದು, ರಾಹುಲ್ ಮತ್ತು ಕಾರ್ತಿಕಾ ಎಂಬ ಯುವ ಜೋಡಿ. ನ.10ರಂದು ಅವರಿಬ್ಬರೂ ದಾಂಪತ್ಯ ಜೀವನ ಪ್ರವೇಶಿಸಿದ್ದರು.
ತಿರುವನಂತಪುರ ಸಮೀಪ ಇರುವ ಪಾಂಗೋಡೆ ಸೇನಾ ನೆಲೆಗೆ ತೆರಳಿ ಇಬ್ಬರು ಆಹ್ವಾನ ನೀಡಿದ್ದರು. ಸೇನಾ ನೆಲೆಯ ಅಧಿಕಾರಿಗಳೇ ನವಜೋಡಿಯನ್ನು ಆಹ್ವಾನಿಸಿದ್ದಾರೆ. ಸೇನಾನೆಲೆಯ ಕಮಾಂಡರ್ ಬ್ರಿ.ಲಲಿತ್ ಶರ್ಮಾ ದಂಪತಿಗೆ ಪುಷ್ಪಗುಚ್ಛ, ಕಿರು ಕಾಣಿಕೆ ನೀಡಿದ್ದಾರೆ.
“ನಾವು ನೆಮ್ಮದಿಯಲ್ಲಿ ಜೀವನ ನಡೆಸಲು ನೀವು ನಿಮ್ಮ ಜೀವನವನ್ನು ಪಣಕ್ಕಿಟ್ಟು ಹೋರಾಟ ನಡೆಸುತ್ತಿದ್ದೀರಿ. ನಿಮ್ಮಿಂದಾಗಿಯೇ ನಾವು ನೆಮ್ಮದಿಯಿಂದ ಜೀವಿಸುತ್ತಿದ್ದೇವೆ’ ಎಂದು ದಂಪತಿ ಕೈಬರಹದ ಆಹ್ವಾನದಲ್ಲಿ ಉಲ್ಲೇಖಿಸಿದ್ದರು. ಅವರ ಆಹ್ವಾನ ಜಾಲತಾಣಗಳಲ್ಲಿ ವೈರಲ್ ಆಗಿತ್ತು.
Related Articles